2.5 ಕೋಟಿ ವಸೂಲಿ ಮಾಡಿ ರೈಲು ಎಣಿಸುವ ಕೆಲಸ ನೀಡಿದ ವಂಚಕರು...!

By Kannadaprabha NewsFirst Published Dec 21, 2022, 7:08 AM IST
Highlights

ಭಾರತೀಯ ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತಮಿಳುನಾಡಿನ ಸುಮಾರು 28 ಮಂದಿ ಯುವಕರಿಂದ ವಂಚಕನೊಬ್ಬ 2.5 ಕೋಟಿ ರು.ಗೂ ಹೆಚ್ಚಿನ ಹಣ ವಸೂಲಿ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನವದೆಹಲಿ: ಭಾರತೀಯ ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತಮಿಳುನಾಡಿನ ಸುಮಾರು 28 ಮಂದಿ ಯುವಕರಿಂದ ವಂಚಕನೊಬ್ಬ 2.5 ಕೋಟಿ ರು.ಗೂ ಹೆಚ್ಚಿನ ಹಣ ವಸೂಲಿ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಕಾಂಕ್ಷಿಗಳಿಗೆ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಇವರನ್ನು ದೆಹಲಿ ರೈಲು ನಿಲ್ದಾಣದಲ್ಲಿ ಬಂದುಹೋಗುವ ರೈಲುಗಳು ಹಾಗೂ ಅವುಗಳ ಬೋಗಿಗಳನ್ನು ನಿತ್ಯ 8 ತಾಸು ಎಣಿಸುವ ಕೆಲಸ ಹೆಚ್ಚಲಾಗಿತ್ತು. ಇದೂ ಕೂಡ ರೈಲ್ವೆ ಇಲಾಖೆಯಲ್ಲಿನ ಕೆಲಸ ಎಂದು ಅವರನ್ನು ನಂಬಿಸಲಾಗಿತ್ತು. ತಾವು ಮೋಸ ಹೋಗಿದ್ದೇವೆ ಎಂದು ತಿಳಿಯದ ಯುವಕರು ಇದನ್ನು ತರಬೇತಿ ಎಂದು ತಿಳಿದು ಪ್ರತಿನಿತ್ಯ ವಿವಿಧ ಪ್ಲಾಟ್‌ಫಾರಂಗಳಲ್ಲಿ 8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಆದರೆ ಕೊನೆಗೆ ಅವರಿಗೆ ಇದು ಮೋಸ ಎಂದು ಗೊತಾಗಿದೆ.

ಕಳೆದ ಜೂನ್‌ ಜುಲೈ (July) ಅವಧಿಯಲ್ಲಿ ಇವರಿಂದ ಸುಮಾರು 2.5 ಕೋಟಿ ರು.ಗೂ ಹೆಚ್ಚಿನ ಹಣ (Money)ವಸೂಲಿ ಮಾಡಲಾಗಿದೆ. ಈ ಯುವಕರನ್ನು ವಂಚಕನಿಗೆ (Fraud) ಪರಿಚಯಸಿದ್ದ ಮಾಜಿ ಸೈನಿಕ 78 ವರ್ಷದ ಸುಬ್ಬುಸ್ವಾಮಿ (Subbu swami) ಎಂಬುವವರು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿಗೆ ದೂರು ನೀಡಿದ ಸುಬ್ಬುಸ್ವಾಮಿ, ಕೆಲಸ ಹುಡುಕುತ್ತಿದ್ದ ಈ ಯುವಕರನ್ನು ಉತ್ತರ ರೈಲ್ವೆಯಲ್ಲಿ (North Railway) ಉಪ ಆಯಕ್ತ ಎಂಬ ನಕಲಿ ಗುರುತನ್ನು ಹೊಂದಿದ್ದ ವಿಕಾಸ್‌ ರಾಣಾ (Vikas Rana) ಎಂಬ ವ್ಯಕ್ತಿಗೆ ಪರಿಚಯಿಸಿದ್ದಾರೆ.  ವಿಕಾಸ್‌ ರಾಣಾ ತರಬೇತಿ ಹೆಸರಿನಲ್ಲಿ ಯುವಕರನ್ನು ದೆಹಲಿ ನಿಲ್ದಾಣದಲ್ಲಿ (delhi) ರೈಲು ಎಣಿಸಲು ನೇಮಿಸಿದ್ದಾನೆ, ಇವರಿಂದ 2 ಲಕ್ಷದಿಂದ 24 ಲಕ್ಷ ರು.ವರಗೆ ವಿವಿಧ ಮೊತ್ತದ ಹಣ ವಸೂಲಿ ಮಾಡಿದ್ದ ಎಂದು ದೂರಲಾಗಿದೆ.

ಕೆಎಂಎಫ್‌ನಲ್ಲಿ ನಕಲಿ ಉದ್ಯೋಗ ಆಮಿಷ: ಕೋಟಿ ರು. ಮೊತ್ತ ವಂಚಿಸಿದ ವಂಚಕ ಸೆರೆ

ಅಲ್ಲದೇ ಸುಬ್ಬುಸ್ವಾಮಿ ಸಹ ತಾನು ಸಹ ಗೊತ್ತಿಲ್ಲದೇ ಈ ವಂಚನೆ ಬಲೆಗೆ ಬಿದ್ದಿರುವುದಾಗಿ ಹೇಳಿದ್ದಾರೆ. ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕನಿಗಾಗಿ ಹುಡುಕಾಟ ನಡೆಸಿದ್ದಾರೆ.

Cyber Crime Bengaluru: ಇನ್ಫೋಸಿಸ್‌ನಲ್ಲಿ ಉದ್ಯೋಗದ ಆಸೆ ತೋರಿಸಿ ರೂ. 4.32 ಲಕ್ಷ ವಂಚನೆ!

click me!