ಉತ್ತರ ಪ್ರದೇಶದಲ್ಲಿ ಕೋವಿಡ್-19(COVID19) ರೋಗನಿರೋಧಕ ಶಕ್ತಿ ಹೆಚ್ಚುತ್ತಿದ್ದರೂ ರಾಜ್ಯದ ಉನ್ನಾವೋ ಜಿಲ್ಲೆಯ ಜನರು ನಕಲಿ ವ್ಯಾಕ್ಸಿನೇಷನ್ ಬಗ್ಗೆ ಈಗ ದೂರುಗಳು ಕೇಳಿ ಬರುತ್ತಿದೆ. ರಿಜಿಸ್ಟರ್ ಆಗ ವ್ಯಾಕ್ಸೀನ್(Vaccine) ಡೋಸ್‌ಗಳ ದೊಡ್ಡ ಸ್ಟಾಕ್ ಕಂಡುಬಂದಿದೆ.
ಹೌದು. ಹಲವು ಕಡೆ ಲಸಿಕೆ ವಿಚಾರದಲ್ಲಿ ವಂಚನೆ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಈಗ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಮಿಯಾಗಂಜ್‌ನಲ್ಲಿ ಬೃಹತ್ ಪ್ರಮಾಣದ ಡೋಸ್‌ನಲ್ಲಿ ವಂಚನೆಯಾಗಿರುವುದು ಬಯಲಾಗಿದೆ. ಮಿಯಾಗಂಜ್ ಪ್ರದೇಶದಲ್ಲಿ 3000 ಕೊರೋನಾ ವ್ಯಾಕ್ಸೀನ್ ಡೋಸ್‌ಗಳು ಸಂಶಯಾಸ್ಪದವಾದ ರೀತಿಯಲ್ಲಿ ಪತ್ತೆಯಾಗಿವೆ.
undefined
ಇಷ್ಟು ಬೃಹತ್ ಪ್ರಮಾಣದ ಲಸಿಕೆಯನ್ನು ನಿರ್ಲಕ್ಷ್ಯದಿಂದ ಕೋಲ್ಡ್ ಸ್ಟೋರೇಜ್‌ನಿಂದ ಹೊರಗಿರಿಸಲಾಗಿದ್ದು ಜನರಿಗೆ ಲಸಿಕೆ ಪಡೆದಿರುವುದಾಗಿ ಸುಳ್ಳು ಮೆಸೇಜ್‌ಗಳು ಬರುತ್ತಿವೆ. ಮಿಯಾಗಂಜ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೀಡಲಾದ 3000 ಲಸಿಕೆಗಳು ಅಲ್ಲಿನ ಖಾಸಗಿ ಉದ್ಯೋಗಿಯ ಮನೆಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಕಂಡುಬಂದಿದೆ. ವ್ಯಾಕ್ಸೀನ್ ಕೋಲ್ಡ್ ಸ್ಟೋರೆಜ್‌ನಲ್ಲಿ ಇಟ್ಟಿರಲಿಲ್ಲ.
ಕೊರೊನಾ : ವಿಶ್ವಕ್ಕೆ ಈಗಲೂ ಡೆಲ್ಟಾ ಕಂಟಕ
ಇದೀಗ ಅಲ್ಲಿನ ಸ್ಥಳೀಯ ಆಡಳಿತದಲ್ಲಿ ಈ ಕುರಿತು ಭಾರೀ ವಿವಾದ ಸೃಷ್ಟಿಯಾಗಿದೆ. ಸ್ಥಳೀಯ ಸಫೀಪುರದ ಬಿಜೆಪಿ ಶಾಸಕ ಬಂಬಲಾಲ್ ದಿವಾಕರ್ ಸ್ಥಳಕ್ಕೆ ಆಗಮಿಸಿ ಉನ್ನತಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಿಎಂ ಕಚೇರಿಗೆ ಈ ಬಗ್ಗೆ ದೂರು ನೀಡಲಾಗಿದ್ದು ಶೀಘ್ರ ವಂಚಕರನ್ನು ಬಂಧಿಸಲು ಸೂಚಿಸಲಾಗಿದೆ. ಘಟನೆ ಬಗ್ಗೆ ಸಿಎಂ ಕಚೇರಿಯಿಂದ ತನಿಖೆಗೆ ಆದೇಶಿಸಲಾಗಿದೆ.
