ಮಗನದ್ದು ಒಂದೇ ಹಠ. ಐಫೋನ್ ಕೊಡಿಸುವಂತೆ ಮೂರು ದಿನ ಉಪವಾಸ ಬೇರೆ ಕುಳಿತುಬಿಟ್ಟಿದ್ದ. ಕಂಗಾಲಾದ ತಾಯಿ, ಹೂ ಮಾರಿ ಸಂಪಾದಿಸಿದ ಎಲ್ಲಾ ದುಡ್ಡನ್ನು ತೆಗೆದು ಮಗನಿಗೆ ನೀಡಿ ಐಫೋನ್ ಕೊಡಿಸಿದ್ದಾಳೆ.
ತಾಯಿಯಿಂದಲೇ ಜೀವನ ನಡೆಯುತ್ತಿದೆ. ಪ್ರತಿ ದಿನ ಬೆಳಗ್ಗೆ 5 ಗಂಟೆಗೆ ದೇವಸ್ಥಾನದ ಹೊರಭಾಗದಲ್ಲಿ ಆ ತಾಯಿ ಹೂವು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾಳೆ. ಇದರ ನಡುವೆ ಮಗನ ಹಠಕ್ಕೆ ತನ್ನ ಎಲ್ಲಾ ಸಂಪಾದನೆಯನ್ನೇ ತೆಗೆದು ಐಫೋನ್ ಕೊಡಿಸಿದ ಘಟನೆ ನಡೆದಿದೆ. ಮಗ ಮೂರು ದಿನದಿಂದ ಉಪವಾಸ ಕುಳಿತ ಬೆನ್ನಲ್ಲೇ ತಾಯಿ ಆತಂಕಗೊಂಡಿದ್ದಾಳೆ. ಮಗನ ಆರೋಗ್ಯ ಎಲ್ಲಿ ಹಾಳಾಗಿಬಿಡುತ್ತೋ ಎಂದು ಸಂಪಾದನೆ, ಸಾಲ ಮಾಡಿ ಮಾಡಿ ಮಗನಿಗೆ ಐಫೋನ್ ಕೊಡಿಸಿದ ದೃಶ್ಯವೊಂದು ಹಲವರಿಗೆ ತೀವ್ರ ಬೇಸರ ತರಿಸಿದೆ.
ತಾಯಿಯ ಪ್ರೀತಿ, ಕಾಳಜಿಗೆ ಎಲ್ಲೆಗಳಿಲ್ಲ. ತನಗೆ ಒಂದು ಹೊತ್ತು ಊಟವಿಲ್ಲದಿದ್ದರೂ ಪರ್ವಾಗಿಲ್ಲ, ಕುಟುಂಬಕ್ಕೆ ಎಲ್ಲವನ್ನೂ ಮಾಡುತ್ತಾಳೆ. ಅದೆಂತಾ ತ್ಯಾಗಕ್ಕೂ ತಾಯಿ ಮಾತ್ರ ಸಿದ್ಧಳಾಗುತ್ತಾಳೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಈ ಕುಟುಂಬಕ್ಕೆ ತಾಯಿಯೇ ಜೀವನಾಧಾರ. ಮಳೆ ಇರಲಿ, ಚಳಿ ಇರಲಿ ವಾತಾವರಣ ಏನೇ ಆಗಲಿ, ಪ್ರತಿ ದಿನ ಬೆಳಗ್ಗೆ 5 ಗಂಟೆಗೂ ಮೊದಲು ಹೂವಿನ ಬುಟ್ಟಿ ಹಿಡಿದು ದೇವಸ್ಥಾನದ ಹೊರಭಾಗದಲ್ಲಿ ಕುಳಿತುಕೊಳ್ಳುತ್ತಾಳೆ. ದೇವಸ್ಥಾನಕ್ಕೆ ತೆರಳು ಭಕ್ತರಿಗೆ ಹೂವು ಮಾರಾಟ ಮಾಡಿ ಇಡೀ ಕುಟುಂಬವನ್ನೇ ಸಾಕುತ್ತಿದ್ದಾಳೆ.
undefined
ಬೆಂಗಳೂರಿಗನಿಗೆ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಸಿಕ್ಕಿತು ಐಫೋನ್, ಮುಂದಾಗಿದ್ದೇ ರೋಚಕ!
