Latest Videos

ಬಳಕೆದಾರರೇ ಎಚ್ಚರ, ಹಾಡು ಕೇಳುತ್ತಿದ್ದಾಗೆ ಹೆಡ್‌ಫೋನ್ ಸ್ಫೋಟಗೊಂಡು ವ್ಯಕ್ತಿ ಗಂಭೀರ!

By Chethan KumarFirst Published Jun 3, 2024, 7:24 PM IST
Highlights

ಅತಿಯಾಗಿ ಹೆಡ್‌ಫೋನ್, ಇಯರ್ ಬಡ್ ಬಳುತ್ತೀರಾ? ಎಚ್ಚರ ವಹಿಸುವುದು ಅಗತ್ಯ. ಬ್ಲೂಟೂತ್ ಹೆಡ್‌ಫೋನ್ ಕಿವಿಯಲ್ಲೇ ಸ್ಫೋಟಗೊಂಡ ಪರಿಣಾಮ  55 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶಿವಗಂಗ(ಜೂನ್ 03)  ಸ್ಮಾರ್ಟ್‌ಫೋನ್, ಬ್ಲೂಟೂಥ್ ಹೆಡ್‌ಫೋನ್ ಈಗ ಸಾಮಾನ್ಯ. ಕರೆ, ಸಾಂಗ್, ಮೂವಿ ಸೇರಿದಂತೆ ಎಲ್ಲದ್ದಕ್ಕೂ ಹೆಡ್‌ಫೋನ್ ಅಥವಾ ಇಯರ್ ಬಡ್ಸ್ ಬಳಕೆ ಮಾಡುತ್ತಾರೆ. ಹೀಗೆ 55 ವರ್ಷದ ಪನ್ನೀರ್‌ಸೆಲ್ವಂ ಬ್ಲೂಟೂಥ್ ಹೆಡ್‌ಫೋನ್ ಮೂಲಕ ಹಾಡು ಕೇಳುತ್ತಿರುವಾಗಲೇ ಸ್ಫೋಟಗೊಂಡ ಘಟನೆ ತಮಿಳುನಾಡಿನ ಶಿವಗಂಗೆ ಜಿಲ್ಲೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಪನ್ನೀರ್‌ಸೆಲ್ವಂ ಅವರನ್ನು ಮಧುರೈ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

55 ವರ್ಷದ ಪನ್ನೀರ್‌ಸೆಲ್ವಂ ಬ್ಲೂಟೂಥ್ ಹೆಡ್‌ಫೋನ್ ಮೂಲಕ ಹಾಡು ಕೇಳುತ್ತಾ ಕೆಲಸ ಮಾಡುತ್ತಾರೆ. ರಾತ್ರಿ ಮಲಗುವಾಗಲೂ ಹಾಡು ಹಾಡಿ ಹೆಡ್‌ಫೋನ್ ಬಳಸುತ್ತಾರೆ. ಪನ್ನೀರ್‌ಸೆಲ್ವಂ ಪ್ರತಿ ದಿನ ಇದೇ ರೂಢಿಯಾಗಿತ್ತು. ಎಂದಿನಂತೆ  ಪನ್ನೀರ್‌ಸೆಲ್ವಂ ಹಾಡು ಕೇಳುತ್ತಿದ್ದಂತೆ ಬ್ಲೂಟೂತ್ ಹೆಡ್‌ಫೋನ್ ಸ್ಫೋಟಗೊಂಡಿದೆ. ಎರಡು ಬಡ್ಸ್ ಪೈಕಿ ಒಂದು ಸ್ಫೋಟಗೊಂಡಿದೆ. 

ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಫೋಟಗೊಳ್ಳುವುದೇಕೆ? ಅಪಾಯಕ್ಕೂ ಮೊದಲೆ ಎಚ್ಚೆತ್ತುಕೊಳ್ಳಿ!

