
ರಾಜ್‌ಕೋಟ್ (ಜೂ.25) ಭಾರತದೆಲ್ಲೆಡೆ ರಿಲೇಶನ್‌ಶಿಪ್, ಮದುವೆ, ಪ್ರೀತಿ-ಪ್ರೇಮಗಳಲ್ಲಿ ಕೊಲೆ, ಷಡ್ಯಂತ್ರ ಪ್ರಕರಣಗಳೇ ಹೆಚ್ಚು ವರದಿಯಾಗುತ್ತಿದೆ. ಪುಣೆಯ ಉದ್ಯಮಿ ಪುತ್ರನ ಲೋಹಘಡ ಬೆಟ್ಟದಿಂದ ತಳ್ಳಿ ಹಾಕಿ ಕೊಲೆಗೈದ ಭಾವಿ ಪತ್ನಿ ಸೇರಿದಂತೆ ಒಂದರ ಹಿಂದೆ ಒಂದೊಂದು ಘಟನೆಗಳು ವರದಿಯಾಗುತ್ತಿದೆ. ಇದೀಗ ಆಮ್ ಆದ್ಮಿ ಪಕ್ಷದ ಮಾಜಿ ಮುನ್ಸಿಪಲ್ ಚುನಾವಣಾ ಅಭ್ಯರ್ಥಿಯಾಗಿದ್ದ 23 ವರ್ಷದ ನಂದಿನ ಬೊಸಮಿಯಾ ಶವವಾಗಿ ಪತ್ತೆಯಾಗಿದ್ದಾಳೆ. ರಾಜ್‌ಕೋಟ್‌ನ ವಾವ್ದಿ ವಲಯದ ಮನೆಯಲ್ಲಿ ನಂದಿನ ಶವ ಪತ್ತೆಯಾಗಿದೆ. ಕೆಲ ವರ್ಷಗಳ ಹಿಂದೆ ಪರಿಚಯವಾಗಿದ್ದ ಅಸ್ಲಂ ಸಾಮ ಅನ್ನೋ ವ್ಯಕ್ತಿ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ನಂದಿನಿ ಸಾವು ಆಕೆ ಮಾಡಿದ ದುಡುಕಿನ ನಿರ್ಧಾರವಲ್ಲ, ಇದು ಅಸ್ಲಾಂ ಹಾಗೂ ಆತನ ಮನಯವರು ಮಾಡಿದ ವ್ಯವಸ್ಥಿತ ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ.
ಅಸ್ಲಾಂ ದೈಹಿಕ, ಮಾನಸಿಕ ಹಲ್ಲೆಗೆ ಕುಗ್ಗಿ ಹೋಗಿದ್ದ ನಂದಿನಿ
ರಾಜಕೀಯವಾಗಿ ಸಕ್ರೀಯವಾಗಿದ್ದ ನಂದಿನ ಮೆಡಿಕಲ್ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಳು. ಇದರ ನಡುವೆ ಮುಸ್ಲಿಂ ಸಮುದಾಯದ ಅಸ್ಲಾಂ ಸಾಮ ಪರಿಚಯವಾಗಿದ್ದ. ಪರಿಚಯ ಪ್ರೀತಿಯಾಗಿ ಮನೆಯವರ ವಿರೋಧದ ನಡುವೆಯೂ ಲೀವ್ ಇನ್ ರಿಲೇಶನ್‌ಶಿಪ್ ಮುಂದುವರಿದಿತ್ತು. ಮನೆಯವರ ವಿರೋಧ ಕಟ್ಟಿಕೊಂಡಿದ್ದ ನಂದಿನಿ ಅತ್ತ ಮನೆಗೆ ಮರಳಲು ಸಾಧ್ಯವಾಗದೆ ಇತ್ತ ಅಸ್ಲಾಂ ಜೊತೆ ಇರಲು ಸಾಧ್ಯಾವಾಗದೇ ಚಡಪಡಿಸಿದ್ದಳು. ಸಾವಿಗೂ ಕೆಲವೇ ದಿನ ಮೊದಲು ಅಸ್ಲಾಂ ವಿರುದ್ದ ದೈಹಿಕ ಹಾಗೂ ಮಾನಿಸಿಕ ಹಲ್ಲೆ ಕುರಿತು ದೂರು ದಾಖಲಿಸಿದ್ದಳು ಎಂದು ಪೋಷಕರು ಹೇಳಿದ್ದಾರೆ.
ನಂದಿನಿ ಬದುಕು ಅಂತ್ಯಗೊಳಿಸುವ ಹೆಣ್ಣಲ್ಲ. ಅಸ್ಲಾಂ ದೈಹಿಕ ಹಲ್ಲೆ,ಮಾನಸಿಕ ನೋವನ್ನು ಸಹಿಸಿಕೊಂಡು ಇಷ್ಟು ದಿನ ಇದ್ದಳು. ಇದೀಗ ಇದ್ದಕ್ಕಿದ್ದಂತೆ ಈ ರೀತಿ ಮಾಡಲು ಸಾಧ್ಯವಿಲ್ಲ. ಇದು ಲವ್ ಜಿಹಾದ್ ಮಾತ್ರವಲ್ಲ, ವ್ಯವಸ್ಥಿತ ಕೊಲೆ ಎಂದು ನಂದಿನಿ ಸಹೋದರಿ ರೂಪಾಲ್ ಬೊಸಮಿಯಾ ಆರೋಪಿಸಿದ್ದಾಳೆ. ಅಸ್ಲಾಂ ಹಾಗೂ ಆತನ ಪೋಷಕರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆಕೆಯ ದೇಹದಲ್ಲಿ ಹಲವು ಗಾಯದ ಗುರುತುಗಳಿವೆ ಎಂದು ನಂದಿನ ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಜ್‌ಕೋಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಅಸ್ಲಾಂ ಹಾಗೂ ನಂದಿನಿ ವಾಸವಿದ್ದರು. ಅಸ್ಲಾಂ ಮನೆಯಲ್ಲೇ ನಂದಿನ ಶವ ಪತ್ತೆಯಾಗಿದೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ನಂದಿನಿ ಶವ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