ಆರ್ಥಿಕ ಸಂಕಷ್ಟ, ಸವಾಲುಗಳ ನಡುವೆ ಮಗನಿಗೆ ಯಾವುದೇ ಕೊರತೆ ಮಾಡಿಲ್ಲ. ಹೀಗಿರುವಾಗ ಮಗನಿಗೆ ಐಫೋನ್ ಹುಚ್ಚು ಹಿಡಿದಿದೆ. ತನಗೊಂದು ಐಫೋನ್ ಬೇಕು ಎಂದು ತಾಯಿ ಬಳಿ ಗೋಗೆರೆದಿದ್ದಾನೆ. ಇತ್ತೀಚೆಗಷ್ಟೆ ಫೋನ್ ತೆಗೆದುಕೊಂಡಿದ್ದಿಯಾ, ಮತ್ತೆ ಫೋನ್ ಯಾಕೆ ಎಂದು ತಾಯಿ ಪ್ರಶ್ನಿಸಿದ್ದಾಳೆ. ಈ ಫೋನ್ ಸರಿಯಿಲ್ಲ ಎಂದು ಹಲವು ದೂರುಗಳನ್ನು ನೀಡಿದ್ದಾನೆ. ಹೀಗಾಗಿ ಐಫೋನ್ ಕೊಡಿಸುವಂತೆ ಹಠ ಹಿಡಿದಿದ್ದಾನೆ. ಐಫೋನ್ ಬೆಲೆ ಕೇಳಿ ತಾಯಿ ಕೂಡ ಬೆಚ್ಚಿ ಬಿದ್ದಿದ್ದಾಳೆ. ಇಷ್ಟೊಂದು ದುಡ್ಡು ಎಲ್ಲಿಂದ ತರಲಿ ಎಂದು ಚಿಂತೆಗೀಡಾಗಿದ್ದಾಳೆ.
ಇತ್ತ ಮಗನ ಐಫೋನ್ ಹುಚ್ಚು ಹೆಚ್ಚಾಗಿದೆ. ಐಫೋನ್ ಕೊಡಿಸುವಂತೆ ಹಠ ಹಿಡಿದ ಮಗ ಉಪವಾಸ ಕುಳಿತಿದ್ದಾನೆ. ತಾಯಿ ಏನು ಕೊಟ್ಟರೂ ತಿನ್ನದೆ ಹಠ ಹಿಡಿದಿದ್ದಾನೆ. ಮೂರು ದಿನ ಆಗುವಷ್ಟರಲ್ಲೇ ಮಗ ಕಳೆಗುಂದಿದ್ದಾನೆ. ತಾಯಿಗೂ ಆತಂಕ ಶುರುವಾಗಿದೆ. ಸಂಪಾದನೆಯ ಎಲ್ಲಾ ಹಣ, ಜೊತೆಗೆ ಒಂದಿಷ್ಟು ಸಾಲ ಮಾಡಿ ಮಗನಿಗೆ ನೀಡಿದ್ದಾಳೆ. ಈ ಹಣದಲ್ಲಿ ಮಗ ಐಫೋನ್ ಖರೀದಿಸಿದ್ದಾನೆ. ಈ ಮಾಹಿತಿ ತಿಳಿದ ಕೆಲವರು ವಿಡಿಯೋ ಮಾಡಿದ್ದಾರೆ.
This Guy stopped eating food and was demanding iPhone from her mother, His mother finally relented and gave him money to buy iPhone. She sells flowers outside a mandir.
pic.twitter.com/CS59FAS4Z4
ಸೋಶಿಯಲ್ ಮೀಡಿಯಾದಲ್ಲಿ ಈ ತಾಯಿಯ ತ್ಯಾಗ, ಪ್ರೀತಿ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಮಗ ದುಡಿದು ಐಫೋನ್ ತೆಗೆದುಕೊಳ್ಳಬೇಕಿತ್ತು. ಹೂವು ಮಾರುವ ತಾಯಿ, ಎಲ್ಲಾ ಸಂಪಾದನೆ, ಸಾಲ ಮಾಡಿ ಮಗನಿಗೆ ಐಫೋನ್ ಕೊಡಿಸಬಾರದಿತ್ತು ಎಂದಿದ್ದಾರೆ. ಹಸಿವು ಆದಾಗ ತಾನಾಗಿ ತಿನ್ನುತ್ತಿದ್ದ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Sex Workersಗೆ ಮೆಸೇಜ್: ಹೆಂಡ್ತಿ ಕೈಗೆ ಸಿಕ್ಕಿ ಬಿದ್ದ ಗಂಡನಿಂದ ಐಫೋನ್ ವಿರುದ್ಧ ಕೇಸ್ ದಾಖಲು!