ಲಕ್ನೌ(ನ.12): ಚಿತ್ರಕೋಟ್ ಸಾಮೂಹಿಕ ಅತ್ಯಾಚಾರ ಪ್ರಕರಣ(Chitrakoot gang rape case) ಸಂಬಂಧ ಉತ್ತರ ಪ್ರದೇಶದ ಮಾಜಿ ಸಚಿವ, ಅಖಿಲೇಶ್ ಯಾದವ್(Akhilesh Yadav) ಆಪ್ತ ಗಾಯತ್ರಿ ಪ್ರಸಾದ್ ಪ್ರಜಾಪತಿಗೆ ಲಕ್ನೌ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಜಾಪತಿ(Gayatri Prasad Prajapati) ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕೋರ್ಟ್ ತೀರ್ಪು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿಗೆ ತೀವ್ರ ಹಿನ್ನಡೆ ತಂದಿದೆ.
ಗಾಯತ್ರಿ ಪ್ರಸಾದ್ ಪ್ರಜಾಪತಿ, ಅಖಿಲೇಶ್ ಯಾದವ್ ಸರ್ಕಾರದಲ್ಲಿ ಪ್ರಮುಖ ಖಾತೆಯಾದ ಸಾರಿಗೆ ಹಾಗೂ ಗಣಿಗಾರಿಗೆ ಸಚಿವರಾಗಿದ್ದರು. 2017ರಲ್ಲಿ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅರೆಸ್ಟ್ ಆಗಿದ್ದರು. ಈ ಪ್ರಕರಣ ದೇಶದಲ್ಲಿ ಭಾರಿ ಸದ್ದು ಮಾಡಿತ್ತು. ಕಾರಣ ಅತ್ಯಾಚಾರ ಕುರಿತು ದೂರು ನೀಡಿದಜ್ದರು. ಉತ್ತರ ಪ್ರದೇಶ ಪೊಲೀಸರು(Uttar Pradesh Police) ದೂರು ದಾಖಲಿಸಿಕೊಳ್ಳದೆ ಮಹಿಳೆ ಹಾಗೂ ಅಪ್ರಾಪ್ತೆ ವಯಸ್ಸಿನ ಬಾಲಕಿಯನ್ನು ಸತಾಯಿಸಿತ್ತು.
Crime News; ಹೆತ್ತ ತಾಯಿ ಮೇಲೆ ಎರಗಿದ ಕಾಮುಕ... ಎಲ್ಲವೂ ಡ್ರಗ್ಸ್ ಘಾಟು!
ಗೌತಮಪಲ್ಲಿ ಠಾಣೆಯಲ್ಲಿ ಮಹಿಳೆ ದೂರು ಸ್ವೀಕರಿಸಿದ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ತಕ್ಷಣ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿತು. ಸುಪ್ರೀಂ ಕೋರ್ಟ್ ಸೂಚನೆ ಬಳಿಕ ಫೆಬ್ರವರಿ 18, 2017ರಲ್ಲಿ ಗಾಯತ್ರಿ ಪ್ರಜಾಪತಿ ಮೇಲೆ ದೂರು ದಾಖಲಾಯಿತು. ಬಳಿಕ 2017ರ ಮಾರ್ಚ್ ತಿಂಗಳಲ್ಲಿ ಗಾಯತ್ರಿ ಪ್ರಸಾದ್ ಪ್ರಜಾಪತಿ ಬಂಧನಕ್ಕೊಳಗಾಗಿದ್ದರು.
ಮಹಿಳೆ ನೀಡಿದ ದೂರಿನಲ್ಲಿ 2014ರಲ್ಲಿ ಗಾಯತ್ರಿ ಪ್ರಸಾದ್ ಪ್ರಜಾಪತಿ ನಿರಂತರವಾಗಿ ನನ್ನ ಮೇಲೆ ಅತ್ಯಾಚರ ಎಸಗಿದ್ದಾರೆ. 2016ರಲ್ಲಿ ನನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ನನ್ನ ಹಾಗೂ ಮಗಳ ಮೇಲೆ ಜೀವ ಬೆದರಿಕೆ ಹಾಕಿದ್ದರು. ಪ್ರಭಾವ ಬಳಸಿ ನಮ್ಮ ಧನಿಯನ್ನು ಅಡಗಿಸಲು ಯತ್ನಿಸಿದರು ಎಂದು ದೂರಿನಲ್ಲಿ ದಾಖಲಿಸಿದ್ದರು.
ಚಿತ್ರಕೋಟ್ ಅತ್ಯಾಚಾರ ಪ್ರಕರಣದಲ್ಲಿ ಪ್ರಜಾಪತಿ ಜೊತೆ ಇತರ ಏಳು ಮಂದಿ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪ್ರಜಾಪತಿ ಹಾಗೂ ಇತರ ಇಬ್ಬರಾದ ಅಶೋಕ್ ತಿವಾರಿ ಹಾಗೂ ಆಶಿಶ್ ಶುಕ್ಲಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆಗೆ 2 ಲಕ್ಷ ರೂಪಾಯಿ ದಂಡ ಹಾಕಿ ನ್ಯಾಯಮೂರ್ತಿ ಪವನ್ ಕುಮಾರ್ ರೈ ತೀರ್ಪು ಪ್ರಕಟಿಸಿದ್ದಾರೆ.
ಪ್ರಸಾದವೆಂದು ನಿದ್ದೆ ಮಾತ್ರೆ ಕೊಡ್ತಿದ್ದ 'ದೇವಮಾನವ' ಮಾಡ್ತಿದ್ದ ಹೀನ ಕೆಲಸ!
2017ರಿಂದ ಜೈಲಿನಲ್ಲಿರುವ ಗಾಯತ್ರಿ ಪ್ರಸಾದ್ ಪ್ರಜಾಪತಿ ಮೇಲೆ ಹಲವು ಪ್ರಕರಣಗಳಿವೆ. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ಸಚಿವರಾಗಿ ಭ್ರಷ್ಟಾಚಾರ ನಡೆಸಿದ ಆರೋಪವೂ ಪ್ರಜಾಪತಿ ಮೇಲಿದೆ. 2016ರಲ್ಲಿ ಗಣಿಕಾರಿಗೆ ಸಚಿವರಾಗಿದ್ದ ವೇಳೆ ಅಕ್ರಮ ಗಣಿಗಾರಿಕೆ ನಡೆಸಿದ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಈ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ ಎಂದಿತ್ತು.
ಗಾಯತ್ರಿ ಪ್ರಸಾದ್ ಪ್ರಜಾಪತಿ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆಪ್ತರಾಗಿದ್ದರು. ಪ್ರಜಾಪತಿ ಅತ್ಯಾಚಾರ ಪ್ರಕರಣ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಆಡಳಿತದಲ್ಲಿತ್ತು. 2012ರಿಂದ 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಸರ್ಕಾರದ ಮೇಲೆ ಭ್ರಷ್ಟಾರಾ, ಗೂಂಡಾಗಿರಿ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿತ್ತು. ಇದರಲ್ಲಿ ಗಾಯತ್ರಿ ಪ್ರಜಾಪತಿ ಕೊಡುಗೆಯೂ ಅಪಾರವಾಗಿದೆ. ಹೀಗಾಗಿ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
8 ತಿಂಗಳ ಸಲುಗೆ, ಶಿಕ್ಷಕಿ ಅಪಹರಿಸಿ ಅತ್ಯಾಚಾರ ಎಸೆಗಿದ ಫೇಸ್‌ಬುಕ್ ಗೆಳೆಯ!