‘ರಾಷ್ಟ್ರಪತಿ ಮುರ್ಮು ಜೊತೆಗಿದ್ದ ಸೇನಾಧಿಕಾರಿ ಈಗ ಸೂಪರ್‌ ಮಾಡೆಲ್’: ಮೇಜರ್ ರಿಷಭ್ ಹೊಸ ಇನ್ನಿಂಗ್ಸ್

Published : Nov 08, 2026, 09:00 AM IST
former army major rishabh singh sambyal fashion model

ಸಾರಾಂಶ

ಭಾರತೀಯ ಸೇನೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ Aide-de-Camp (ADC) ಆಗಿ ಕಾರ್ಯನಿರ್ವಹಿಸಿದ್ದ ಮಾಜಿ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತೀಯ ಸೇನೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ Aide-de-Camp (ADC) ಆಗಿ ಕಾರ್ಯನಿರ್ವಹಿಸಿದ್ದ ಮಾಜಿ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶದ ರಕ್ಷಣಾ ಸೇವೆಯಲ್ಲಿ ಶಿಸ್ತು, ಧೈರ್ಯ ಮತ್ತು ನಾಯಕತ್ವದ ಮೂಲಕ ಗುರುತಿಸಿಕೊಂಡಿದ್ದ ಅವರು ಇದೀಗ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಸೇನೆಯ ಸಮವಸ್ತ್ರ ತೊರೆದು ರ‍್ಯಾಂಪ್ ಮತ್ತು ಕ್ಯಾಮೆರಾ ಮುಂದೆ ಮಾಡೆಲ್ ಆಗಿ ಮಿಂಚಲು ಸಜ್ಜಾಗಿದ್ದಾರೆ.

12 ವರ್ಷಗಳ ಸೇನಾ ಸೇವೆಗೆ ವಿದಾಯ

30 ವರ್ಷದ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಅವರು 2026ರ ಆಗಸ್ಟ್‌ನಲ್ಲಿ ಭಾರತೀಯ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸುಮಾರು 12 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವರು, ತಮ್ಮ ವೃತ್ತಿಜೀವನದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

2014ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ರಿಷಭ್, 2021ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಜಾಟ್ ರೆಜಿಮೆಂಟ್ ತುಕಡಿಯ ನೇತೃತ್ವ ವಹಿಸಿದ್ದರು. ಬಳಿಕ ಭಾರತೀಯ ಸೇನೆಯ ಪ್ರತಿಷ್ಠಿತ 4 ಪ್ಯಾರಾ (ಸ್ಪೆಷಲ್ ಫೋರ್ಸಸ್) ಘಟಕದಲ್ಲಿಯೂ ಸೇವೆ ಸಲ್ಲಿಸಿ, ಗೌರವದ 'ಬಲಿದಾನ್ ಬ್ಯಾಡ್ಜ್' ಪಡೆದಿದ್ದರು.ನಂತರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಹಾಯಕ-ಡಿ-ಕ್ಯಾಂಪ್ (ADC) ಆಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು.

ಸೇನೆಯ ಸಮವಸ್ತ್ರದಿಂದ ಸ್ಟ್ರೀಟ್‌ವೇರ್ ಫ್ಯಾಷನ್‌ಗೆ!

ಸೇನೆಯಿಂದ ನಿವೃತ್ತಿಯಾದ ಬಳಿಕ ರಿಷಭ್ ಸಿಂಗ್ ಸಂಬ್ಯಾಲ್ ಇದೀಗ ಫ್ಯಾಷನ್ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ. ದೇಶೀಯ ಫ್ಯಾಷನ್ ಬ್ರ್ಯಾಂಡ್ 'ಬಾಂಕರ್ಸ್ ಕಾರ್ನರ್' (Bonkers Corner) ಜೊತೆ ಕೈಜೋಡಿಸಿ ಯುವಜನರನ್ನು ಗುರಿಯಾಗಿಸಿಕೊಂಡ ಹೊಸ ಸ್ಟ್ರೀಟ್‌ವೇರ್ ಕಲೆಕ್ಷನ್‌ನಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕ್ಯಾಂಪೇನ್‌ನಲ್ಲಿ ಕಿರುತೆರೆ ನಟಿ ಅನ್ಷುಕಾ ಸೇನ್ ಕೂಡ ರಿಷಭ್ ಜೊತೆ ಕಾಣಿಸಿಕೊಂಡಿದ್ದಾರೆ. ಮಿಲಿಟರಿ ಶಿಸ್ತಿನ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬರು ಫ್ಯಾಷನ್ ಜಗತ್ತಿಗೆ ಕಾಲಿಟ್ಟಿರುವುದು ಈಗ ಸಾಕಷ್ಟು ಗಮನ ಸೆಳೆಯುತ್ತಿದೆ.

