'ಪರಿವರ್ತನ್ ಕಾ ಟೀಕಾ':ತೃತೀಯ ಲಿಂಗಿಗಳಿಗೆ ಲಸಿಕಾ ಅಭಿಯಾನ!

By Suvarna NewsFirst Published Sep 24, 2021, 1:24 PM IST
Highlights

* ತೃತೀಯ ಲಿಂಗಿಗಳಿಗೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವಾದ 'ಪರಿವರ್ತನ್ ಕಾ ಟೀಕಾ' ಪ್ರಾರಮಭ

* ಮುಂದಿನ ಆರು ತಿಂಗಳುಗಳಲ್ಲಿ ಭಿನ್ನಲಿಂಗಿ ಸಮುದಾಯಕ್ಕೆ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿ

* ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್‌ನಿಂದ ಉಚಿತ ಲಸಿಕೆ ಅಭಿಯಾನ

ಬೆಂಗಳೂರು(ಸೆ.24): ಸಮಾನ ಲಸಿಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಒಂದು ಸಾಮಾಜಿಕ ಉದ್ಯಮವಾದ ಕಿನೀರ್ ಸರ್ವೀಸಸ್ -  'ಪರಿವರ್ತನ್ ಕಾ ಟೀಕಾ' ಘೋಷಿಸಿದೆ.- ಇದು ರಾಷ್ಟ್ರವ್ಯಾಪಿ ತೃತೀಯ ಲಿಂಗಿ(Transgender) ಸಮುದಾಯಕ್ಕೆ ಉಚಿತ ಲಸಿಕೆಯನ್ನು ಒದಗಿಸುವ ಉಪಕ್ರಮವಾಗಿದೆ. ಈ ಉಪಕ್ರಮವು ಮುಂದಿನ ಆರು ತಿಂಗಳಲ್ಲಿ ಭಿನ್ನಲಿಂಗಿ ಸಮುದಾಯದ ಎಲ್ಲಾ ಸದಸ್ಯರಿಗೆ ಸಂಪೂರ್ಣವಾಗಿ ಲಸಿಕೆ ನೀಡುವ ಗುರಿಯನ್ನು ಹೊಂದಿದೆ.

ಕಿನೀರ್ ಅಪೊಲೊ ಹಾಸ್ಪಿಟಲ್ಸ್ ಮತ್ತು ಎನ್‌ಜಿಒಗಳ 200 ಕೇಂದ್ರಗಳಲ್ಲಿ ಶಿಬಿರಗಳನ್ನು ಆಯೋಜಿಸಲಿದೆ ಮತ್ತು ವ್ಯಕ್ತಿಗಳು ತಮ್ಮ ಪ್ರದೇಶದಲ್ಲಿನ ಆಯ್ದ ಲಸಿಕಾ ಶಿಬಿರದಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಈ ಉಪಕ್ರಮವು ಜಾಗೃತಿ ಮೂಡಿಸುವ ಮತ್ತು ಕೋವಿಡ್-19(Covid 19) ವಿರುದ್ಧ ಸಮುದಾಯವನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.

ತಮ್ಮ ಆಲೋಚನೆಗಳನ್ನು ಹಂಚಿಕೊಂಡ ವಿಲ್ಲೂ ಪೂನವಾಲಾ ಚಾರಿಟೇಬಲ್ ಫೌಂಡೇಶನ್‌ನ ಸಿಇಓ ಆದ ಶ್ರೀ ಜಸ್ವಿಂದರ್ ನಾರಂಗ್ ಅವರು ಹೇಳಿದರು, "ದೇಶದಲ್ಲಿ ತೃತೀಯ ಲಿಂಗಿ(Transgender) ಸಮುದಾಯಕ್ಕೆ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ಲಕ್ಷ್ಮಿ ನಾರಾಯಣ್ ತ್ರಿಪಾಠಿ ಹಾಗೂ ಕಿನೀರ್ ಸರ್ವೀಸಸ್ ಅವರೊಂದಿಗೆ ಸಹಕರಿಸುತ್ತಿರುವುದು ನಮಗೆ ಸಂತೋಷ ತಂದಿದೆ. ಸಾಂಕ್ರಾಮಿಕ ರೋಗದಿಂದ ನಾವು ಹೊರಬರುವ ಏಕೈಕ ಮಾರ್ಗವೆಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಂಪೂರ್ಣವಾಗಿ ಲಸಿಕೆ ಮತ್ತು ಪ್ರತಿರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಈ ಉಪಕ್ರಮವು ಲಸಿಕೆಯನ್ನು ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದ್ದು ಇದು ಎಲ್ಲರಿಗೂ ಸಮಗ್ರ ಆರೋಗ್ಯ ರಕ್ಷಣೆಯ ನಮ್ಮ ಉದ್ದೇಶವನ್ನು ಬಲಪಡಿಸುತ್ತದೆ."

ಈ ಅಭಿಯಾನದ ಚಾಲನೆಯ ಬಗ್ಗೆ ಸಂತೋಷದಿಂದ ಮಾತನಾಡಿದ ಕಿನೀರ್ ಸರ್ವೀಸಸ್ ನ ಲಕ್ಷ್ಮಿ ತ್ರಿಪಾಠಿ ಹೇಳಿದರು, "ಲಸಿಕೆಗಳನ್ನು ಭಿನ್ನಲಿಂಗಿ ಸಮುದಾಯಕ್ಕೆ ನ್ಯಾಯಸಮ್ಮತವಾಗಿ ಮತ್ತು ಲಭ್ಯವಿರುವಂತೆ ಮಾಡುವಲ್ಲಿ ವಿಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್‌ ನೀಡಿದ ಬೆಂಬಲದಿಂದ ಕಿನೀರ್ ಸರ್ವೀಸಸ್‌ನಲ್ಲಿರುವ ನಮಗೆ ಬಹಳ ಸಂತೋಷವಾಗಿದೆ. ಈ ಉಪಕ್ರಮವು ಸಾಂಕ್ರಾಮಿಕರೋಗದ ವಿರುದ್ಧ ಹೋರಾಡುವ ಮತ್ತು ಯಾರೂ ಹಿಂದೆ ಉಳಿದಿಲ್ಲವೆಂದು ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿದೆ. ಈ ಉದಾತ್ತ ಉದ್ದೇಶಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿದ್ದಕ್ಕಾಗಿ ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್‌ಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು."

click me!