Five States Election: ರ‍್ಯಾಲಿ, ಪಾದಯಾತ್ರೆ ರೋಡ್‌ ಶೋ ನಡೆಸುವಂತಿಲ್ಲ, ಏನಿದ್ರೂ ಡಿಜಿಟಲ್ ಪ್ರಚಾರ!

By Suvarna NewsFirst Published Jan 8, 2022, 4:27 PM IST
Highlights

* ಪಂಚರಾಜ್ಯ ಚುನಾವಣೆಗೆ ದಿನಾಂಕ ಫಿಕ್ಸ್

* ಕೊರೋನಾ ಆತಂಕದ ಮಧ್ಯೆ ನಡೆಯಲಿರುವ ಚುನಾವಣೆ

* ಕೊರೋನಾ ನಿಯಂತ್ರಣಕ್ಕೂ ಒತ್ತು ಕೊಟ್ಟ ಚುನಾವಣಾ ಆಯೋಗ

ನವದೆಹಲಿ(ಜ.08): ಕೊರೋನಾ ಮೂರನೇ ಅಲೆಯ ಭೀತಿ ನಡುವೆಯೂ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ ಚುನಾವಣಾ ಆಯೋಗ ಸುದ್ದಿಗೋಷ್ಠಿ ಆಯೋಜಿಸಿ ಚುನಾವಣೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ನೀಡಿದ್ದು, ಫೆ. 10 ರಿಂದ ಮಾರ್ಚ್ 7ರವರೆಗೆ ಪಂಚರಾಜ್ಯ ಚುನಾವಣೆಗೆ ದಿನಾಂಕ ಘೋಚಿಸಿದೆ. ಚುನಾವಣೆಯಲ್ಲಿ ಹಣಬಲದ ಬಳಕೆ ನಿಲ್ಲಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.

ಅಕ್ರಮ ಹಣ ಮತ್ತು ಮದ್ಯದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು. ಎಲ್ಲಾ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಹಣ ದುರುಪಯೋಗ, ಅಕ್ರಮ ಹಣ ಮತ್ತು ಮದ್ಯದ ದುರುಪಯೋಗವನ್ನು ಶೂನ್ಯ ಸಹಿಷ್ಣುತೆ ಇರುತ್ತದೆ. ಎಲ್ಲಾ ಏಜೆನ್ಸಿಗಳು ಅಲರ್ಟ್ ಆಗಿರುತ್ತವೆ. ಸುವಿಧಾ ಆಪ್ ಅನ್ನು ಎಲ್ಲಾ ರಾಜಕೀಯ ಪಕ್ಷಗಳಿಗಾಗಿ ಮಾಡಲಾಗಿದೆ. ವಿಧಾನಸಭೆ ಚುನಾವಣೆ ವೆಚ್ಚದ ಮಿತಿಯನ್ನು ಹೆಚ್ಚಿಸಲಾಗಿದೆ. ಎಲ್ಲಾ ಐದು ರಾಜ್ಯಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.

"

Assembly Election 2022: ಫೆ. 10 ರಿಂದ ಮಾರ್ಚ್ 7ರವರೆಗೆ ಪಂಚರಾಜ್ಯ ಚುನಾವಣೆ, ರ‍್ಯಾಲಿ, ಪಾದಯಾತ್ರೆ, ರೋಡ್‌ಶೋ ಎಲ್ಲವೂ ಬಂದ್!

