Menaka Guruswamy: ಇದೇ ಮೊದಲ ಬಾರಿಗೆ ರಾಜ್ಯಸಭೆಗೆ ಸಲಿಂಗಿ ಎಂಟ್ರಿ!

Kannadaprabha News   | Kannada Prabha
Published : Apr 07, 2026, 09:34 AM IST
Advocate Menaka Guruswamy elected to Rajya sabha

ಸಾರಾಂಶ

ಎನ್‌ಸಿಪಿ ನಾಯಕ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿದಂತೆ 19 ಮಂದಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ, ಹಲವು ಸದಸ್ಯರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಶಪಥ ಸ್ವೀಕರಿಸಿದ್ದು ಗಮನಾರ್ಹ.

ಪವಾರ್‌, ಅಠಾವಳೆ ಸೇರಿ 19 ಮಂದಿ ರಾಜ್ಯಸಭಾ ಸಂಸದರಾಗಿ ಶಪಥ

ನವದೆಹಲಿ: ಎನ್‌ಸಿಪಿ ನಾಯಕ ಶರದ್ ಪವಾರ್‌, ಕೇಂದ್ರ ಸಚಿವ ರಾಮದಾಸ್‌ ಅಠಾವಳೆ, ಸದನಕ್ಕೆ ಆಯ್ಕೆಯಾದ ಮೊದಲ ತೃತೀಯ ಲಿಂಗಿ ಮನೇಕಾ ಗುರುಸ್ವಾಮಿ ಸೇರಿದಂತೆ 19 ಮಂದಿ ಸೋಮವಾರ ರಾಜ್ಯಸಬಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಉಪ ರಾಷ್ಟ್ರಪತಿಯೂ ಆದ ರಾಜ್ಯಸಭೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್‌ ಸಮ್ಮುಖದಲ್ಲಿ ನಾಯಕರು ಶಪಥ ಸ್ವೀಕರಿಸಿದರು. ಈ ವೇಳೆ ಉಪ ಸಭಾಪತಿ ಹರಿವಂಶ್‌, ಕೇಂದ್ರ ಸಚಿವ ಕಿರಣ್‌ ರಿಜಿಜು, ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

ಮಹಾರಾಷ್ಟ್ರದ ಐವರು, ತಮಿಳುನಾಡಿನಿಂದ ಆರು, ಪಶ್ಚಿಮ ಬಂಗಾಳದಿಂದ ಐವರು ಮತ್ತು ಒಡಿಶಾದಿಂದ ಮೂವರು ಶಪಥ ಸ್ವೀಕರಿಸಿದರು. ಬಹುತೇಕರು ತಮ್ಮ ಪ್ರಾದೇಶಿಕ ಭಾಷೆಯಲ್ಲಿಯೇ ಶಪಥ ಮಾಡಿದ್ದು ಗಮನಾರ್ಹವಾಗಿತ್ತು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಮಿಳುನಾಡು ಚುನಾವಣೆಯಲ್ಲಿ 4 ಪ್ರಮುಖ ಪಕ್ಷಗಳಿಂದ ಬ್ರಾಹ್ಮಣರಿಗೆ ಒಂದೇ ಒಂದು ಟಿಕೆಟ್‌ ಇಲ್ಲ!
40 ವರ್ಷದ ಗಂಡ ಬೇಡ, ಪ್ರಿಯತಮ ಬೇಕು: ಯುವತಿ ಕೋರಿಕೆಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು