ಇದ್ದಕ್ಕಿದ್ದಂತೆ ಕುಸಿದ ಸ್ಲಾಬ್‌: ಚರಂಡಿಯೊಳಗೆ ಬಿದ್ದ ಐವರು, ವಿಡಿಯೋ

Published : Apr 14, 2022, 08:19 PM IST
ಇದ್ದಕ್ಕಿದ್ದಂತೆ ಕುಸಿದ ಸ್ಲಾಬ್‌: ಚರಂಡಿಯೊಳಗೆ ಬಿದ್ದ ಐವರು, ವಿಡಿಯೋ

ಸಾರಾಂಶ

ಚರಂಡಿ ಮೇಲಿನ ಸಿಮೆಂಟ್ ಸ್ಲಾಬ್‌ ಕುಸಿತ ಚರಂಡಿಯೊಳಗೆ ಬಿದ್ದ ಐವರು ಜೈಸಲ್ಮೇರ್‌ನ ಬಾಬಾ ಬಾವಡಿ ಪ್ರದೇಶದಲ್ಲಿ ಘಟನೆ

ಜೈಸಲ್ಮೇರ್‌(ಏ.14): ಚರಂಡಿ ಮೇಲಿನ ಸಿಮೆಂಟ್ ಸ್ಲಾಬ್‌ ಕುಸಿದು ಐವರು ಚರಂಡಿಯೊಳಗೆ ಬಿದ್ದ ಘಟನೆ ರಾಜಸ್ಥಾನದ ಜೈಸಲ್ಮೇರ್‌ನ ಬಾಬಾ ಬಾವಡಿ (Baba bavadi) ಪ್ರದೇಶದಲ್ಲಿ  ನಡೆದಿದೆ, ಅದೃಷ್ಟವಶಾತ್ ಈ ವೇಳೆ ಚರಂಡಿ ಒಣಗಿತ್ತು. ಘಟನೆಯಲ್ಲಿ ಐವರು ಪುರುಷರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಘಟನೆಯೂ ರಾಜಸ್ಥಾನದ (Rajasthan) ಜೈಸಲ್ಮೇರ್‌ನಲ್ಲಿ (Jaisalmer) ಈ ತಿಂಗಳ ಆರಂಭದಲ್ಲಿ ನಡೆದಿದ್ದಾಗಿದೆ. ಆ ಸಂದರ್ಭದಲ್ಲಿ ಸ್ಥಳೀಯ ಸಿಸಿಟಿವಿಯಲ್ಲಿ(Cctv) ಸೆರೆಯಾಗಿದ್ದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಸಮಯದಂತೆ ಈ ಘಟನೆ ಏಪ್ರಿಲ್ 7 ರಂದು ರಾತ್ರಿ 9.30 ರ ಸುಮಾರಿಗೆ ಸಂಭವಿಸಿದೆ. ಬೈಕ್ ರಿಪೇರಿ ಅಂಗಡಿಯಂತೆ ಕಾಣುವ ಸ್ಥಳದಲ್ಲಿ ನಾಲ್ಕು ಪುರುಷರು ನಿಂತು ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ವಾಹನವನ್ನು ರಿಪೇರಿ ಮಾಡುತ್ತಾ ನೆಲದ ಮೇಲೆ ಕುಳಿತಿದ್ದಾನೆ. ಉಳಿದವರು ಆತನ ಮುಂದೆ ನಿಂತು ಹರಟೆ ಹೊಡೆಯುತ್ತಿದ್ದಾರೆ. 

ಈ ವೇಳೆ ಇದ್ದಕ್ಕಿದ್ದಂತೆ ಅವರು ನಿಂತಿದ್ದ ಕಾಂಕ್ರೀಟ್ ಸ್ಲಾಬ್‌ಗಳು ಕುಸಿದಿದ್ದು, ಎಲ್ಲರೂ ಚರಂಡಿಯೊಳಗೆ ಬಿದ್ದಿದ್ದಾರೆ. ರಿಪೇರಿ ಮಾಡುತ್ತಿದ್ದ ಬೈಕ್ ಅವರ ಮೇಲೆ ಬಿದ್ದಿದೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಚರಂಡಿಯೊಳಗೆ ಬಿದ್ದವರಿಗೆ ಅಂತಹ ದೊಡ್ಡ ಗಾಯಗಳಾಗಿಲ್ಲ. ಆದರೆ ಇದು ಹೇಗೆ ಒಮ್ಮಿಂದೊಮ್ಮಲೆ ಕುಸಿಯಿತು ಎಂದು ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಬದಿಯಲ್ಲಿರುವ ಹಲವಾರು ಪಂಕ್ಚರ್-ರಿಪೇರಿ ಅಂಗಡಿಗಳು ಪಾದಚಾರಿ ಮಾರ್ಗಗಳು ಮತ್ತು ಚರಂಡಿಗಳ ಮೇಲೆಯೇ ಇವೆ ಎಂದು ವಿಡಿಯೋ ನೋಡಿದವರು ಕಾಮೆಂಟ್ ಮಾಡಿದ್ದಾರೆ.

