ಫ್ಲಿಪ್‌ಕಾರ್ಟ್‌ ಪ್ಯಾಕಿಂಗ್‌ಗೆ ಬಳಸಿದ ಪ್ಲಾಸ್ಟಿಕ್‌ ವಾಪಸ್ ಸಂಗ್ರಹ

By Web DeskFirst Published Nov 15, 2019, 8:52 AM IST
Highlights

ವಸ್ತುಗಳನ್ನು ಜನರಿಗೆ ತಲುಪಿಸಲು ಪ್ಲಾಸ್ಟಿಕ್ ನಲ್ಲಿ ಕಳಿಸುವ ಫ್ಲಿಪ್ ಕಾರ್ಟ್ ಈ ಪ್ಲಾಸ್ಟಿಕ್ ಅನ್ನು ಮತ್ತೆ ವಾಪಸ್ ಪಡೆಯಲಿದೆ. 

ನವದೆಹಲಿ [ನ.15]: ಪ್ಯಾಕಿಂಗ್‌ಗೆ ಬಳಸಲಾದ ಪ್ಲಾಸ್ಟಿಕ್‌ ಅನ್ನು ಫ್ಲಿಪ್‌ಕಾರ್ಟ್‌ ನಿಮ್ಮಿಂದ ಪುನಃ ಸಂಗ್ರಹಿಸಲಿದೆ. 

ಬೆಂಗಳೂರು, ಮುಂಬೈ, ದೆಹಲಿ ಮತ್ತು ಡೆಹ್ರಾಡೂನ್‌ ಸೇರಿದಂತೆ 7 ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದಾಗಿ ಫ್ಲಿಪ್‌ಕಾರ್ಟ್‌ ಗುರುವಾರ ತಿಳಿಸಿದೆ. 2021ರ ವೇಳೆಗೆ ಏಕ ಬಳಕೆ ಪ್ಲಾಸ್ಟಿಕ್‌ ಅನ್ನು ಸಂಪುರ್ಣ ಮರು ಬಳಕೆ ಮಾಡುವ ಗುರಿಯನ್ನು ಫ್ಲಿಪ್‌ಕಾರ್ಟ್‌ ಹೊಂದಿದೆ. 

ಭೇಷ್ ಬಾಲಕ, ಅಮೆಜಾನ್, ಫ್ಲಿಪ್ ಕಾರ್ಟ್‌ಗೆ ಎಂಥ ಏಟು ಕೊಟ್ಯಪ್ಪಾ!...

ಹೀಗಾಗಿ ಪ್ಲಾಸ್ಟಿಕ್‌ ಪ್ಯಾಕ್‌ಗಳನ್ನು ಡೆಲಿವರಿ ಸಿಬ್ಬಂದಿಗೆ ಸ್ವಯಂಪ್ರೇರಿತವಾಗಿ ಹಸ್ತಾಂತರಿಸುವಂತೆ ಫ್ಲಿಪ್‌ಕಾರ್ಟ್‌ ಗ್ರಾಹಕರಿಗೆ ಸಂದೇಶವೊಂದನ್ನು ಕಳುಹಿಸಲಿದೆ. ಸಂಗ್ರಹಿಸಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ನೋಂದಾಯಿತ ವ್ಯಾಪಾರಿಗಳಿಗೆ ಕಳುಹಿಸಿ ಅವು ಪುನಃ ಬಳಕೆ ಆಗುವಂತೆ ಹಾಗೂ ಭೂಮಿಗೆ ಸೇರದಂತೆ ನೋಡಿಕೊಳ್ಳಲಾಗುತ್ತದೆ.

ಫ್ಲಿಪ್‌ಕಾರ್ಟ್‌ ಪ್ಯಾಕಿಂಗ್‌ಗೆ ಬಳಸಿದ ಪ್ಲಾಸ್ಟಿಕ್‌ ವಾಪಸ್ ಸಂಗ್ರಹ

ಯಾವುದೇ ಒಂದು ವಸ್ತುವನ್ನು ಆರ್ಡರ್ ಮಾಡಿದಾಗ ಫ್ಲಿಪ್ ಕಾರ್ಟ್ ವಸ್ತುವನ್ನು ಫ್ಲಾಸ್ಟಿಕ್ ನಲ್ಲಿ ಕಳಿಸುತ್ತದೆ.  ಇದೀದಗ ಎಲ್ಲೆಡೆ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿರುವುದರಿಂದ ಫ್ಲಿಪ್ ಕಾರ್ಟ್ ಮತ್ತೆ  ವಾಪಸ್ ಸಂಗ್ರಹಕ್ಕೆ ಮುಂದಾಗಿದೆ. 

ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಫ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುವುದು ತಪ್ಪಲಿದೆ. 

click me!