'MAJ RISHABH (RETD.) X BONKERS' ಹೆಸರಿನಲ್ಲಿ ಈ ವಿಶೇಷ ಕಲೆಕ್ಷನ್ ಬಿಡುಗಡೆ ಮಾಡಲಾಗಿದೆ. ಇದರ ಪ್ರಮುಖ ಸಂದೇಶ 'Earned, Not Borrowed'. ಅಂದರೆ, ಸಾಧನೆ ಎನ್ನುವುದು ಬೇರೆಯವರಿಂದ ಎರವಲು ಪಡೆದದ್ದಲ್ಲ, ಸ್ವಂತ ಪರಿಶ್ರಮದಿಂದ ಗಳಿಸಿದ್ದು ಎಂಬ ಅರ್ಥವನ್ನು ಈ ಸಾಲು ಸಾರುತ್ತದೆ.

ಸಮವಸ್ತ್ರ ಬದಲಾದರೂ ಬದಲಾಗದ ಶಿಸ್ತು!

ರಿಷಭ್ ಅವರ ಈ ಹೊಸ ಪಯಣ ಕೇವಲ ವೃತ್ತಿ ಬದಲಾವಣೆಯಲ್ಲ. ಸೇನೆಯಲ್ಲಿ ಕಲಿತ ಶಿಸ್ತು, ನಾಯಕತ್ವ ಮತ್ತು ಆತ್ಮವಿಶ್ವಾಸವನ್ನು ಹೊಸ ಕ್ಷೇತ್ರದಲ್ಲೂ ಬಳಸಿಕೊಳ್ಳುವ ಪ್ರಯತ್ನವಾಗಿದೆ. ಮಿಲಿಟರಿ ಜೀವನದಿಂದ ಫ್ಯಾಷನ್ ಲೋಕಕ್ಕೆ ಅವರು ಇಟ್ಟಿರುವ ಹೆಜ್ಜೆ ವಿಭಿನ್ನ ಕ್ಷೇತ್ರಗಳಲ್ಲೂ ಹೊಸ ಅವಕಾಶಗಳನ್ನು ಹುಡುಕಬಹುದು ಎಂಬುದಕ್ಕೆ ಉದಾಹರಣೆಯಾಗಿದೆ. ಪ್ರಸ್ತುತ 'ಮೇಜರ್ ರಿಷಭ್' ಅವರ ಹೆಸರಿನ ವಿಶೇಷ ಕಲೆಕ್ಷನ್ ಬಾಂಕರ್ಸ್ ಕಾರ್ನರ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಸೇನೆಯಿಂದ ಫ್ಯಾಷನ್ ಲೋಕಕ್ಕೆ ಬಂದಿರುವ ಮಾಜಿ ಮೇಜರ್ ಅವರ ಈ ಹೊಸ ಇನ್ನಿಂಗ್ಸ್ ಇದೀಗ ಚರ್ಚೆಗೆ ಗ್ರಾಸವಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಅಸಹನೀಯ ಕುತ್ತಿಗೆ ನೋವು, 400 ವರ್ಷ ಹಳೆಯ ಅಂಗಡಿಯಿಂದ ₹40,000 ಗೆ ತಲೆದಿಂಬು ಖರೀದಿಸಿದ ಯುವತಿ! ಅದರಲ್ಲೇನು ವಿಶೇಷ ಅಂತೀರಾ? ವಿಡಿಯೋ ನೋಡಿ!
ಮೇಕೆದಾಟು ವಿವಾದಕ್ಕೆ ತಮಿಳುನಾಡು ಸಿಎಂ ವಿಜಯ್‌ ಬಿಗ್‌ ಟ್ವಿಸ್ಟ್: ಪ್ರಧಾನಿಗೆ ಬರೆದ ಪತ್ರದಲ್ಲಿ ಏನಿದೆ?