ಟೀಮ್‌ ಇಂಡಿಯಾ , RCB ಮಾಜಿ ಪ್ಲೇಯರ್‌, ಚೆನ್ನೈ ತಂಡದಲ್ಲಿ ಧೋನಿ ಫೇವರಿಟ್‌ ಆಟಗಾರ ಬಿಜೆಪಿಗೆ ಸೇರ್ಪಡೆ!

Published : Apr 08, 2025, 04:32 PM ISTUpdated : Apr 08, 2025, 04:47 PM IST
ಟೀಮ್‌ ಇಂಡಿಯಾ , RCB ಮಾಜಿ ಪ್ಲೇಯರ್‌, ಚೆನ್ನೈ ತಂಡದಲ್ಲಿ ಧೋನಿ ಫೇವರಿಟ್‌ ಆಟಗಾರ ಬಿಜೆಪಿಗೆ ಸೇರ್ಪಡೆ!

ಸಾರಾಂಶ

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಕೇದಾರ್ ಜಾಧವ್ ಬಿಜೆಪಿಗೆ ಸೇರಿದ್ದಾರೆ. ಮಹಾರಾಷ್ಟ್ರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಪಕ್ಷದ ಬಾವುಟ ಹಿಡಿದಿದ್ದಾರೆ. ಈ ಮೂಲಕ ಕ್ರಿಕೆಟ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದ್ದಾರೆ.

Kedar Jadhav Joins BJP: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪ್ರಮುಖ ಆಟಗಾರನಾಗಿದ್ದ ಕೇದಾರ್ ಜಾಧವ್ ಮಂಗಳವಾರ ಬಿಜೆಪಿಗೆ ಸೇರಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಮತ್ತು ಅಶೋಕ್ ಚವಾಣ್ ಸೇರಿದಂತೆ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿ ಬಾವುಟ ಹಿಡಿದಿದ್ದಾರೆ.

ಆರ್‌ಸಿಬಿ ಪರವಾಗಿಯೂ ಆಡಿದ್ದ ಕೇದಾರ್‌ ಜಾಧವ್‌: ಪುಣೆ ನಿವಾಸಿಯಾಗಿರುವ ಕೇದಾರ್‌ ಜಾಧವ್‌ ಟೀಮ್‌ ಇಂಡಿಯಾ ಪರವಾಗಿ 73 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು 42.09 ಸರಾಸರಿಯಲ್ಲಿ 1389 ರನ್ ಗಳಿಸಿದ್ದಾರೆ. ಟಿ20ಯಲ್ಲಿ, ಅವರು 9 ಪಂದ್ಯಗಳನ್ನು ಆಡಿದ್ದಾರೆ ಮತ್ತು 122 ರನ್ ಗಳಿಸಿದ್ದಾರೆ. ಕ್ರಿಕೆಟ್‌ ಜೀವದಲ್ಲಿ ಅವರಿಗೆ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಫನೆ ಮಾಡುವ ಅವಕಾಶ ಸಿಗಲಿಲ್ಲ.ಅವರು ಏಕದಿನ ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ.  ಇದರೊಂದಿಗೆ ಅವರು 2017ರ ಚಾಂಪಿಯನ್ಸ್‌ ಟ್ರೋಫಿ ಹಾಗೂ 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಭಾಗವೂ ಆಗಿದ್ದರು. ಅವರು ಐಪಿಎಲ್‌ನಲ್ಲಿ ಐದು ತಂಡಗಳಿಗೆ ಅಡಿದ್ದು, 95 ಪಂದ್ಯಗಳಿಂದ ಕೇವಲ 1208 ರನ್ ಗಳಿಸಿದ್ದಾರೆ. ಚೆನ್ನೈ ಸೂಪರ್‌ಕಿಂಗ್ಸ್‌ ತಂಡದಲ್ಲಿದ್ದ ವೇಳೆ ಧೋನಿಗೆ ಆಪ್ತರಾಗಿದ್ದ ಕೇದಾರ್‌ ಜಾಧವ್‌, ಅದರೊಂದಿಗೆ ಸನ್‌ರೈಸರ್ಸ್‌ ಹೈದರಾಬಾದ್, ಡೆಲ್ಲಿ ಡೇರ್‌ಡೆವಿಲ್ಸ್‌, ಕೊಚ್ಚಿ ಟಸ್ಕರ್ಸ್‌ ಕೇರಳ ಹಾಗೂ ಆರ್‌ಸಿಬಿ ಪರವಾಗಿ ಆಡಿದ್ದರು.

