3 ವರ್ಷಗಳ ಕಾಯುವಿಕೆಯ ನಂತರ ಭಾರತೀಯಳಾದ ಖುಷಿ: ರಷ್ಯನ್ ಮಹಿಳೆಯ ಸಂಭ್ರಮ ಸಖತ್ ವೈರಲ್

Published : Apr 25, 2025, 06:08 PM ISTUpdated : Apr 26, 2025, 07:19 AM IST
3 ವರ್ಷಗಳ ಕಾಯುವಿಕೆಯ ನಂತರ ಭಾರತೀಯಳಾದ ಖುಷಿ: ರಷ್ಯನ್ ಮಹಿಳೆಯ ಸಂಭ್ರಮ ಸಖತ್ ವೈರಲ್

ಸಾರಾಂಶ

ರಷ್ಯಾ ಮೂಲದ ಮರೀನಾ ಖರ್ಬನಿ ಎಂಬುವವರು ಭಾರತದ ಪೌರತ್ವ ಪಡೆದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೂರುವರೆ ವರ್ಷಗಳ ಕಾಯುವಿಕೆಯ ನಂತರ ಭಾರತದ OCI ಪಾಸ್‌ಪೋರ್ಟ್ ಪಡೆದ ಖುಷಿಯಲ್ಲಿ ಅವರು ಕುಣಿದಾಡಿದ್ದಾರೆ. ಭಾರತದಲ್ಲಿ ವಾಸಿಸುವ ಬಗ್ಗೆ ಅವರ ಉತ್ಸಾಹವು ಕೆಲವು ಭಾರತೀಯರಲ್ಲಿ ಅಚ್ಚರಿ ಮೂಡಿಸಿದೆ.

ವಿದೇಶಗಳಿಗೆ ಹೋಗುವುದು ಅಲ್ಲಿನ ಪ್ರಜೆಗಳಾಗಿ ಅಲ್ಲೇ ಶಾಶ್ವತವಾಗಿ ನೆಲೆಸುವುದಕ್ಕೆ ಅನೇಕರು ಇಷ್ಟಪಡುತ್ತಾರೆ. ಅನೇಕ ಭಾರತೀಯರಿಗೆ ಅದು ಘನತೆ ಹಾಗೂ ಶ್ರೀಮಂತಿಕೆಯ ಸಂಕೇತ ಎನಿಸಿದೆ. ಆದರೆ ಹೀಗೆ ಭಾರತಕ್ಕೂ ಬರಲು ಕೆಲವರು ಹಾತೊರೆಯುತ್ತಾರೆ. ಭಾರತದ ಪಾಸ್‌ಪೋರ್ಟ್ ಸಿಕ್ಕ ಖುಷಿಯಲ್ಲಿ ಬಹಳ ಕಾಯುವಿಕೆಯ ನಂತರ ಭಾರತದ ಪ್ರಜೆಯಾದ ಖುಷಿಯಲ್ಲಿ ರಷ್ಯಾ ಮೂಲದ ಮಹಿಳೆಯೊಬ್ಬರು ಸಂಭ್ರಮಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

ರಷ್ಯಾದ ಮೂಲದ ಮರೀನಾ ಖರ್ಬನಿ ಎಂಬುವವರು ತಮಗೆ ಭಾರತದ ಪ್ರಜೆಯಾಗುವ ಅವಕಾಶ ಸಿಕ್ಕ ಹಾಗೂ ಭಾರತದ ಪಾಸ್‌ಪೋರ್ಟ್ ಸಿಕ್ಕ ಖುಷಿಯಲ್ಲಿ ಆ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೊನೆಗೂ ನಾನು ಭಾರತೀಯಳಾದೆ ಎಂದು ಅವರು ವೀಡಿಯೋದ ಮೇಲೆ ಬರೆದುಕೊಂಡಿದ್ದಾರೆ. ಈ ಬಹಳ ಅಮೂಲ್ಯವಾದ ದಾಖಲೆಗಾಗಿ ನಾನು ಸುಮಾರು ಮೂರುವರೆ ವರ್ಷಗಳಿಂದ ಕಾಯುತ್ತಿದ್ದೆ. ಹಾಗೂ ನಾನು ಈಗ ಭಾರತದ ಸಾಗರೋತ್ತರ ಪೌರತ್ವ (OCI) ಪಾಸ್‌ಪೋರ್ಟ್ ಹೊಂದಿರುವ ಹೆಮ್ಮೆಯ ವ್ಯಕ್ತಿ ಎಂದು ಅವರು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ:ಭಾರತೀಯ ಪೌರತ್ವ ಹೊಂದಿರದ 7 ಸ್ಟಾರ್ ಕಲಾವಿದರು

