ಚುನಾವಣೆಯಲ್ಲಿ ಉಚಿತ ವಿದ್ಯುತ್‌, ವೈಫೈ ಘೋಷಣೆಗೆ ಬ್ರೇಕ್‌, ಇಂದು ಸುಪ್ರೀಂ ತೀರ್ಪು!

By Santosh NaikFirst Published Aug 23, 2022, 10:42 AM IST
Highlights

ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಬೇಕಾಬಿಟ್ಟುಸ ಉಚಿತ ಘೋಷಣೆಗಳನ್ನು ನೀಡುವ ಕುರಿತು ಕಿಡಿಕಾರಿರುವ ಸುಪ್ರೀಂ ಕೋರ್ಟ್‌, ಈ ಕುರಿತಾಗಿ ಕಳೆದ 15 ದಿನಗಳ ಅಂತರದಲ್ಲಿ ಎರಡು ಬಾರಿ ವಿಚಾರಣೆ ನಡೆಸಿದೆ. ಇಂದು ಈ ಪ್ರಕರಣದ ಕುರಿತಾಗಿ ತೀರ್ಪು ನೀಡುವ ಸಾಧ್ಯತೆ ಇದೆ. ಇದರ ನಡುವೆ ಚುನಾವಣೆಯ ವೇಳೆ ಉಚಿತ ವಿದ್ಯುತ್‌ ಹಾಗೂ ವೈಫೈ ಘೋಷಣೆಗಳಿಗೆ ಸುಪ್ರೀಂ ಕೋರ್ಟ್‌ ಬ್ರೇಕ್‌ ಹಾಕುವ ಸಾಧ್ಯತೆ ಇದೆ. ಮನ್ರೇಗಾ ರೀತಿಯ ಕಲ್ಯಾಣ ಕಾರ್ಯಕ್ರಮಗಳನ್ನು ಮಾತ್ರವೇ ಪಕ್ಷಗಳು ಘೋಷಣೆ ಮಾಡಬಹುದು ಎಂದು ಆದೇಶ ನೀಡುವ ಸಾಧ್ಯತೆ ಇದೆ.
 

ನವದೆಹಲಿ (ಆ.23): ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಘೋಷಣೆ ಮಾಡುವ ಬಿಟ್ಟಿ ಭಾಗ್ಯಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತನ್ನ ಅದೇಶ ನೀಡುವ ಸಾದ್ಯತೆ ಇದೆ. ಕಳೆದ ಕೆಲವು ದಿನಗಳಲ್ಲಿ ಭಾರತದಲ್ಲಿ ರಾಜಕೀಯ ಪಕ್ಷಗಳು ಉಚಿತ ಹಾಗೂ ಉಚಿತವಾಗಿ ನೀಡುವ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಕೇಂದ್ರವು ರಾಜ್ಯಗಳಿಗೆ ಉಚಿತ ಘೋಷಣೆಗಳಿಗೆ ಲಗಾಮು ಹಾಕುವಂತೆ ಮನವಿ ಮಾಡುತ್ತಿದೆ. ಅದೇ ಸಮಯದಲ್ಲಿ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ, ತಮಿಳುನಾಡಿನ ಡಿಎಂಕೆ ಮತ್ತು ಆಂಧ್ರದ ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಉಚಿತ ವಿಚಾರದಲ್ಲಿ ಕೇಂದ್ರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿವೆ. ಜನವರಿ 2022 ರಲ್ಲಿ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಉಚಿತ ಘೋಷಣೆಗಳ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಚುನಾವಣಾ ಸಮಯದಲ್ಲಿ ಉಚಿತ ಅಥವಾ ಉಚಿತ ಭರವಸೆಗಳನ್ನು ನೀಡಿ ತಪ್ಪು ದಾರಿಗೆಳೆಯುವ ಪ್ರಯತ್ನಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು. ಅಂತಹ ಪಕ್ಷಗಳ ಮಾನ್ಯತೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಶ್ವಿನಿ ಅವರ ಮಾತಿಗೆ ಸಹಮತ ಸೂಚಿಸಿರುವ ಕೇಂದ್ರ ಸರ್ಕಾರ, ಉಚಿತಗಳ ವ್ಯಾಖ್ಯಾನವನ್ನು ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತು. ಉಚಿತ ವಿತರಣೆಯನ್ನು ಮುಂದುವರಿಸಿದರೆ, ಅದು ದೇಶವನ್ನು “ಭವಿಷ್ಯದ ಆರ್ಥಿಕ ವಿಪತ್ತಿಗೆ” ಕರೆದೊಯ್ಯುತ್ತದೆ ಎಂದು ಕೇಂದ್ರ ಹೇಳಿದೆ.

