ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಕೊರೋನಾ; ಏಮ್ಸ್ ಆಸ್ಪತ್ರೆ ದಾಖಲು!

By Suvarna NewsFirst Published Apr 19, 2021, 7:12 PM IST
Highlights

ಕೊರೋನಾ ವೈರಸ್ ಇದೀಗ ಯಾರನ್ನೂ ಬಿಡುತ್ತಿಲ್ಲ. ಭಾರತದ ಕೊರೋನಾ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಕೊರೋನಾ ನಿಯಂತ್ರಣ ಕುರಿತು ನರೇಂದ್ರ ಮೋದಿಗೆ ಪತ್ರ ಬರೆದ ಬೆನ್ನಲ್ಲೇ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಕೊರೋನಾ ವಕ್ಕರಿಸಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಏ.18): ದೇಶದ ಕೊರೋನಾ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ್ದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೊರೋನಾ ನಿಯಂತ್ರಣಕ್ಕೆ 5 ಸಲಹೆ ನೀಡಿದ ಬೆನ್ನಲ್ಲೇ ಮನ್‌ಮೋಹನ್ ಸಿಂಗ್‌ಗೆ ಕೊರೋನಾ ತಗುಲಿರುವುದು ದೃಢಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಧಾನಿ ಮೋದಿಗೆ ಮನ್‌ಮೋಹನ್ ಸಿಂಗ್ ಪತ್ರ; ಕೊರೋನಾ ನಿಯಂತ್ರಣಕ್ಕೆ ಹೇಳಿದ್ರು 5 ಸೂತ್ರ!

ಏಮ್ಸ್ ಆಸ್ಪತ್ರೆಯ ಟ್ರೌಮ ಕೇಂದ್ರದಲ್ಲಿ ಮನ್‌ಮೋಹನ್ ಸಿಂಗ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಮನ್‌ಮೋಹನ್ ಸಿಂಗ್ ಶೀಘ್ರ ಚೇತರಿಕೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಮಾಜಿ ಪ್ರಧಾನಿ ಡಾ.ಮನ್‌ಮೋಹನ್ ಸಿಂಗ್ ಜಿ ಅವರಿಗೆ ಉತ್ತಮ ಆರೋಗ್ಯ ಹಾಗೂ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ಇನ್ನು  ಕಾಂಗ್ರೆಸ್ ಮುಖಂಡರು, ಹಲವು ಗಣ್ಯರು ಹಾಗೂ ದೇಶದ ಜನತೆ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. 

 

Wishing our former Prime Minister, Dr. Manmohan Singh Ji good health and a speedy recovery.

— Narendra Modi (@narendramodi)

ಮನ್‌ಮೋಹನ್ ಸಿಂಗ್‌ಗೆ ಕೊರೋನಾ ಪಾಸಿಟೀವ್ ಆಗೋ ಮೂಲಕ ದೇಶದ ಇಬ್ಬರು ಮಾಜಿ ಪ್ರಧಾನಿಗಳಿಗೆ ಕೊರೋನಾ ಅಂಟಿಕೊಂಡಿದೆ. ಇದಕ್ಕೂ ಮೊದಲು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಅವರಿಗೆ ಕೊರೋನಾ ತಗುಲಿತ್ತು. ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ ದೇವೇಗೌಡ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣಮುಖರಾಗಿರುವ ದೇವೇಗೌಡ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡಡೆಯುತ್ತಿದ್ದಾರೆ.

ಲಸಿಕೆ ಪ್ರಶ್ನಿಸಿದ್ದ ಕಾಂಗ್ರೆಸ್‌ಗೆ ನಿಮ್ಮ ಪತ್ರ ಸೂಕ್ತ; ಡಾ.ಸಿಂಗ್‌‌ಗೆ ಹರ್ಷವರ್ಧನ್ ತಿರುಗೇಟು!..

ಕೊರೋನಾ ವೈರಸ್ ಹಾಗೂ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಮನ್‌ಮೋಹನ್ ಸಿಂಗ್ ನಿನ್ನೆ(ಏ.18) ಪತ್ರ ಬರೆದಿದ್ದರು. ಕೊರೋನಾ ಲಸಿಕೆ, ವಿತರಣೆ ಕುರಿತು ಪಾರದರ್ಶಕತೆ ಬೇಕು ಎಂದು ಪತ್ರದಲ್ಲಿ ಹೇಳಿದ್ದರು. ಇನ್ನು ಲಸಿಕೆ ನೀಡುವಿಕೆ ಸಂಖ್ಯೆ ಕುರಿತು ಗಮನಹರಿಸಿದೆ ಶೇಕಡಾವಾರು ತಿಳಿಸಬೇಕು ಎಂದಿದ್ದರು. ಡಾ.ಸಿಂಗ್ ಪತ್ರಕ್ಕೆ ಆರೋಗ್ಯ ಸಚಿವ ಹರ್ಷವರ್ಧನ್ ತಿರುಗೇಟು ನೀಡಿದ್ದರು.

click me!