ವೈರಲ್ ಆದ ವೀಡಿಯೋದಲ್ಲಿ ಅವರು ತಮ್ಮ ಪುಟ್ಟ ಕಂದನನ್ನು ಹಿಡಿದುಕೊಂಡು ನಂಗೆ ಇದು ಸಿಕ್ತು ನಂಗೆ ಇದು ಸಿಕ್ತು ಅಂತ ಖುಷಿಯಿಂದ ಕುಣಿದಾಡಿದ್ದಾರೆ. ನಾನೀಗ ಭಾರತೀಯಳು. ಹಾಗೂ ಇದಕ್ಕಾಗಿ ನಾನು ಮೂರುವರೆ ವರ್ಷ ಕಾದೆ ಎಂದು ಅವರು ವೀಡಿಯೋದಲ್ಲಿ ಬಹಳ ಖುಷಿಯಿಂದಲೇ ಹೇಳಿದ್ದಾರೆ. ಆದರೆ ಭಾರತೀಯರಿಗೆ ಈಕೆಯ ಖುಷಿ ನೋಡಿ ಅಚ್ಚರಿಯಾಗಿದೆ. ಅನೇಕರು ಯಾಕೆ ಇಷ್ಟೊಂದು ಖುಷಿ ಎಂದು ಆಕೆಯನ್ನು ಪ್ರಶ್ನೆ ಮಾಡಿದ್ದಾರೆ. ಮೊದಲು ಬಂದು ನೋಡಿ ಆಮೇಲೆ ನಿರ್ಧರಿಸಿ ಎಂದು ಕೆಲವರು ಆಕೆಗೆ ಸಲಹೆ ನೀಡಿದ್ದಾರೆ. ಭಾರತೀಯ ಪಾಸ್‌ಪೋರ್ಟ್‌ನ್ನು ತೋರಿಸುತ್ತಾ ಖುಷಿ ಪಡುವ ವ್ಯಕ್ತಿಯನ್ನು ನಾನು ಇದುವರೆಗೆ ನೋಡಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು, ಭಾರತೀಯರು ಕೂಡ ಭಾರತದಲ್ಲಿ ವಾಸಿಸಲು ಇಷ್ಟಪಡುವುದಿಲ್ಲ, ಅದಕ್ಕಾಗಿಯೇ ಅನೇಕ ಜನರು ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗುವ ಕನಸು ಕಾಣುತ್ತಾರೆ, ಅದಕ್ಕಾಗಿಯೇ ಜಾರ್ಜಿಯಾ ಮತ್ತು ಮಂಗೋಲಿಯಾದಂತಹ ಸ್ಥಳಗಳಲ್ಲೂ ಸಹ ಎಲ್ಲೆಡೆ ಭಾರತೀಯರು ಇದ್ದಾರೆ. ಭಾರತೀಯರು ವಿದ್ಯಾರ್ಥಿಗಳಾಗಿ ಹೋಗುತ್ತಾರೆ ಆದರೆ ಅಲ್ಲೇ ಇರಲು ಇಷ್ಟ ಪಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಭಾರತೀಯರ ಈ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಮರೀನಾ ಖರ್ಬನಿ, ನಾನು ಭಾರತಕ್ಕೆ ಬಂದು ಉಳಿಯಲು ಬಯಸಿದ್ದನ್ನು ನೋಡಿ ತುಂಬಾ ಜನರು ಆಘಾತಕ್ಕೊಳಗಾಗಿದ್ದಾರೆ. ಆದರೆ ನಾನು ನಿಮಗೆ ಹೇಳಬೇಕೆಂಬುದೇನೆಂದರೆ ನಾನು ಮೊದಲನೆಯದಾಗಿ ಇಲ್ಲಿಯೇ ಮದುವೆಯಾಗಿದ್ದೇನೆ. ನಮಗಿಬ್ಬರಿಗೂ ಕುಟುಂಬವಿದೆ ಮತ್ತು ಅವರೊಂದಿಗೆ ಸಮಯ ಕಳೆಯಲು ನಾವು ಬಯಸುತ್ತೇವೆ. ಆದ್ದರಿಂದ ನಾವು ಭಾರತದಲ್ಲಿ ಮತ್ತು ರಷ್ಯಾದಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ಕೆಲವು ತಿಂಗಳುಗಳು ಮತ್ತು ಇಲ್ಲಿ ಕೆಲವು ತಿಂಗಳುಗಳು ನಾವು ವಾಸ ಇರುತ್ತೇವೆ. ಹೌದು, ನನಗೆ ಅರ್ಥವಾಗಿದೆ, ಭಾರತವು ಇತರ ಯಾವುದೇ ದೇಶದಂತೆ ತನ್ನದೇ ಆದ ಸಮಸ್ಯೆಗಳನ್ನು ಹೊಂದಿದೆ ಆದರೆ ಇಲ್ಲಿಯೂ ಸಹ ಬಹಳಷ್ಟು ಒಳ್ಳೆಯ ವಿಷಯಗಳಿವೆ ಎಂದು ನೀವು ಏಕೆ ಭಾವಿಸುವುದಿಲ್ಲ ಮತ್ತು ನಾನು ವೈಯಕ್ತಿಕವಾಗಿ ಇಲ್ಲಿಯೇ ಇರಲು ಇಷ್ಟಪಡುತ್ತೇನೆ ಮತ್ತು ಯುರೋಪಿಯನ್ ದೇಶಕ್ಕಿಂತ ಭಾರತದಲ್ಲೇ  ಉಳಿಯಲು ನಾನು ಬಯಸುತ್ತೇನೆ ಎಂದು ತಮ್ಮ ದೇಶದ ಬಗ್ಗೆ ಅಸಡ್ಡೆ ತೋರಿ ಕಾಮೆಂಟ್ ಮಾಡುತ್ತಿರುವ ಭಾರತೀಯರಿಗೂ ಕೆಲ ವಿದೇಶಿಯರಿಗೂ ಅವರು ತಿರುಗೇಟು ನೀಡಿದ್ದಾರೆ. 

