ದೇಶೀಯ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮಾನವ ಪ್ರಯೋಗ ಶುರು| ಭರವಸೆ ಮೂಡಿಸಿರುವ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆ
ಚಂಡೀಗಢ(ಜು.18): ದೇಶದ ಮೊದಲ ಕೊರೋನಾ ನಿಗ್ರಹ ಲಸಿಕೆಯಾಗುವ ಭರವಸೆ ಮೂಡಿಸಿರುವ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಯ ಮಾನವ ಪ್ರಯೋಗವನ್ನು ರೋಹ್ಟಕ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರಂಭಿಸಲಾಗಿದೆ.
ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು!
ಈ ಲಸಿಕೆಯು ಕೊರೋನಾ ನಿಗ್ರಹಕ್ಕೆ ಪರಿಣಾಮಕಾರಿಯೇ ಎಂಬ ಪರೀಕ್ಷೆಗಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆ ಸೇರಿದಂತೆ ದೇಶದ 12 ಭಾಗಗಳಲ್ಲಿ ಮನುಷ್ಯರ ಮೇಲೆ ಕೊವ್ಯಾಕ್ಸಿನ್ ಪ್ರಯೋಗ ನಡೆಯಲಿದೆ. ಈಗಾಗಲೇ ಬಿಹಾರದ ಪಟನಾದ ಏಮ್ಸ್‌ನಲ್ಲಿ ಮಾನವ ಪ್ರಯೋಗ ಆರಂಭವಾಗಿದ್ದು, ಇದೀಗ ರೋಹ್ಟಕ್‌ನಲ್ಲಿ ಪ್ರಯೋಗ ಆರಂಭವಾಗಿದೆ.
ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿದ ಹರಾರಯಣ ಆರೋಗ್ಯ ಸಚಿವ ಅನಿಲ್ ವಿಜ್, ‘ಭಾರತ್ ಬಯೋಟೆಕ್ ಸಿದ್ಧಪಡಿಸಿದ ಕೊರೋನಾ ಲಸಿಕೆಯ ಮಾನವ ಪ್ರಯೋಗವನ್ನು ರೋಹ್ಟಕ್‌ನಲ್ಲಿರುವ ಸ್ನಾತಕ್ಕೋತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರದಿಂದ ಆರಂಭವಾಗಿದೆ.
ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?
ಅಲ್ಲದೆ, ಈ ಲಸಿಕೆ ಪರೀಕ್ಷೆಗೆ ಒಳಪಟ್ಟಮೂವರ ಆರೋಗ್ಯದಲ್ಲಿ ಯಾವುದೇ ಅಡ್ಡ ಪರಿಣಾಮಗಳಾಗಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಲಸಿಕೆಯ ಪ್ರಯೋಗಕ್ಕೆ ಮತ್ತಷ್ಟುಜನರನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.