Harapanahalli: ಭಾರಿ ಮಳೆ, ಗಾಳಿಗೆ ಕುಸಿದು ಬಿದ್ದ ಟೋಲ್‌ ಗೇಟ್‌: ಹೆದ್ದಾರಿ ಬಂದ್‌

ಒಂದಿಲ್ಲೊಂದು ವಿವಾದ, ಅಕ್ರಮಗಳಿಂದ ಪದೇ ಪದೇ ಸುದ್ದಿಯಾಗೋ ಚಿತ್ರದುರ್ಗ ಜಿಲ್ಲಾಸ್ಪತ್ರೆ (Chitradurga Hospital)ಇದೀಗ ಮತ್ತೊಂದು ವಿಚಾರಕ್ಕೆ ಮುನ್ನೆಲೆಗೆ ಬಂದಿದೆ. ಅಧಿಕಾರಿಗಳ ಯಡವಟ್ಟೋ ಇಲ್ಲ ನಿರ್ಲಕ್ಷವೋ ಗೊತ್ತಿಲ್ಲ ಸ್ವಲ್ಪದರಲ್ಲೇ ಬಡ ಜೀವಗಳು ಪಾರಾಗಿವೆ. ಒಂದಿಲ್ಲೊಂದು ವಿವಾದ ಅಕ್ರಮಗಳಿಂದಲೇ ಪದೇಪದೇ ಸುದ್ದಿಯಾಗುತ್ತಿದ್ದ ಈ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ ಇದೀಗ ಅಧಿಕಾರಿಗಳ ನಿರ್ಲಕ್ಷಕ್ಕೆ ಮತ್ತೆ ಸುದ್ದಿಯಾಗುತ್ತಿದೆ. ಕಳೆದ ಆರು ದಿನಗಳ ಹಿಂದೆ ಆಸ್ಪತ್ರೆಯ ಜನನ ಮರಣ ವಿಭಾಗದ ಕೊಠಡಿಯಲ್ಲಿ ಊಟ ಮಾಡಲು ಕುಳಿತಿದ್ದ ಐವರು ನರ್ಸ್ ಗಳ ಏಕಾಏಕಿ ಮೇಲ್ಚಾವಣಿ ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳ ಹೊಡತಕ್ಕೆ ಓರ್ವ ಗಂಭೀರವಾಗಿ ಗಾಯಗೊಂಡ್ರೆ, ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಇಷ್ಟೆಲ್ಲಾ ಘಟನೆ ನಡೆದ್ರು ತುಟಿಕ್ ಪಿಟಿಕ್ ಎನ್ನದೆ ಪ್ರಕರಣ ಮುಚ್ಚಿಹಾಕಲು ಮೇಲಾಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತುಂಬಿ ಹರಿಯುವ ಚರಂಡಿಗಿಳಿದು ಸ್ವಚ್ಛಗೊಳಿಸಿದ ಎಎಪಿ ನಾಯಕ

ಇನ್ನು ಕಳೆದ ಐದಾರು ದಿನಗಳಿಂದ ಮುಚ್ಚಿಹೋಗುವ ಹಂತದಲ್ಲಿದ್ದ ಪ್ರಕರಣ ಇದ್ದಕ್ಕಿದ್ದಂತೆ ಚರ್ಚೆಗೆ ಗ್ರಾಸವಾಗ್ತಿದ್ದಂತೆ. ಕೂಡಲೇ ಎಚ್ಚೆತ್ತಿರೋ ಅಧಿಕಾರಿಗಳು ಇದೀಗ ಮೇಲ್ಛಾವಣಿ ಕುಸಿದು ಬಿದ್ದಿದ್ದ ಜಾಗದಲ್ಲಿ ಕಾಮಗಾರಿ ಆರಂಭಿಸಿದ್ದಾರೆ. ಏನೂ ಆಗೇ ಇಲ್ಲ ಎಂಬಂತೆ ಸನ್ನಿವೇಶ ಸೃಷ್ಟಿಮಾಡಿ ಕೆಲಸಗಳು ಸದ್ಯ ಆಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