ಇದನ್ನೂ ಓದಿ:ವಿವಾದಿತ ಸಿಎಎ ಕಾಯ್ದೆ ಕೊನೆಗೂ ಜಾರಿ: 14 ವಿದೇಶಿಗರಿಗೆ ಭಾರತ ಪೌರತ್ವ

ಆಕೆಯ ವೀಡಿಯೋ ನೋಡಿ ಕೆಲ ಭಾರತೀಯರು ಹಾಕಿದ ಕಾಮೆಂಟ್ ನೋಡಿದರೆ ಭಾರತದ ಮೇಲೆ ವಿದೇಶಿಯರಿಗೆ ಇರುವ ಅಭಿಮಾನ ಕೆಲ ಭಾರತೀಯರಿಗೆ ಇದ್ದಂತೆ ಕಾಣುತ್ತಿಲ್ಲ. ಆದರೆ ಅವರು ನಿಮ್ಮ ದೇಶದಲ್ಲಿ ಇರುವ ವಿದೇಶದಲ್ಲಿ ಇಲ್ಲದ ಒಳ್ಳೆಯ ವಿಚಾರಗಳನ್ನು ನೋಡಿ ಎಂದು ಹೇಳುವ ಮೂಲಕ ಭಾರತೀಯರ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. ಆದರೆ ಭಾರತೀಯರಿಗೆ ಭಾರತದೊಳಗೆ ಇರುವ ಒಳ್ಳೆಯತನ ಕಾಣುವುದಿಲ್ಲ ಬಿಡಿ..! ಅನೇಕ ವಿದೇಶಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಭಾರತದ ಡಿಜಿಟಲ್ ಪೇಯಿಂಗ್, ಆನ್‌ಲೈನ್ ಡೆಲಿವರಿ ಆಪ್, ಸುಲಭವಾಗಿ ಸಿಗುವ ಮನೆಕೆಲಸದ ಜನಗಳ ಬಗ್ಗೆ ಬಹಳ ಅಭಿಮಾನದಿಂದ ಮಾತನಾಡಿದ್ದಲ್ಲದೇ ತಮ್ಮ ದೇಶದಲ್ಲೂ ಆ ವ್ಯವಸ್ಥೆ ಇರಬೇಕಿತ್ತು ಎಂದು ವೀಡಿಯೋ ಮಾಡಿದ್ದರು. ಅದೇನೆ ಇರಲಿ ಭಾರತೀಯಳಾದ ವಿದೇಶಿ ಮಹಿಳೆಯ ಖುಷಿ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!