ಪ್ರಧಾನಿ ನರೇಂದ್ರ ಮೋದಿ ಜೂನ್ 27 ರಂದು ಹತ್ತು ಹಲವು ಕಾರ್ಯಕ್ರಮಗಳಿಗಾಗಿ ಮಧ್ಯಪ್ರದೇಶಕ್ಕೆ ಬೇಟಿ ನೀಡುತ್ತಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ, 3.57 ಕೋಟಿ ಫಲಾನುಭವಿಗಳಿಗೆ ʻಆಯುಷ್ಮಾನ್ ಕಾರ್ಡ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ.
ನವದೆಹಲಿ(ಜೂ.26) ಅಮೆರಿಕ, ಈಜಿಪ್ಟ್ ಪ್ರವಾಸ ಮುಗಿಸಿ ತವರಿಗೆ ಮರಳಿರುವ ಪ್ರಧಾನಿ ಮೋದಿ ಎಂದಿನಂತೆ ತಮ್ಮ ಕೆಲಸ ಕಾರ್ಯಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಳೆಯಿಂದ ಮತ್ತೆ ಮೋದಿ ಹಲವು ಕಾರ್ಯಕ್ರಮಗಳ ನಿಮಿತ್ತ ರಾಜ್ಯ ಪ್ರವಾಸಗಳು ಆರಂಭಗೊಳ್ಳುತ್ತಿದೆ. ಜೂನ್ 27 ರಂದು ಮೋದಿ ಮಧ್ಯಪ್ರದೇಶಕ್ಕೆ ಬೇಟಿ ನೀಡುತ್ತಿದ್ದಾರೆ. ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಐದು ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿರುವ ಪ್ರಧಾನಿ, ರಾಷ್ಟ್ರೀಯ ʻಸಿಕಲ್ ಸೆಲ್ ರಕ್ತಹೀನತೆ ನಿರ್ಮೂಲನೆ ಅಭಿಯಾನʼಕ್ಕೆ ಚಾಲನೆ, ಆಯುಷ್ಮಾನ್ ಕಾರ್ಡ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳತ್ತಿದ್ದಾರೆ.
ಬೆಳಿಗ್ಗೆ 10:30ಕ್ಕೆ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣಕ್ಕೆ ತಲುಪಿ, ಐದು `ವಂದೇ ಭಾರತ್’ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಶಹದೋಲ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿಯವರು, ಅಲ್ಲಿ ರಾಣಿ ದುರ್ಗಾವತಿ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ʻಸಿಕಲ್ ಸೆಲ್ ರಕ್ತಹೀನತೆ ನಿರ್ಮೂಲನೆ ಅಭಿಯಾನʼಕ್ಕೆ ಚಾಲನೆ ನೀಡಲಿರುವ ಪ್ರಧಾನಿ, ʻಆಯುಷ್ಮಾನ್ ಕಾರ್ಡ್ʼಗಳ ವಿತರಣೆಗೂ ಚಾಲನೆ ನೀಡಲಿದ್ದಾರೆ. ಶಹದೋಲ್ ಜಿಲ್ಲೆಯ ಪಕಾರಿಯಾ ಗ್ರಾಮಕ್ಕೂ ಪ್ರಧಾನಮಂತ್ರಿಯವರು ಭೇಟಿ ನೀಡಲಿದ್ದಾರೆ.
ದಶಕದ ಹಿಂದೆ ಸಾಮಾನ್ಯ ವ್ಯಕ್ತಿಯಾಗಿ ಶ್ವೇತಭವನ ನೋಡಿದ್ದೆ, ನೆನಪು ಬಿಚ್ಚಿಟ್ಟ ಪ್ರಧಾನಿ ಮೋದಿ!
ಭೋಪಾಲ್‌ನಲ್ಲಿ ಪ್ರಧಾನ ಮಂತ್ರಿ: ಭೋಪಾಲ್‌ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಐದು ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಆ ಐದು ʻವಂದೇ ಭಾರತ್ʼ ರೈಲುಗಳೆಂದರೆ: ʻರಾಣಿ ಕಮಲಾಪತಿ-ಜಬಲ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ʼ; ʻಖಜುರಾಹೊ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್ʼ; ʻಮಡಗಾಂವ್ (ಗೋವಾ) - ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ʼ; ʻಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ʼ; ಮತ್ತು ʻಹಟಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ʼ.