ಇಲ್ಲಿಯವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅಗಿದ್ದೇನು?
ಉಚಿತ ಘೋಷಣೆಗಳ ವಿಚಾರವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಜೆಕೆ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದ ವಿಚಾರಣೆಯಲ್ಲಿ ಇಲ್ಲಿಯವರೆಗೂ ಆಗಿದ್ದೇನು ಎನ್ನುವ ಮಾಹಿತಿ..

Latest Videos

ಆಗಸ್ಟ್ 03, 2022: ಉಚಿತ ವಿಷಯಗಳ ಬಗ್ಗೆ ನಿರ್ಧರಿಸಲು ಸಮಿತಿಯನ್ನು ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು, ನೀತಿ ಆಯೋಗ್, ಹಣಕಾಸು ಆಯೋಗ, ಚುನಾವಣಾ ಆಯೋಗ, ಆರ್‌ಬಿಐ, ಸಿಎಜಿ ಮತ್ತು ರಾಜಕೀಯ ಪಕ್ಷಗಳು ಇರಬೇಕು ಎಂದು ಹೇಳಿತ್ತು

ಆಗಸ್ಟ್ 11, 2022: 'ಬಡವರಿಗೆ ಆಹಾರ ನೀಡುವ ಅವಶ್ಯಕತೆಯಿದೆ, ಆದರೆ ಜನರ ಕಲ್ಯಾಣವನ್ನು ಸಮತೋಲನಗೊಳಿಸುವ ಅವಶ್ಯಕತೆಯಿದೆ, ಏಕೆಂದರೆ ಆರ್ಥಿಕತೆಯು ಉಚಿತಗಳಿಂದ ಹಣವನ್ನು ಕಳೆದುಕೊಳ್ಳುತ್ತಿದೆ' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಉಚಿತ ಮತ್ತು ಕಲ್ಯಾಣದ ನಡುವೆ ವ್ಯತ್ಯಾಸವಿದೆ ಎಂದು ನಾವು ಒಪ್ಪುತ್ತೇವೆ.

ಆಗಸ್ಟ್ 17, 2022: 'ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆಗಳನ್ನು ನೀಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ... ಈಗ ಉಚಿತ ಕೊಡುಗೆಗಳು ಯಾವುವು ಎಂಬುದನ್ನು ನಿರ್ಧರಿಸಬೇಕು. ಎಲ್ಲರಿಗೂ ಆರೋಗ್ಯ, ಕುಡಿಯುವ ನೀರಿನ ಸೌಲಭ್ಯ... ಜೀವನವನ್ನು ಉತ್ತಮಗೊಳಿಸುವ ಎಂನರೇಗಾನಂಥ ಯೋಜನೆಗಳನ್ನು ಉಚಿತ ಎಂದು ಪರಿಗಣಿಸಬಹುದೇ?' ಈ ವಿಚಾರದಲ್ಲಿ ಎಲ್ಲಾ ಕಕ್ಷಿದಾರರು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ನ್ಯಾಯಾಲಯ ಹೇಳಿದೆ.

ಆಗಸ್ಟ್ 23, 2022: ಸುಪ್ರೀಂ ಕೋರ್ಟ್ ಈ ವಿಷಯವನ್ನು ಆಲಿಕೆ ಮಾಡಲಿದ್ದು, ಮತ್ತು ಕೆಲವು ಪ್ರಮುಖ ನಿರ್ಧಾರಗಳನ್ನು ನೀಡಬಹುದು ಎನ್ನಲಾಗಿದೆ.

