ಹಿಂದೂ ದೇವಸ್ಥಾನಗಳ ಪರ ಕಾನೂನು ಹೋರಾಟ ಮಾಡುತ್ತಿರುವ ಖ್ಯಾತ ವಕೀಲ ವಿಷ್ಣು ಶಂಕರ್ ಜೈನ್ ವಾದಕ್ಕೆ ಮಹತ್ವದ ಗೆಲುವು ಸಿಕ್ಕಿದೆ. ಇದೀಗ ಸಂಭಾಲದಲ್ಲಿರುವ ಜಾಮಾ ಮಸೀದಿ ಸಮೀಕ್ಷೆಯನ್ನು ಕೋರ್ಟ್ ನಡೆಸಿದೆ.
ಬರೇಲಿ(ನ.20) ಹಲವು ಹಿಂದೂ ದೇವಸ್ಥಾನಗಳನ್ನೇ ಕೆಡವಿ, ಪರಿವರ್ತಿಸಿ ಕಟ್ಟವಾಗಿರುವ ಮಸೀದಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಿರುವ ಖ್ಯಾತ ವಕೀಲ ವಿಷ್ಣು ಶಂಕರ್ ಜೈನ್‌ಗೆ ಮತ್ತೊಂದು ಗೆಲುವು ಸಿಕ್ಕಿದೆ. ಉತ್ತರ ಪ್ರದೇಶದ ಸಂಭಾಲ ನಗರದಲ್ಲಿರುವ 16ನೇ ಶತಮಾನದ ಜಾಮಾ ಸಮೀದಿ ವಿರುದ್ದ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ. ಜಾಮಾ ಮಸೀದಿಯೋ ಅಥವಾ ಹರಿಹರ ಮಂದಿರವೋ ಅನ್ನೋದು ಪತ್ತೆ ಹಚ್ಚಲು ಸಿವಿಲ್ ಕೋರ್ಟ್ ಸಮೀಕ್ಷೆಗೆ ಆದೇಶ ನೀಡಿದೆ. ಇಷ್ಟೇ ಅಲ್ಲ ಭಾರಿ ಅಡೆ ತಡೆ ವಿರೋಧದ ನಡುವೆ ಮೊದಲ ಹಂತದ ಸಮೀಕ್ಷೆ ಪೂರ್ಣಗೊಳಿಸಿದೆ.
ರಿಶಿರಾಜ್ ಗಿರಿ ಅನ್ನೋ ವ್ಯಕ್ತಿ ಜಾಮಾ ಮಸೀದಿ ಕುರಿತು ತಕರಾರು ಅರ್ಜಿ ಸಲ್ಲಿಸಿದ್ದರು. ಹರಿಹರ ಮಂದಿರ, ಕಾಲಾ ದೇವಿ ಸೇರಿದಂೆ 5 ಸಣ್ಣ ಮಂದಿರಗಳನ್ನು 16ನೇ ಶತಮಾನದಲ್ಲಿ ಮೊಘಲ್ ದಾಳಿಕೋರ ಬಾಬರ್ ಜಾಮಾ ಮಸೀದಿಯಾಗಿ ಪರಿವರ್ತಿಸಿದ್ದಾನೆ. 1529ರಲ್ಲಿ ಮಂದಿರ ಉಳಿಸಿಕೊಳ್ಳಲು ಹೋರಾಡಿದ ಸಾವಿರಾರೂ ಹಿಂದೂಗಳ ಹತ್ಯೆ ಮಾಡಿ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. ಹರಿಹರ ದೇವಸ್ಥಾನ ಹಿಂದೂಗಳ ಶ್ರದ್ಧಾ ಭಕ್ತಿಯ ಪ್ರಮುಖ ಕೇಂದ್ರ. ಬಹುತೇಕ ಹರಿಹರ ಮಂದಿಗಳು ಈ ರೀತಿ ಕೆಡವಲಾಗಿದೆ. ಹಲವು ಮಂದಿಗಳ ಪುರಾವೆ ಇಲ್ಲ. ಆದರೆ ಈ ಹರಿಹರ ದೇವಸ್ಥಾನದ ಮೇಲೆ ಮಸೀದಿ ಕಟ್ಟಿರುವುದಕ್ಕೆ ಪುರಾವೆ, ಸಾಕ್ಷ್ಯಗಳು ಇದೆ. ಇದನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ರಿಶಿರಾಜ್ ಗಿರಿ ಅರ್ಜಿ ಸಲ್ಲಿಸಿದ್ದರು.