ಎಡ ಕಿವಿಯಲ್ಲಿಟ್ಟದ ಬಡ್ಸ್ ಸ್ಫೋಟಗೊಂಡಿದೆ. ಈ ಸ್ಫೋಟದ ತೀವ್ರತಗೆ ಎಡ ಕಿವಿಗೆ ಗಂಬೀರ ಗಾಯವಾಗಿದೆ. ತಕ್ಷಣವೇ  ಪನ್ನೀರ್‌ಸೆಲ್ವಂ ಅವರನ್ನು ಶಿವಗಂಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣವೇ ಮಧುರೈ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಐಸಿಯು ಘಟಕದಲ್ಲಿ  ಪನ್ನೀರ್‌ಸೆಲ್ವಂಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹೆಡ್‌ಫೋನ್, ಇಯರ್ ಬಡ್ಸ್ ಸ್ಫೋಟಗೊಳ್ಳುವ ಸಂದರ್ಭ ತೀರಾ ವಿರಳ ಎಂದು ತಜ್ಞರು ಹೇಳುತ್ತಾರೆ. ಆದರೆ ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಕಾರಣ ಬ್ಲೂಟೂತ್ ಹೆಡ್‌ಫೋನ್, ಇಯರ್ ಬಡ್ಸ್‌ಗಳಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಬಳಕೆ ಮಾಡಲಾಗುತ್ತಿದೆ. ಅತೀಯಾದ ಬಳಕೆಯಿಂದ ಹೆಡ್‌ಫೋನ್ ಬಿಸಿಯಾಗಲಿದೆ. ಜೊತೆಗೆ ಹೊರಗಿನ ಉರಿ ಬಿಸಿಲಿನ ವಾತಾವರಣವೂ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.

ಬ್ಲೂಟೂತ್ ಹೆಡ್‌ಫೋನ್ ಬಳಕೆ ಮಾಡುವಾಗ ಚಾರ್ಜರ್ ಬಗ್ಗೆ ಅತೀವ ಗಮನ ನೀಡಬೇಕು. ಹೆಡ್‌ಫೋನ್‌ಗೆ ನೀಡಿರುವ ಚಾರ್ಜಿಂಗ್‌ನಲ್ಲೇ ಚಾರ್ಜ್ ಮಾಡಬೇಕು. ಇತರ ಚಾರ್ಜರ್‌ಗಳಲ್ಲಿ ಪವರ್ ವ್ಯತ್ಯಾಸವಾಗಲಿದೆ. ಇದರಿಂದ ಸ್ಫೋಟಗೊಳ್ಳುವ ಅಪಾಯ ಹೆಚ್ಚು ಎಂದಿದ್ದಾರೆ. ಕಳಪೆ ಗುಣಮಟ್ಟದ ಚಾರ್ಜರ್‌ಗಳಿಂದಲೂ ಅಪಾಯ ಹೆಚ್ಚು. 

ಮನೆಗೆ ಪಾರ್ಸೆಲ್ ಬಂದ ಇಲೆಕ್ಟ್ರಿಕ್‌ ಸಾಮಾಗ್ರಿ ಸ್ಫೋಟಗೊಂಡು ಅಪ್ಪ ಮಗಳು ಸಾವು

ಗುಣಮಟ್ಟದ ಹೆಡ್‌ಪೋನ್ ಬಳಕೆ ಮಾಡುವುದು ಸೂಕ್ತ. ಇನ್ನು ಹೆಡ್‌ಫೋನ್ ಡ್ಯಾಮೇಜ್ ಆಗಿದ್ದರೆ ಬಳಕೆ ಮಾಡುವುದು ನಿಲ್ಲಿಸಿ. ಇದರಿಂದ ಅಪಾಯದ ಸಾಧ್ಯತೆ ಹೆಚ್ಚು. ಮಿತವಾಗಿ ಹೆಡ್ ಫೋನ್, ಇಯರ್ ಬಡ್ಸ್ ಬಳಕೆ ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.
 

click me!