Lok Sabha Elections 2024: 'ಬಿಹಾರಿ ಬಾಬುಗಳ‌' ಎಲೆಕ್ಷನ್ ಲಡಾಯಿ: ಈಶಾನ್ಯ, ಪೂರ್ವ ದೆಹಲಿ ಕ್ಷೇತ್ರ ಹೇಗಿದೆ?

By Suvarna News  |  First Published May 20, 2024, 7:29 PM IST

ಆರನೇ ಹಂತದಲ್ಲಿ ನಡೆಯಲಿರುವ ಮತದಾನಕ್ಕೆ ದೆಹಲಿಗರು ಸಜ್ಜಾಗುತ್ತಿದ್ದಾರೆ. ದೆಹಲಿಯ ಏಳು ಕ್ಷೇತ್ರಗಳಿಗೆ ಮೇ 25 ರಂದು ಚುನಾವಣೆ ನಡೆಯಲಿದೆ.


ಡೆಲ್ಲಿ ಮಂಜು

ನವದೆಹಲಿ (ಮೇ.20): ಆರನೇ ಹಂತದಲ್ಲಿ ನಡೆಯಲಿರುವ ಮತದಾನಕ್ಕೆ ದೆಹಲಿಗರು ಸಜ್ಜಾಗುತ್ತಿದ್ದಾರೆ. ದೆಹಲಿಯ ಏಳು ಕ್ಷೇತ್ರಗಳಿಗೆ ಮೇ 25 ರಂದು ಚುನಾವಣೆ ನಡೆಯಲಿದೆ.

Tap to resize

Latest Videos

ಕ್ಷೇತ್ರ ಹೇಗಿದೆ?
ಈಶಾನ್ಯ ದೆಹಲಿ:
ತೀವ್ರ ಕುತೂಹಲ ಇರುವ ಕ್ಷೇತ್ರಗಳಲ್ಲಿ ಇದು ಒಂದು. ಇಬ್ಬರು 'ಬಿಹಾರಿ ಬಾಬು'ಗಳ ಎಲೆಕ್ಷನ್ ಲಡಾಯಿ ನೋಡಲು ಮತದಾರರು ಉತ್ಸುಕರಾಗಿದ್ದಾರೆ.  ಈಶಾನ್ಯ ದೆಹಲಿ ಕ್ಷೇತ್ರವನ್ನು ಇಂಡಿಯಾ ಘಟಬಂಧನ್ ಮೈತ್ರಿಯ ಅಂತೆ ಕಾಂಗ್ರೆಸ್ ಪಕ್ಷಕ್ಕೆ ಆಮ್ ಆದ್ಮಿ ಪಕ್ಷ ಬಿಟ್ಟು ಕೊಟ್ಟಿದೆ.  ಅದರಂತೆ ಚುನಾವಣಾ ಕಣ ದಿನದಿಂದ ದಿ‌ನಕ್ಕೆ ರಂಗೇರುತ್ತಿದೆ. ಹೀಗೆ ರಂಗೇರಲು ಕಾರಣ ಇಬ್ಬರು 'ಬಿಹಾರಿ ಬಾಬು'ಗಳು. ಈಶಾನ್ಯದ ದೆಹಲಿ ಅಂದ್ರೆ ಉದ್ಯೋಗ, ಹೊಟ್ಟೆ ಪಾಡಿಗಾಗಿ ವಲಸೆ ಬಂದಿರುವವರೇ ಈ ಕ್ಷೇತ್ರದಲ್ಲಿ ಹೆಚ್ಚು ಮಂದಿ ಇದ್ದಾರೆ . 

ರಾಷ್ಟ್ರ ರಾಜಧಾನಿಯಲ್ಲಿ ಚುನಾವಣಾ ಕಲರವ: 7 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲೊರ‍್ಯಾರು? ಸೋಲರ‍್ಯಾರು?