ಐಒ ಸಂಗೀತ್ ಪಟೇಲ್, ಲಸಿಕೆ ಪೆಟ್ಟಿಗೆಗಳನ್ನು ನಿರ್ವಹಿಸುತ್ತಿದ್ದ ಸ್ಟೋರ್ ಹೆಲ್ಪರ್ ರಾಣಿಗೆ ಸಿಎಚ್‌ಸಿ ಅಧೀಕ್ಷಕ ಅಫ್ತಾಬ್ ಅಹ್ಮದ್ ಅವರು ಲಸಿಕೆ ಡೋಸ್‌ಗಳ ಬಾಕ್ಸ್‌ಗಳನ್ನು ಅವರ ಸ್ಥಳದಲ್ಲಿ ಇಡುವಂತೆ ಹೇಳಿದ್ದಾರೆ. ಈ ಡೋಸ್ ಯಾವ ಬಳಕೆಗೆ ಹಾಕಲಾಗಿದೆ ಎಂಬುದರ ಕುರಿತು ತನಗೆ ತಿಳಿದಿಲ್ಲ. ಅಧೀಕ್ಷಕರ ಆದೇಶವನ್ನು ಮಾತ್ರ ಅನುಸರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ದೀಪಾವಳಿ ಮುಗಿಯುತ್ತಿದ್ದಂತೆ ಬೆಂಗ್ಳೂರಲ್ಲಿ ಕೊರೋನಾ ಹೆಚ್ಚಳ..!
ಸಿಎಚ್‌ಸಿಯಲ್ಲಿ ನಡೆದ ವ್ಯಾಕ್ಸಿನೇಷನ್ ನಕಲಿ ದಾಖಲೆ ನೀಡುವಂತೆ ಅಹ್ಮದ್ ತನ್ನ ಮೇಲೆ ಒತ್ತಡ ಹೇರುತ್ತಿದ್ದನಲ್ಲದೆ, ಆಕ್ಷೇಪಿಸಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ರಾಣಿ ಆರೋಪಿಸಿದ್ದಾರೆ.
ಮಿಯಾಗಂಜ್ ಸಿಎಚ್‌ಸಿಯಲ್ಲಿದ್ದ ಸೂಪರಿಂಟೆಂಡೆಂಟ್ ಸ್ಥಳದಿಂದ ಪರಾರಿಯಾಗಿದ್ದರು. ಅವರ ಎರಡೂ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು. ಫಲಾನುಭವಿಗೆ ಎರಡನೇ ಡೋಸ್ ನೀಡದಿದ್ದರೂ ಲಸಿಕೆ ಸಿಕ್ಕಿದೆ ಎಂಬ ಸಂದೇಶ ಬಂದ ನಂತರ ನಕಲಿ ಲಸಿಕೆ ದಂಧೆ ಬೆಳಕಿಗೆ ಬಂದಿದೆ.
ಮೊದಲ ಡೋಸ್ ತೆಗೆದುಕೊಂಡ 42 ವರ್ಷದ ಉಮೇಶ್ ಚಂದ್ರಗೆ, ನವೆಂಬರ್ 7 ರಂದು ಎರಡನೇ ಶಾಟ್ ನೀಡಲಾಗುವುದು ಎಂದು ಹೇಳಿದ್ದರು. ಆದರೆ ಅವರು ಕೇಂದ್ರವನ್ನು ತಲುಪುವ ಮೊದಲೇ ಅವರ ಫೋನ್‌ಗೆ ಎರಡನೇ ಡೋಸ್ ನೀಡಲಾಗಿದೆ ಎಂಬ ಸಂದೇಶ ಬಂದಿದೆ.
ಭಾರತದ ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್‌ನ (Bharath Biotech) ಕೋವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದ ಬೆನ್ನಲ್ಲೇ, ಮಕ್ಕಳಿಗೆ ನೀಡಲು ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸಿನ್ (Covaxin) ಲಸಿಕೆಗೂ ತ್ವರಿತ ಅನುಮೋದನೆ ಸಾಧ್ಯತೆ ದಟ್ಟವಾಗಿದೆ ಎಂದು ಡಬ್ಲ್ಯೂಎಚ್‌ಒ (WHO) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ (Soumya Swaminathan) ಹೇಳಿದ್ದಾರೆ. ಮಕ್ಕಳಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿಗಾಗಿ ಈಗ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಸರಿಯಾದ ದತ್ತಾಂಶವನ್ನು ಒದಗಿಸಿದರೆ ಶೀಘ್ರವೇ ಮಕ್ಕಳಿಗೆ ನೀಡಲು ಮಾನ್ಯತೆ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಯಾವುದೇ ಲಸಿಕೆಗೆ ಮಾನ್ಯತೆ ನೀಡಲು 50ರಿಂದ 60 ದಿನಗಳು ಬೇಕಾಗುತ್ತದೆ. ಕೆಲವೊಂದು ಲಸಿಕೆಗಳಿಗೆ ಮಾನ್ಯತೆ ನೀಡಲು 165 ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೋವ್ಯಾಕ್ಸಿನ್‌ಗೆ 90ರಿಂದ 100 ದಿನಗಳ ಅವಧಿಯಲ್ಲಿ ಮಾನ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.