ಹಾಂಕಾಂಗ್ ಸಿಕ್ಸ್‌ ಟೂರ್ನಿಗೆ ಭಾರತ ತಂಡ ಪ್ರಕಟ; ಕನ್ನಡಿಗ ಕ್ಯಾಪ್ಟನ್, ಆರ್‌ಸಿಬಿ ಆಟಗಾರರದ್ದೇ ಸಿಂಹಪಾಲು!

2020ರಲ್ಲಿ ಕೊನೆಯ ಪಂದ್ಯ: 2014 ರ ನವೆಂಬರ್ 16 ರಂದು ಶ್ರೀಲಂಕಾ ವಿರುದ್ಧ ಪಾದಾರ್ಪಣೆ ಮಾಡಿದ್ದ ಕೇದಾರ್‌ ಜಾಧವ್, 2020ರ ಫೆಬ್ರವರಿ 8 ರಂದು ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಜುಲೈ 2015 ರಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ T20 ಪಂದ್ಯವನ್ನು ಆಡಿದರು ಮತ್ತು ಅವರ ಕೊನೆಯ ಪಂದ್ಯವನ್ನು ಅಕ್ಟೋಬರ್ 2017 ರಲ್ಲಿ ಆಡಿದ್ದರು.

RCB ಮಾಜಿ ಆಟಗಾರ ಇಂದು ದಿಢೀರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ..!

ಅಭಿವೃದ್ಧಿ ರಾಜಕಾರಣಕ್ಕೆ ಸೇರಿದ್ದೇನೆ: "ನಾನು ಛತ್ರಪತಿ ಶಿವಾಜಿಗೆ ನಮಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ ಅಭಿವೃದ್ಧಿಯ ರಾಜಕೀಯ ಮಾಡುತ್ತಿದೆ. ಇದರೊಂದಿಗೆ, ನಾನು ಬವಾಂಕುಲೆ ನೇತೃತ್ವದಲ್ಲಿ ಬಿಜೆಪಿಗೆ ಸೇರುತ್ತೇನೆ" ಎಂದು ಬಿಜೆಪಿ ಸೇರಿದ ನಂತರ ಜಾಧವ್ ಹೇಳಿದ್ದಾರೆ.

ಈ ನಡುವೆ, ಮಾಜಿ ಭಾರತೀಯ ಕ್ರಿಕೆಟಿಗ ಪಕ್ಷಕ್ಕೆ ಸೇರಿದ ನಂತರ ರಾಜ್ಯ ಬಿಜೆಪಿ ಮುಖ್ಯಸ್ಥ ಬವಾಂಕುಲೆ ಸಂತೋಷ ವ್ಯಕ್ತಪಡಿಸಿದರು. "ಇದು ನಮಗೆ ಸಂತೋಷದ ದಿನ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಅವರು ಪ್ರಭಾವ ಬೀರಿದ್ದಾರೆ. ನಾನು ಅವರನ್ನು ನಮ್ಮ ಮನೆಗೆ ಸ್ವಾಗತಿಸುತ್ತೇನೆ. ಅವರಲ್ಲದೆ, ಹಿಂಗೋಲಿ ಮತ್ತು ನಾಂದೇಡ್‌ನಿಂದ ಹಲವಾರು ಜನರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ" ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!