ಶಾರ್ಕ್ ಟ್ಯಾಂಕ್ ಇಂಡಿಯಾ ಶೋನ ಉದ್ಯಮಿಗಳನ್ನ ಟೀಕಿಸಿ ಸಂಕಷ್ಟಕ್ಕೆ ಸಿಲುಕಿದ ಯುಟ್ಯೂಬರ್!

Published : Jan 28, 2025, 04:40 PM IST
ಶಾರ್ಕ್ ಟ್ಯಾಂಕ್ ಇಂಡಿಯಾ ಶೋನ ಉದ್ಯಮಿಗಳನ್ನ ಟೀಕಿಸಿ ಸಂಕಷ್ಟಕ್ಕೆ ಸಿಲುಕಿದ ಯುಟ್ಯೂಬರ್!

ಸಾರಾಂಶ

ಶಾರ್ಕ್ ಟ್ಯಾಂಕ್ ಇಂಡಿಯಾ ಶೋನಲ್ಲಿನ ಉದ್ಯಮಿಗಳನ್ನು ಟೀಕಿಸಿದ ನಂತರ ಈ ಘಟನೆ ನಡೆದಿದೆ. ತಮ್ಮ ಬ್ರ್ಯಾಂಡ್ ಮತ್ತು ವ್ಯಾಪಾರ ಕೌಶಲ್ಯಗಳನ್ನು ಸಮರ್ಥಿಸಿಕೊಂಡ ನಂತರ ಖಾತೆ ಲಾಕ್ ಆಗಿದೆ.

ನವದೆಹಲಿ: ಫ್ಲೈಯಿಂಗ್ ಬೀಸ್ ಯುಟ್ಯೂಬ್ ಅಕೌಂಟ್ ಮೂಲಕ ಫೇಮಸ್ ಆಗಿರುವ ಗೌರವ್ ತನೇಜಾ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಕಳೆದ 48 ಗಂಟೆಗೂ ಅಧಿಕ ಸಮಯದಿಂದ ಗೌರವ್ ತನೇಜಾ ಅವರ ಲಿಂಕ್ಡ್‌ಇನ್ ಖಾತೆಯನ್ನು ಲಾಕ್ ಮಾಡಲಾಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್  4ರಲ್ಲಿ ಗೌರವ್ ತನೇಜಾ ಭಾಗಿಯಾಗಿದ್ದರು. ತಮ್ಮ ಬೀಸ್ಟ್  ಲೈಫ್ ಪ್ರೋಟಿನ್ ಉತ್ಪನ್ನಕ್ಕಾಗಿ ಬಂಡವಾಳ ಸಂಗ್ರಹಿಸಲು ಗೌರವ್ ತನೇಜಾ ಈ ಶೋಗೆ ಬಂದಿದ್ದರು. ಆದ್ರೆ ಬಂಡವಾಳ ಹೂಡಿಕೆ ಮಾಡಲು ಯಾರೂ ಸಹ ಮುಂದಾಗಲಿಲ್ಲ. ಉದ್ಯಮಿ ಶಾದಿ ಡಾಟ್ ಕಾಮ್ ಸಿಇಓ ಅನುಪಮ್ ಮಿತ್ತಲ್ ಅವರು ಗೌರವ್ ತನೇಜಾ ಅವರನ್ನು ಟೀಕಿಸಿದ್ದರು. ನೀವು ಒಳ್ಳೆಯ ಇನ್‌ಫ್ಲುಯೆನ್ಸರ್ ಆದ್ರೆ ಟೆರಿಬಲ್ ಬ್ಯುಸಿನೆಸ್ ಮ್ಯಾನ್ ಎಂದಿದ್ದರು. ಈ ವೇಳೆ ಅನುಪಮ್ ಮತ್ತು ಗೌರವ್ ನಡುವೆ ಮಾತಿನ ಚಕಮಕಿ ನಡೆದಿತ್ತು.  