ಅದರಲ್ಲೂ ಬಿಹಾರ, ಯುಪಿಯಿಂದ ವಲಸೆ ಬಂದವರೇ ಜಾಸ್ತಿ. ಇದನ್ನು ಮನಗಂಡ ಎರಡೂ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್  ಇಬ್ಬರೂ ಬಿಹಾರಿ ಬಾಬುಗಳನ್ನು ಕಣಕ್ಕೆ ಇಳಿಸಿವೆ. ದೆಹಲಿಯ ಆರು ಮಂದಿಯ ಟಿಕೆಟ್ ಬದಲಾಯಿಸಿದರೂ ಬಿಜೆಪಿ ಹೈಕಮಾಂಡ್,  ಈಶಾನ್ಯ ದೆಹಲಿ ಕ್ಷೇತ್ರದ ಅಭ್ಯರ್ಥಿ ಮನೋಜ್ ತಿವಾರಿಗೆ ಮಾತ್ರ ಟಿಕೆಟ್ ನೀಡಿದೆ. ಭೋಜ್ ಪುರಿ  ನಾಯಕ ನಟ ತಿವಾರಿ. ಈ ಬಿಹಾರಿ ಬಾಬುಗೆ ಟಕ್ಕರ್ ನೀಡಲು ಕಾಂಗ್ರೆಸ್ ಕೂಡ ಅದೇ ಬಿಹಾರಿ ಬಾಬುನನ್ನು ತಂತ್ರವನ್ನು ಅನುಸರಿಸಿದೆ.  

ನವದೆಹಲಿಯ ಜೆಎನ್ ಯು ಮಾಜಿ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ರನ್ನು ಕಾಂಗ್ರೆಸ್  ಅಖಾಡಕ್ಕೆ ಇಳಿಸಿದೆ. ಈಶಾನ್ಯ ದೆಹಲಿ, ಕೇಂದ್ರ ದೆಹಲಿ, ಶಹದಾರ್ ಜಿಲ್ಲೆಯ ಭಾಗಗಳು ಈ ಕ್ಷೇತ್ರದ ವ್ಯಾಪ್ತಿಗೆ ಸೇರಲಿವೆ. ಇದೇ ಕ್ಷೇತ್ರದಿಂದ ಈಗಾಗಲೇ ಎರಡು ಬಾರಿ ಗೆದ್ದಿರುವ ಮನೋಜ್ ತಿವಾರಿ ಹ್ಯಾಟ್ರಿಕ್ ಗೆಲುವಿಗೆ ಯತ್ನ ನಡೆಸುತ್ತಿದ್ದಾರೆ. ಇತ್ತ ಅಖಾಡದಲ್ಲಿರುವ ಕನ್ನಯ್ಯ ಕುಮಾರ್, ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ. ತಿವಾರಿ ಅವರ 10 ವರ್ಷಗಳ ಆಡಳಿತವನ್ನು ತೀವ್ರ ಟೀಕೆ ಮಾಡುತ್ತಾ, ಅವರು ( ಮನೋಜ್ ತಿವಾರಿ) ಶ್ರೀಮಂತ ಅಭ್ಯರ್ಥಿ, ನಾನು ಬಡಪಾಯಿ.  ನಮ್ಮ ಬಳಿ ಕರೆನ್ಸಿ ಇಲ್ಲ. ಬದಲಿಗೆ ಕರೇಜ್ ಇದೆ ಎಂದು ಗುಡುಗಿದ್ದಾರೆ.