ರಾಣಿ ಕಮಲಾಪತಿ-ಜಬಲ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಹಾಕೌಶಲ್ ಪ್ರದೇಶವನ್ನು (ಜಬಲ್ಪುರ) ಮಧ್ಯಪ್ರದೇಶದ ಕೇಂದ್ರ ಭಾಗಕ್ಕೆ (ಭೋಪಾಲ್) ಸಂಪರ್ಕಿಸುತ್ತದೆ. ಅಲ್ಲದೆ, ಭೇರಾಘಾಟ್, ಪಚ್ಮರಿ, ಸತ್ಪುರ ಮುಂತಾದ ಪ್ರವಾಸಿ ಸ್ಥಳಗಳು ಸುಧಾರಿತ ಸಂಪರ್ಕದಿಂದ ಪ್ರಯೋಜನ ಪಡೆಯಲಿವೆ. ಈ ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ವೇಗದ ರೈಲಿಗೆ ಹೋಲಿಸಿದರೆ ಈ ರೈಲು ಸುಮಾರು ಮೂವತ್ತು ನಿಮಿಷಗಳಷ್ಟು ವೇಗವಾಗಿ ತಲುಪುತ್ತದೆ.
ʻಖಜುರಾಹೊ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಮಾಲ್ವಾ ಪ್ರದೇಶ (ಇಂದೋರ್) ಮತ್ತು ಬುಂದೇಲ್‌ಖಂಡ್ ಪ್ರದೇಶದಿಂದ (ಖಜುರಾಹೊ) ರಾಜ್ಯದ ಕೇಂದ್ರ ಭಾಗಕ್ಕೆ (ಭೋಪಾಲ್) ಸಂಪರ್ಕವನ್ನು ಸುಧಾರಿಸುತ್ತದೆ. ಇದರಿಂದ ಪ್ರಮುಖ ಪ್ರವಾಸಿ ತಾಣಗಳಾದ ಮಹಾಕಾಲೇಶ್ವರ, ಮಾಂಡು, ಮಹೇಶ್ವರ, ಖಜುರಾಹೊ, ಪನ್ನಾಗಳಿಗೆ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ವೇಗದ ರೈಲಿಗಿಂತ ರೈಲು ಸುಮಾರು ಎರಡು ಗಂಟೆ ಮೂವತ್ತು ನಿಮಿಷಗಳ ವೇಗವಾಗಿ ಇದು ಸಂಚರಿಸುತ್ತದೆ.
ಶ್ವೇತಭವನದ ಆತ್ಮೀಯ ಅತಿಥ್ಯಕ್ಕೆ ವಿಡಿಯೋ ಮೂಲಕ ಪ್ರಧಾನಿ ಮೋದಿ ಧನ್ಯವಾದ!
ʻಮಡಗಾಂವ್ (ಗೋವಾ) - ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ʼ - ಇದು ಗೋವಾದ ಮೊದಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲಾಗಿದೆ. ಇದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಗೋವಾದ ಮಡಗಾಂವ್ ನಿಲ್ದಾಣದ ನಡುವೆ ಚಲಿಸುತ್ತದೆ. ಎರಡು ಸ್ಥಳಗಳನ್ನು ಸಂಪರ್ಕಿಸುವ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಇದು ಸುಮಾರು ಒಂದು ಗಂಟೆಯ ಪ್ರಯಾಣದ ಸಮಯವನ್ನು ಉಳಿಸಲು ಸಹಾಯಕಾರಿ.
ʻಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ʼ ಕರ್ನಾಟಕದ ಪ್ರಮುಖ ನಗರಗಳಾದ ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆಯನ್ನು ರಾಜ್ಯದ ರಾಜಧಾನಿ ಬೆಂಗಳೂರಿನೊಂದಿಗೆ ಸಂಪರ್ಕಿಸುತ್ತದೆ. ಇದು ಈ ಪ್ರದೇಶದ ಪ್ರವಾಸಿಗರು, ವಿದ್ಯಾರ್ಥಿಗಳು, ಕೈಗಾರಿಕೋದ್ಯಮಿಗಳು ಮುಂತಾದವರಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ. ಈ ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ವೇಗದ ರೈಲಿಗೆ ಹೋಲಿಸಿದರೆ ಈ ರೈಲು ಸುಮಾರು ಮೂವತ್ತು ನಿಮಿಷಗಳಷ್ಟು ವೇಗವಾಗಿರುತ್ತದೆ.
ʻಹತಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ʼ - ಇದು ಜಾರ್ಖಂಡ್ ಮತ್ತು ಬಿಹಾರಕ್ಕೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲಾಲಿದೆ. ಪಾಟ್ನಾ ಮತ್ತು ರಾಂಚಿ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಈ ರೈಲು ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ವರದಾನವಾಗಲಿದೆ. ಎರಡು ಸ್ಥಳಗಳನ್ನು ಸಂಪರ್ಕಿಸುವ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಇದು ಸುಮಾರು ಒಂದು ಗಂಟೆ ಇಪ್ಪತ್ತೈದು ನಿಮಿಷಗಳ ಪ್ರಯಾಣದ ಸಮಯವನ್ನು ಉಳಿಸಲು ಸಹಾಯಕವಾಗಲಿದೆ.
ಶಹದೋಲ್‌ನಲ್ಲಿ ಪ್ರಧಾನ ಮಂತ್ರಿ: ಶಹದೋಲ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ʻರಾಷ್ಟ್ರೀಯ ಸಿಕಲ್ ಸೆಲ್ ರಕ್ತಹೀನತೆ ನಿರ್ಮೂಲನೆ ಅಭಿಯಾನʼಕ್ಕೆ ಚಾಲನೆ ನೀಡಲಿದ್ದಾರೆ. ಅವರು ಫಲಾನುಭವಿಗಳಿಗೆ ʻಸಿಕಲ್ ಸೆಲ್ ಅನುವಂಶಿಕ ಸ್ಥಿತಿಯ ಕಾರ್ಡ್ʼಗಳನ್ನು ವಿತರಿಸಲಿದ್ದಾರೆ.
ʻಸಿಕಲ್ ಸೆಲ್ʼ ರೋಗವನ್ನು, ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನರಲ್ಲಿ ಉಂಟಾಗುವ ಆರೋಗ್ಯ ಸವಾಲುಗಳನ್ನು ಪರಿಹರಿಸುವುದು ಈ ಅಭಿಯಾನದ ಗುರಿಯಾಗಿದೆ. 2047ರ ವೇಳೆಗೆ ʻಸಿಕಲ್ ಸೆಲ್ʼ ರೋಗವನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ತೊಡೆದುಹಾಕುವ ಸರ್ಕಾರದ ಪ್ರಯತ್ನಗಳಲ್ಲಿ ನಿರ್ಣಾಯಕ ಮೈಲುಗಲ್ಲಾಗಿ ಈ ಅಭಿಯಾನಕ್ಕೆ ಚಾಲನೆಯನ್ನು ಗುರುತಿಸಲಾಗಿದೆ. ʻರಾಷ್ಟ್ರೀಯ ಸಿಕಲ್ ಸೆಲ್ ರಕ್ತಹೀನತೆ ನಿರ್ಮೂಲನೆ ಅಭಿಯಾನʼವನ್ನು 2023ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಯಿತು. ಈ ಅಭಿಯಾನವನ್ನು ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ, ಕೇರಳ, ಬಿಹಾರ ಮತ್ತು ಉತ್ತರಾಖಂಡದಂತಹ ದೇಶದ 17ಕ್ಕೂ ಹೆಚ್ಚು ರಾಜ್ಯಗಳ 278 ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲಾಗುವುದು.
