ಏಕ ಚುನಾವಣೆಯ ಮಸೂದೆ ಮಂಡನೆ, ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ವಿಪಕ್ಷ ಕಿಡಿ
ಒಂದು ದೇಶ, ಒಂದು ಚುನಾವಣೆ ಸಂವಿಧಾನ ವಿರೋಧಿ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಕಾಂಗ್ರೆಸ್ ಪಕ್ಷ ಇದನ್ನು ಸದನದಲ್ಲಿ ವಿರೋಧಿಸಲಿದೆ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ
ನವದೆಹಲಿ(ಡಿ.18): ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ 'ಒಂದು ದೇಶ, ಒಂದು ಚುನಾವಣೆ' ಕುರಿತ 2 ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಈ ಕುರಿತು ಆರಂಭ ವಾದ ಪರ-ವಿರೋಧ ಚರ್ಚೆ ಅಪೂರ್ಣಗೊಂಡಿದ್ದು, ಸರ್ಕಾರವು ಇದನ್ನು ತಕ್ಷಣವೇ ಅಂಗೀಕರಿಸಲು ಮುಂದಾಗದೇ ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸುವ ಇರಾದೆ ವ್ಯಕ್ತಪಡಿಸಿದೆ.
ಬುಧವಾರ ಈ ಬಗ್ಗೆ ನಿರ್ಧಾರ ಆಗು ವ ಸಾಧ್ಯತೆ ಇದ್ದು ಬಳಿಕ ಜೆಪಿಸಿ ರಚನೆ ಆಗಲಿದೆ. ಜೆಪಿಸಿಯಲ್ಲಿ 31 ಸಂಸದರು (21 ಲೋಕಸಭೆ, 10 ರಾಜ್ಯಸಭೆ) ಇರಲಿದ್ದು ಬಿಜೆಪಿಗರೇ ಅಧ್ಯಕ್ಷ ಆಗುವ ಸಂಭವವಿದೆ. 90 ದಿನಗಳಲ್ಲಿ ಇದು ವರದಿ ನೀಡಬೇಕು. ಇದು ಅನಗತ್ಯ ಚುನಾವಣಾ ಖರ್ಚು ವೆಚ್ಚ ತಪಿಸಲು ಹಾಗೂ ನೀತಿಸಂಹಿತೆ ಹೇರಿಕೆಯಿಂದ ಆಗುವ ಅಭಿವೃದ್ಧಿ ಚಟುವಟಿಕೆಗಳ ಸ್ಥಾಗಿತ್ಯ ವನ್ನು ತಡೆಯಲು ಸಹಕಾರಿ ಎಂದಿರುವ ಕೇಂದ್ರ ಸರ್ಕಾರ, ಇದರಿಂದ ಸಂವಿಧಾನಕೆ ಯಾವುದೇ ಹಾನಿ ಆಗುವುದಿಲ್ಲ ಎಂದು ಸಮರ್ಥಿಸಿ ಕೊಂಡಿದೆ. ಆದರೆ ಮಸೂದೆ ವಿರೋಧಿಸಿರುವ ಪ್ರತಿಪಕ್ಷಗಳು, ಇದನ್ನು ಸಂವಿಧಾನ ವಿರೋಧಿ ಎಂದು ಕರೆದಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿವೆ. ಜೊತೆಗೆ ಕರಡು ವರದಿಯನ್ನು ಜೆಪಿಸಿಗೆ ವಹಿಸುವಂತೆ ಒತ್ತಾಯಿಸಿದರು.
ಒಂದು ರಾಷ್ಟ್ರ ಒಂದು ಚುನಾವಣೆ ಹೇಗೆ ನಡೆಯುತ್ತದೆ? ಇದ್ರಿಂದ ದೇಶಕ್ಕಾಗುವ ಲಾಭಗಳೇನು?
ಮೇಘ್ರಾಲ್ ಸ್ಪಷ್ಟನೆ:
ಮಂಗಳವಾರ ಮಧ್ಯಾಹ್ನ ಸಂವಿಧಾನದ (129ನೇ ತಿದ್ದುಪಡಿ) ಮಸೂದೆ- 2024 (ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ) ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ- 2024 ಯನ್ನು ಮಂಡಿಸಿ ಕಾನೂನು ಸಚಿವ ಅರ್ಜುನ್ ರಾಮ್ ಮೇಟ್ಬಾಲ್ ಮಂಡಿಸಿದರು.