ಪೂರ್ವ ದೆಹಲಿ: ಪೂರ್ವ ದೆಹಲಿ ಬಹಳ ಕುತೂಹಲ ಕ್ಷೇತ್ರ. ಯಮುನಾ ನದಿ ಎರಡೂ ಬದಿ ಇದರ ಮತಕ್ಷೇತ್ರ ವ್ಯಾಪ್ತಿ ಬರಲಿದೆ. ರಾಜಧಾನಿಯಲ್ಲಿ ದೊಡ್ಡ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಪೂರ್ವ ದೆಹಲಿಯಲ್ಲಿ ಹೆಚ್ಚಾಗಿ ಪಂಜಾಬ್ ಭಾಷಿಕರು ಇದ್ದಾರೆ.  ಅಲ್ಲದೇ ಹೆಚ್ಚು ಕೈಗಾರಿಕಾ ಪ್ರದೇಶಗಳು ಇಲ್ಲಿವೆ. ಇಂಡಿಯಾ ಮೈತ್ರಿಕೂಟ ಆಮ್ ಆದ್ಮಿ ಪಕ್ಷಕ್ಕೆ ಈ ಕ್ಷೇತ್ರ ಬಿಟ್ಟು ಕೊಟ್ಟಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಅಂಥ ಮತಗಳು ಚದರಿದ್ದವು. ಈ ಬಾರಿ ಆಪ್ ಮತ್ತು ಕಾಂಗ್ರೆಸ್ ಒಟ್ಟಾಗಿ ಸ್ಪರ್ಧೆ ಮಾಡಿವೆ. ಬಿಜೆಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದೆ.

ಬಿಜೆಪಿಯಿಂದ ಹರ್ಷ ಮಲ್ಹೋತ್ರ V/S.ಆಫ್ ನಿಂದ ಕುಲದೀಪ್ ಕುಮಾರ್
ಆಪ್ ಸ್ಪರ್ಧಿ ಕುಲದೀಪ್ ಕುಮಾರ್ ಸ್ವಚ್ಚ ಕಾರ್ಮಿಕರೊಬ್ಬ ಪುತ್ರ. ಪ್ರಸ್ತುತ ಆಪ್ ಪಕ್ಷ ದಿಂದ ಕೊಂಡ್ಲಿ ಕ್ಷೇತ್ರದ ಶಾಸಕ. ಸ್ವಚ್ಛತಾ ಕಾರ್ಮಿಕನ ಮಗ ಎನ್ನುವ ಕಾರಣಕ್ಕೆ ಎರಡು ಬಾರಿ ಶಾಸಕರಾಗಿದ್ದಾರೆ. ಈಗ ಸಂಸತ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ.  ಹರ್ಷ ಮಲ್ಹೋತ್ರಾ - ಬಿಜೆಪಿ ಸಾಮಾನ್ಯ ಕಾರ್ಯಕರ್ತ, ಸಾಲದ್ದಕ್ಕೆ ಗೌತಮ್ ಗಂಭೀರ್ ಅವರಿಗೆ ಟಿಕೆಟ್ ಕಟ್ ಮಾಡಿ ಹರ್ಷ ಅವರಿಗೆ ಟಿಕೆಟ್ ನೀಡಿತು ಬಿಜೆಪಿ. 

Delhi Lok Sabha Constituency: ಹೇಗಿದೆ ಚಾಂದಿನಿ ಚೌಕ್, ನವದೆಹಲಿ ಲೋಕಸಭಾ ಕ್ಷೇತ್ರದ ಲೆಕ್ಕಾಚಾರ?

ಕ್ಷೇತ್ರದಲ್ಲಿ ವಿರೋಧಿ ಅಲೆ ಎನ್ನುತ್ತಿರುವಾಗಲೇ ಗಂಭೀರ್ ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ರು. ಹಾಗಾಗಿ ಹೊಸ ಮುಖಕ್ಕೆ ಅವಕಾಶ ಸಿಗ್ತು. ಹರ್ಷ ಮಲ್ಹೋತ್ರ ಅವರು, ದೆಹಲಿ ಬಿಜೆಪಿ ಘಟಕದ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೌನ್ಸಿಲರ್ ನಿಂದ ಹಿಡಿದು ಪೂರ್ವ ದೆಹಲಿ ಪಾಲಿಕೆಯ ಮೇಯರ್ ಹುದ್ದೆಯ ತನಕ  ಅಲಂಕರಿಸಿದ್ದಾರೆ. ಇವರ ಪಕ್ಷಕ್ಕಾಗಿ ದುಡಿದಿದ್ದನ್ನು ಗಮನಿಸಿದ ಬಿಜೆಪಿ ಹೈಕಮಾಂಡ್, ಈ ಬಾರಿ ಟಿಕೆಟ್ ನೀಡಿದೆ.

click me!