ಮೊದಲ ಬಾರಿ ಶಾಸಕನಾದ ಭೂಪೇಂದ್ರ ಪಟೇಲ್‌ಗೆ ಸಿಎಂ ಪಟ್ಟ; ಇದು ಬಿಜೆಪಿ ಅಚ್ಚರಿ!

By Suvarna NewsFirst Published Sep 12, 2021, 8:26 PM IST
Highlights
  • ಮೊದಲ ಬಾರಿ ಶಾಸಕನಾದ ಭೂಪೇಂದ್ರಗೆ ಸಿಎಂ ಸ್ಥಾನ
  • ಬಿಜೆಪಿ ಹೈಕಮಾಂಡ್ ಆಯ್ಕೆ ಊಹಿಸಲು ಸಾಧ್ಯವಿಲ್ಲ
  • ಘಟಾನುಘಟಿಗಳ ಬದಲು ಭೂಪೇಂದ್ರಗೆ ಸ್ಥಾನ

ಗುಜರಾತ್(ಸೆ.12): ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ಸರ್ಕಾರದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ವಿಜಯ್ ರೂಪಾನಿ ಬದಲು ಭೋಪೇಂದ್ರ ಬಾಯಿ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ ಭೂಪೇಂದ್ರ ಇದೇ ಮೊದಲ ಬಾರಿಗೆ ಶಾಸಕನಾಗಿ ಚುನಾಯಿತರಾಗಿದ್ದರು. ಆಗಲೇ ಸಿಎಂ ಪಟ್ಟ ಒಲಿದು ಬಂದಿದೆ.

ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್ ಅಚ್ಚರಿ ಆಯ್ಕೆ ಹಿಂದಿದೆ ಪ್ರಮುಖ ಕಾರಣ!

ಸಿಎಂ ರೇಸ್‌ನಲ್ಲಿ ಭೂಪೇಂದ್ರ ಪಟೇಲ್ ಹೆಸರು ಎಲ್ಲೂ ಕೇಳಿ ಬಂದಿಲ್ಲ. ಕಾರಣ 2017ರ ಚುನಾವಣೆಯಲ್ಲಿ ಮೊದಲ ಬಾರಿಗೆ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಪಟೇಲ್ ವಿರುದ್ಧ ಬರೋಬ್ಬರಿ 1 ಲಕ್ಷ ಮತಗಳ ಅಂತರದಿಂದ ಚುನಾವಣೆ ಗೆದ್ದಿದ್ದರು. ಮೊದಲ ಬಾರಿ ಶಾಸಕನಾದ ಭೂಪೇಂದ್ರ ಪಟೇಲ್‌ಗೆ ಇದೀಗ ಬಿಜೆಪಿ ಹೈಕಮಾಂಡ್ ಅತೀ ದೊಡ್ಡ ಹುದ್ದೆ ನೀಡಿದೆ.

ಭೂಪೇಂದ್ರ ಪಟೇಲ್‌ ಗಟೋಲ್ದಿಯಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಮಾಜಿ ಸಿಎಂ ಆನಂದಿ ಬೆನ್ ಪಟೇಲ್ ರಾಜ್ಯಪಾಲರಾಗಿ ಬಡ್ತಿ ಪಡೆದ ಬಳಿಕ  ಗಟೋಲ್ದಿಯಾ ಕ್ಷೇತ್ರದ ಟಿಕೆಟ್ ಭೂಪೇಂದ್ರ ಪಟೇಲ್ ಪಾಲಾಯಿತು. ಮೊದಲ ಚುನಾವಣೆಯಲ್ಲೇ ಭೂಪೇಂದ್ರ ಪಟೇಲ್ ತಮ್ಮ ಸಾಮರ್ಥ್ಯ ತೋರಿಸಿದರು.

ಸೆ.13ಕ್ಕೆ ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ!

ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನಕ್ಕೆ ಕೆಲ ಹೆಸರುಗಳನ್ನು  ಅಂತಿಮಗೊಳಿಸಿತ್ತು. ಇತ್ತ ನಿರ್ಗಮಿತಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಭೂಪೇಂದ್ರ ಪಟೇಲ್ ಹೆಸರು ಸೂಚಿಸಿದ್ದಾರೆ. ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯಲ್ಲೂ ಇವರ ಹೆಸರಿತ್ತು. ಹೀಗಾಗಿ ಮಿಂಚಿನ ವೇಗದಲ್ಲಿ ಆಯ್ಕೆ ನಡೆದಿದೆ. ಭೂಪೇಂದ್ರ ಪೇಟಲ್ ನಾಳೆ(ಸೆ.13) ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 
 

click me!