ಈ ವೇಳೆ ಮಾತನಾಡಿದ ಅವರು, 'ಏಕ ಚುನಾವಣೆಯಿಂದ ರಾಜ್ಯಗಳ ಅಧಿಕಾರಕ್ಕೆ ಧಕ್ಕೆ ಆಗುವುದಿಲ್ಲ. ಚುನಾವಣಾ ಸುಧಾರಣೆಗಳಿಗಾಗಿ ಕಾನೂನುಗಳನ್ನು ತರಲಾಗುತ್ತಿದೆ. ಈ ಮಸೂದೆ ಚುನಾವಣಾ ಪ್ರಕ್ರಿಯೆಯನ್ನು ಸರಾಗಗೊಳಿಸುವ ಪ್ರಕ್ರಿಯೆ ಆಗಿದೆ. ಈ ಮಸೂದೆಯಿಂದ ಸಂವಿಧಾನಕ್ಕೆ ಯಾವುದೇ ಹಾನಿಯಾಗುವುದಿಲ್ಲ. ನಾವು ರಾಜ್ಯಗಳ ಅಧಿಕಾರಕ್ಕೆ ಭಂಗ ತರುವುದಿಲ್ಲ' ಎಂದು ಸ್ಪಷ್ಟಪಡಿಸಿದರು. ನಂತರ ಅವರು ಮಸೂದೆಯನ್ನು ವ್ಯಾಪಕ ಸಮಾಲೋಚನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಪ್ರಸ್ತಾಪಿಸಿದರು.
ಸಂಸತ್ತಿನಲ್ಲಿ ಮೊದಲ ಸಲ ಇ-ವೋಟಿಂಗ್ ಬಿಲ್ ಪರ 269, ವಿರುದ್ಧ 198 ಮಂಡನೆಗೂ ಮುನ್ನ ಮಂಡನೆಯನ್ನೇ ವಿರೋಧಿಸಿದ ಪ್ರತಿಪಕ್ಷಗಳು ಮತಕ್ಕೆ ಹಾಕಲು ಕೋರಿದವು. ಆಗ ಹೊಸ ಸಂಸತ್ತಿನಲ್ಲಿ ಇದೇ ಮೊದಲ ಬಾರಿ ವಿದ್ಯುನ್ಮಾನ ಮತದಾನ (ಇ-ವೋಟಿಂಗ್) ನಡೆಯಿತು. ಆಗ ಮಸೂದೆ ಮಂಡನೆ ಪರ 269 ಹಾಗೂ ವಿರುದ್ದ 198 ಮತ ಬಂದವು.
ಮಸೂದೆಗೆ 3ನೇ 2ರಷ್ಟು ಬೆಂಬಲವಿಲ್ಲ ಎಂದು ಸಾಬೀತು: ಕಾಂಗ್ರೆಸ್ ಲೇವಡಿ ನವದೆಹಲಿ: ಮಸೂದೆ ಮಂಡನೆಗಾಗಿ ನಡೆದ ಮತದಾನದ ವೇಳೆ ಚಲಾವಣೆ ಆದ 461 ಮತಗಳಲ್ಲಿ 3ನೇ 2ರಷ್ಟು ಬಹುಮತಕ್ಕೆ 307 ಸದಸ್ಯರ ಬೆಂಬಲ ಬೇಕಿತ್ತು. ಆದರೆ ಸರ್ಕಾರವು ಕೇವಲ 269 ಮತ ಗಳಿಸಿತು. ಆದರೆ ವಿಪಕ 198 ಮತ ಗಳಿಸಿತು. ಇದು 'ಒಂದು ಚುನಾವಣೆ' ಪ್ರಸ್ತಾಪವು 3ನೇ 2 ಬಹುಮತ ಗಳಿಸಲು ವಿಫಲ ಆಗಿದೆ ಎಂಬುದರ ಸಂಕೇತ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಅವಧಿ ಪೂರ್ವ ಸರ್ಕಾರ ಬಿದ್ದರೆ ಬಾಕಿ ಅವಧಿಗಷ್ಟೇ ಎಲೆಕ್ಷನ್: ಏಕ ಚುನಾವಣೆ ವಿಧೇಯಕ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ
ಒಂದು ದೇಶ, ಒಂದು ಚುನಾವಣೆ ಸಂವಿಧಾನ ವಿರೋ ಧಿ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಕಾಂಗ್ರೆಸ್ ಪಕ್ಷ ಇದನ್ನು ಸದನದಲ್ಲಿ ವಿರೋಧಿಸಲಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಇಲ್ಲ
ಏಕ ಚುನಾವಣೆ ಮಸೂದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲ್ಲ. ಮಸೂದೆ ಕುರಿತು ವಿಸ್ಕೃತ ಚರ್ಚೆ ಆಗಲಿ ಎಂಬುದು ಪ್ರಧಾನಿ ನರೇಂದ್ರ ಮೋದಿ ಬಯಕೆ. ಹೀಗಾಗಿ ಅದನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಲು ಬಯಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.