ಮಧ್ಯಪ್ರದೇಶದಲ್ಲಿ ಸುಮಾರು 3.57 ಕೋಟಿ ʻಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆʼ (ಎಬಿ-ಪಿಎಂಜೆಎವೈ) ಕಾರ್ಡ್‌ಗಳ ವಿತರಣೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ. ʻಆಯುಷ್ಮಾನ್ ಕಾರ್ಡ್ʼಗಳ ವಿತರಣಾ ಸಮಾರಂಭವನ್ನು ರಾಜ್ಯದಾದ್ಯಂತ ನಗರಾಡಳಿತ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಅಭಿವೃದ್ಧಿ ಬ್ಲಾಕ್‌ಗಳಲ್ಲಿ ಆಯೋಜಿಸಲಾಗುತ್ತಿದೆ. ʻಆಯುಷ್ಮಾನ್ ಕಾರ್ಡ್ʼ ವಿತರಣಾ ಅಭಿಯಾನವು ಕಲ್ಯಾಣ ಯೋಜನೆಗಳ ಶೇಕಡಾ 100ರಷ್ಟು ಪರಿಪೂರ್ಣತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ಫಲಾನುಭವಿಯನ್ನು ತಲುಪಬೇಕೆಂಬ ಪ್ರಧಾನ ಮಂತ್ರಿಯವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಯಾಗಿದೆ.
ಕಾರ್ಯಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು 'ರಾಣಿ ದುರ್ಗಾವತಿ ಗೌರವ ಯಾತ್ರೆ'ಯ ಸಮಾರೋಪದ ಸಂದರ್ಭದಲ್ಲಿ ರಾಣಿ ದುರ್ಗಾವತಿ ಅವರಿಗೆ ಗೌರವ ವಂದನೆ ಸಲ್ಲಿಸಲಿದ್ದಾರೆ. ರಾಣಿ ದುರ್ಗಾವತಿಯ ಶೌರ್ಯ ಮತ್ತು ತ್ಯಾಗವನ್ನು ಜನಪ್ರಿಯಗೊಳಿಸಲು ಮಧ್ಯಪ್ರದೇಶ ಸರ್ಕಾರ ಈ ಯಾತ್ರೆಯನ್ನು ಆಯೋಜಿಸುತ್ತಿದೆ. ರಾಣಿ ದುರ್ಗಾವತಿ, 16ನೇ ಶತಮಾನದ ಮಧ್ಯಭಾಗದಲ್ಲಿ ಗೊಂಡ್ವಾನಾದಲ್ಲಿ ಆಳ್ವಿಕೆ ನಡೆಸಿದರು. ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಟ್ಟ, ನಿರ್ಭೀತ ಮತ್ತು ಧೀಮಂತ ಯೋಧೆಯಾಗಿ ಅವರನ್ನು ಸ್ಮರಿಸಲಾಗುತ್ತದೆ.
ಪಕಾರಿಯಾ ಗ್ರಾಮದಲ್ಲಿ ಪ್ರಧಾನಿ: ವಿಶಿಷ್ಟ ಉಪಕ್ರಮವಾಗಿ ಪ್ರಧಾನಮಂತ್ರಿಯವರು ಶಹದೋಲ್ ಜಿಲ್ಲೆಯ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಲಿದ್ದು, ಬುಡಕಟ್ಟು ಸಮುದಾಯದ ಮುಖಂಡರು, ಸ್ವಸಹಾಯ ಗುಂಪುಗಳು, ಪಿಇಎಸ್ಎ [ಪಂಚಾಯತ್ (ಅನುಸೂಚಿತ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ, 1996] ಸಮಿತಿಗಳ ನಾಯಕರು ಹಾಗೂ ಗ್ರಾಮ ಫುಟ್ಬಾಲ್ ಕ್ಲಬ್‌ಗಳ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಬುಡಕಟ್ಟು ಮತ್ತು ಜಾನಪದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಯವರು ಸಾಕ್ಷಿಯಾಗಲಿದ್ದಾರೆ, ಜೊತೆಗೆ ಗ್ರಾಮದಲ್ಲಿ ಭೋಜನ ಕೂಟದಲ್ಲೂ ಭಾಗಿಯಾಗಲಿದ್ದಾರೆ.