ರ‍್ಯಾಲಿ, ರೋಡ್ ಶೋ ಮತ್ತು ಪಾದಯಾತ್ರೆಗೆ ಅವಕಾಶವಿಲ್ಲ

ಚುನಾವಣಾ ಪಕ್ಷಗಳಿಗೆ ಡಿಜಿಟಲ್, ವರ್ಚುವಲ್ ರೀತಿಯಲ್ಲಿ ಪ್ರಚಾರ ಮಾಡಲು ಆಯೋಗಗ ನಿರ್ದೇಶಿಸಿದೆ. ಕೊರೋನಾ ಪ್ರಕರಟಣಗಳು ಹೆಚ್ಚುತ್ತಿರುವ ಹಿನ್ನೆಲೆ ಜನವರಿ 15 ರವರೆಗೆ ಯಾವುದೇ ರ‍್ಯಾಲಿ, ರೋಡ್‌ಶೋ ಮತ್ತು ಪಾದಯಾತ್ರೆ ಮಾಡಲು ಅವಕಾಶವಿಲ್ಲ. ತದ ನಂತರ ಪರಿಸ್ಥಿತಿ ಅವಲೋಕಿಸಿ ಮುಂದಿನ ಸೂಚನೆ ನೀಡುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 

ಕೊರೋನಾ ವೈರಸ್ ನಡುವೆ ಚುನಾವಣೆ ನಡೆಸುವುದು ಸವಾಲಿನ ಸಂಗತಿಯಾಗಿದೆ, ಆದರೆ ಇದು ನಮ್ಮ ಕರ್ತವ್ಯ ಎಂದು ಚುನಾವಣಾ ಆಯೋಗ ಹೇಳಿದೆ. ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲಾಗಿದ್ದು, ಕೊರೋನಾ ನಿಯಮಗಳ ಪ್ರಕಾರ ಚುನಾವಣೆ ನಡೆಸುತ್ತೇವೆ ಎಂದೂ ಆಯೋಗ ಸ್ಪಷ್ಟಪಡಿಸಿದೆ. 

ಐದು ರಾಜ್ಯಗಳ ವಿಧಾನಸಭೆಗಳ ಅವಧಿ ಮುಗಿಯಲಿದೆ. 690 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಒಟ್ಟು 18.3 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಕೊರೋನಾದಲ್ಲಿ ಚುನಾವಣೆ ನಡೆಸುವುದು ಮುಖ್ಯ. ಇದಕ್ಕಾಗಿ ಹೊಸ ಪ್ರೋಟೋಕಾಲ್‌ಗಳನ್ನು ರಚಿಸಲಾಗಿದೆ. ಒಂದಷ್ಟು ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಈ ಬಾರಿ ಕೋವಿಡ್ ಮುಕ್ತ ಚುನಾವಣೆಗಳು, ಮತದಾರರ ಅನುಕೂಲತೆ ಮತ್ತು ಗರಿಷ್ಠ ಮತದಾರರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಉದ್ದೇಶಗಳ ಮೇಲೆ ಕೆಲಸ ಮಾಡಿದ್ದೇವೆ ಎಂದಿದ್ದಾರೆ.

2.15 ಲಕ್ಷ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1250 ಮತದಾರರು ಇರುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತಗಟ್ಟೆ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ಕಾರ್ಯನಿರ್ವಹಿಸಲಿದೆ. 690 ಕ್ಷೇತ್ರಗಳಲ್ಲಿ ಇಂತಹ 1620 ಮತಗಟ್ಟೆಗಳಿರುತ್ತವೆ.
 
ಎರಡೂ ಡೋಸ್ ಲಸಿಕೆ ಅಗತ್ಯ

ಪ್ರತಿ ರಾಜ್ಯದ ಅಸೆಂಬ್ಲಿ ಸ್ಥಾನದ ಅವಧಿಯು ಐದು ವರ್ಷಗಳು ಮಾತ್ರ. ಪ್ರಜಾಸತ್ತಾತ್ಮಕ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಸಕಾಲಿಕ ಚುನಾವಣೆಗಳು ಅತ್ಯಗತ್ಯ. ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಎಲ್ಲಾ ಅಧಿಕಾರಿಗಳು ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡವರು. ಅವರಿಗೆ ಹೆಚ್ಚುವರಿ ಮುನ್ನೆಚ್ಚರಿಕೆಯ ಪ್ರಮಾಣವನ್ನು ಸಹ ನೀಡಬಹುದು.

click me!