'ಮೊದಲು ಹಿಂದೂಗಳ ಜಾಗದಲ್ಲಿ ಗೋರಿ ಕಟ್ತಾರೆ, ಬಳಿಕ ನಮ್ದು ಅಂತಾರೆ': ಚಕ್ರವರ್ತಿ ಸೂಲಿಬೆಲೆ
ರಿಶಿರಾಜ್ ಪರ ವಿಷ್ಣುಶಂಕರ್ ಜೈನ್ ವಾದ ಮಂಡಿಸಿದ್ದಾರೆ. ವಿಷ್ಣು ಶಂಕರ್ ಜೈನ್ ವಾದ ಪುರಸ್ಕರಿಸಿದ ಚಂದೌಸಿಯ ಸಿವಿಲ್ ಜಡ್ಜ್ ಸಮೀಕ್ಷೆಗೆ ಆದಶ ನೀಡಿದ್ದರು. ಇದು ಜಾಮಾ ಮಸೀದಿಯೋ ಅಥವಾ ಹರಿಹರ ದೇವಸ್ಥಾನವೋ ಅನ್ನೋದು ಪತ್ತೆ ಹಚ್ಚಲು ಸರ್ವೆ ತಂಡಕ್ಕೆ ಸೂಚನೆ ನೀಡಲಾಗಿತ್ತು. ಇದರಂತೆ ಸರ್ವೇ ತಂಡ ಜಾಮಾ ಮಸೀದಿಗೆ ಆಗಮಿಸುತ್ತಿದ್ದಂತೆ ಭಾರಿ ಪ್ರತಿಭಟನೆ ನಡೆದಿದೆ. ಸರ್ವೆ ನಡೆಸದಂತೆ ತಡೆಯೊಡ್ಡಲಾಗಿದೆ. ಆದರೆ ಸ್ಥಳೀಯ ಸಂಸದ ಝಿಯಾ ಉರ್ ರೆಹಮಾನ್ ಬರ್ಖ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರೆ. ಮಸೀದಿ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಸದ್ಯ ಪ್ರತಿಭಟನೆ ಅಂತ್ಯಗೊಳಿಸಿ ಸಮೀಕ್ಷೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಸಮೀಕ್ಷಾ ತಂಡ ಮಂಗಳವಾರದ ತಡರಾತ್ರಿ ವರೆಗೂ ಸಮೀಕ್ಷೆ ನಡೆಸಿ ಮೊದಲ ಹಂತದ ಸಮೀಕ್ಷೆ ಪೂರ್ಣಗೊಳಿಸಿದೆ. ಈ ವರದಿಯನ್ನು ಕೋರ್ಟ್‌ಗೆ ಶೀಘ್ರದಲ್ಲೇ ಸಲ್ಲಿಕೆ ಮಾಡಲಿದ್ದಾರೆ. ಈ ವರದಿ ಆಧರಿಸಿ ನವೆಂಬರ್ 29 ರಂದು ವಿಚಾರಣೆ ನಡೆಯಲಿದೆ. ಈ ಕುರಿತು ವಕೀಲ ವಿಷ್ಣು ಶಂಕರ್ ಜೈನ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಹರಿಹರ ದೇವಸ್ಥಾನ. ದೇಗುಲದ ಕುರುಹುಗಳನ್ನು ಈಗಲೂ ಕಾಣಬಹುದು. ಇಲ್ಲಿ ಕಲ್ಕಿ ಅವತಾರ ಸಂಭವಿಸಲಿದೆ. 1529ರಲ್ಲಿ ಬಾಬರ್ ಈ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಿದ್ದಾನೆ. ಪುರಾತತ್ವ ಇಲಾಖೆ ವಶದಲ್ಲಿರುವ ಈ ಮಸೀದಿಯ ಸಮೀಕ್ಷೆಯನ್ನು ನಡೆಸಲಾಗಿದೆ. ಈ ವರದಿ ಆಧರಿಸಿ ಮುಂದಿನ ವಿಚಾರಣೆ ನಡೆಯಲಿದೆ ಎಂದು ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಸರ್ವೆ ವೇಳೆ ಪ್ರತಿಭಟನೆ ನಡೆದಿದೆ. ಕೋರ್ಟ್ ಆದೇಶವಿದ್ದರೂ ಮಸೀದಿ ಸಮೀಕ್ಷೆಗೆ ನಿರಾಕರಿಸಿದ್ದಾರೆ. ದೇವಸ್ಥಾನದ ಹಲವು ಕುರುಗಳನ್ನು ಮರೆ ಮಾಚಲಾಗಿದೆ. ಕಲ್ಲಿನ ಕೆತ್ತನೆಗಳನ್ನು ವಿರೂಪಗೊಳಿಸಲಾಗಿದೆ. ಇಷ್ಟಾದರೂ ಹಲವು ಕಂಬಗಳು ದೇವಸ್ಥಾನ ಮಸೀದಿಯಾಗಿ ಪರಿವರ್ತನೆಗೊಂಡ ಕರಾಳ ಕತೆ ಹೇಳುತ್ತಿದೆ ಎಂದು ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಮುಂದಿನ ವಿಚಾರಣೆಯಲ್ಲಿ ಈ ಕುರಿತು ಎಲ್ಲಾ ಮಾಹಿತಿಯನ್ನು ಕೋರ್ಟ್ ಮುಂದೆ ಇಡಲಾಗುತ್ತದೆ ಎಂದಿದ್ದಾರೆ.