ಚುನಾವಣೆಗಳಲ್ಲಿ ಯಾವುದೆಲ್ಲಾ ಉಚಿತವಾಗಿ ಘೋಷಿಸಬಹುದು ಅನ್ನೋದನ್ನ ನಾವೇ ಹೇಳ್ತೀವಿ: ಸುಪ್ರೀಂ ಕೋರ್ಟ್‌

ಅಯೋಗದಲ್ಲಿ ತಾನು ಇರೋದಿಲ್ಲ ಎಂದ ಚುನಾವಣಾ ಆಯೋಗ:ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಚುನಾವಣಾ ಆಯೋಗವು, ಪಕ್ಷಗಳು ಬಿಟ್ಟಿ ವಿಚಾರದಲ್ಲಿ ಅನುಸರಿಸುವ ನೀತಿಗಳನ್ನು ನಿಯಂತ್ರಿಸುವುದು ಚುನಾವಣಾ ಆಯೋಗದ ಅಧಿಕಾರದಲ್ಲಿಲ್ಲ ಎಂದು ಹೇಳಿದೆ. ಚುನಾವಣೆಗೆ ಮುನ್ನ ಉಚಿತ ಭರವಸೆ ನೀಡುವುದು ಅಥವಾ ಚುನಾವಣೆ ನಂತರ ನೀಡುವುದು ರಾಜಕೀಯ ಪಕ್ಷಗಳ ನೀತಿ ನಿರ್ಧಾರ. ಈ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸದೆ ಯಾವುದೇ ಕ್ರಮ ಕೈಗೊಳ್ಳುವುದು ಚುನಾವಣಾ ಆಯೋಗದ ಅಧಿಕಾರದ ದುರುಪಯೋಗವಾಗುತ್ತದೆ ಎಂದು ಹೇಳಿತ್ತು.

ನಿಮಗೆ ಸಿಗ್ತಿರೋ ಉಚಿತ ಭಾಗ್ಯಗಳ ಬಗ್ಗೆ ಹೇಳ್ತೀರಾ, ಮಖ್ಯ ನ್ಯಾಯಮೂರ್ತಿಗೇ ಪ್ರಶ್ನಿಸಿದ ಜಯಂತ್‌ ಚೌಧರಿ!

ರಾಜಕೀಯ ನಾಯಕರು ಹೇಳಿದ್ದೇನು?

ಪ್ರಧಾನಿ ಮೋದಿ: ಚುನಾವಣೆ ಸಮಯದಲ್ಲಿ ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿ ಉಚಿತ ಘೋಷಣೆಗಳು ಮಾಡುವುದು ರೇವ್ಡಿ ಸಂಸ್ಕೃತಿ.
ಅರವಿಂದ್‌ ಕೇಜ್ರಿವಾಲ್‌: ಉಚಿತವಾಗಿ ಶಿಕ್ಷಣ ನೀಡುವುದು, ವಿದ್ಯುತ್‌ ನೀಡುವುದು ಶ್ರೇಯೋಭಿವೃದ್ಧಿ. ಇದನ್ನು ರೇವ್ಡಿ ಸಂಸ್ಕೃತಿ ಅನ್ನೋದಕ್ಕೆ ಆಗೋದಿಲ್ಲ.
ವೈಎಸ್‌ಆರ್‌ ಕಾಂಗ್ರೆಸ್: ಚುನಾವಣೆಯ ಸಮಯದಲ್ಲಿ ಘೋಷಣೆಯಾಗುವ ಎಲ್ಲವನ್ನೂ ಉಚಿತ ಎಂದು ಹೇಳೋದಕ್ಕೆ ಸಾಧ್ಯವಿಲ್ಲ
ಡಿಎಂಕೆ: ಶ್ರೀಮಂತರ ಸಾಲವನ್ನು ಮನ್ನಾ ಮಾಡುವುದು ಉಚಿತ ಘೋಷಣೆಗಳ ಅಡಿಯಲ್ಲಿ ಬರೋದಿಲ್ಲವೇ? 

click me!