ಈ ಘಟನೆ ಬಳಿಕ ಗೌರವ್ ತನೇಜಾ ತಮ್ಮ ವ್ಯಾಪಾರದ ಕೌಶಲ್ಯ ಮತ್ತು ಉತ್ಪನ್ನವನ್ನು ಸಮರ್ಥಿಸಿಕೊಂಡು ಲಿಂಕ್ಡ್‌ಇನ್‌ನಲ್ಲಿ ದೀರ್ಘವಾದ ಪೋಸ್ಟ್ ಬರೆದುಕೊಂಡಿದ್ದರು. ಗೌರವ್ ತನೇಜಾ ಅವರು ತಮ್ಮ ಬೀಸ್ಟ್‌ಲೈಫ್‌ನ ಸಾಮಾಜಿಕ ಮಾಧ್ಯಮದ ಕಾರ್ಯಕ್ಷಮತೆಯನ್ನು ಶಾದಿ ಡಾಟ್‌ ಕಾಮ್ ಜೊತೆ ಹೋಲಿಕೆ ಮಾಡಿದ್ದರು. ತಮ್ಮ 8 ತಿಂಗಳ ಹಳೆಯ ಬ್ರ್ಯಾಂಡ್‌ ಪೇಜ್‌ನ್ನು 127K ಫಾಲೋವರ್ಸ್‌ ಹೊಂದಿದ್ದಾರೆ, ಆದ್ರೆ ನಿಮ್ಮ 8 ವರ್ಷ ಹಳೆಯ ಪೇಜ್ ಕೇವಲ 125K ಫಾಲೋವರ್ಸ್ ಹೊಂದಿದ್ದಾರೆ. 

8 ವರ್ಷಗಳ ಡಿಜಿಟಲ್ ಮಾರ್ಕೆಟಿಂಗ್ ಅನುಭವದೊಂದಿಗೆ, ಸಾವಯವ ವ್ಯಾಪ್ತಿ ಮತ್ತು ಪ್ರೇಕ್ಷಕರ ವಿಶ್ವಾಸದ ಶಕ್ತಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾವು ಈಗಾಗಲೇ EBITDA ಧನಾತ್ಮಕವಾಗಿದ್ದೇವೆ ಮತ್ತು ನಾವು ನಿರ್ಮಿಸಿದ ವಿತರಣೆಯಿಂದಾಗಿ, ಮಾರ್ಕೆಟಿಂಗ್‌ನಲ್ಲಿ ನಮ್ಮ ಒಟ್ಟು ವೆಚ್ಚದ ಸುಮಾರು 90 ಪ್ರತಿಶತವನ್ನು ಉಳಿಸುತ್ತೇವೆ" ಎಂದು ಗೌರವ್ ತನೇಜಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: 8 ಲಕ್ಷ ಖರ್ಚು, 3 ವರ್ಷ ಶ್ರಮ, 250ಕ್ಕೂ ಅಧಿಕ ವಿಡಿಯೋ; ದಿಢೀರ್ YouTube ಅಕೌಂಟ್ ಡಿಲೀಟ್ ಮಾಡಿ ಕಣ್ಣೀರಿಟ್ಟ ಯುವತಿ

ಅನುಪಮ್ ಮಿತ್ತಲ್ ಅವರನ್ನು ಟೀಕಿಸಿದ ಪೋಸ್ಟ್  ಬಳಿಕ ಗೌರವ್ ತನೇಜಾ ಅವರ  ಲಿಂಕ್ಡ್‌ಇನ್ ಖಾತೆ ಲಾಕ್ ಆಗಿದೆ. ಯುಟ್ಯೂಬ್‌ನಲ್ಲಿಯೂ ಗೌರವ್ ತನೇಜಾ, ಶಾರ್ಕ್ ಟ್ಯಾಂಕ್ ಇಂಡಿಯಾ ಶೋ ಬಗ್ಗೆ ಹೇಳಿಕೊಂಡಿರುವ ವಿಡಿಯೋಗಳನ್ನು ಪೋಸ್ಟ್ ಮಾಡಿಕೊಂಡಿದ್ದರು. ಇಲ್ಲಿಯೂ ಶೋನಲ್ಲಿರುವ ಉದ್ಯಮಿಗಳನ್ನು ಟ್ರೋಲ್ ಮಾಡಿದ್ದರು. ತಮ್ಮ  ಲಿಂಕ್ಡ್‌ಇನ್ ಖಾತೆ ಲಾಕ್ ಆಗಿರುವ ಬಗ್ಗೆ ಗೌರವ್ ತನೇಜಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಗರ್ಲ್ ಫ್ರೆಂಡ್ ಜೊತೆ ಸಮುದ್ರ ಪಾಲಾಗ್ತಿದ್ದ ಯುಟ್ಯೂಬರ್ ರಣವೀರ್ ಅಲ್ಹಾಬಾದಿಯಾ, ಫ್ಯಾನ್ಸ್ ಶಾಕ್

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