Latest Videos

ಮಣಿಪುರ ವಿಧಾನಸಭಾ ಕಟ್ಟಡದ ಬಳಿ ಬೆಂಕಿ: ಉಗ್ರರ ಕೃತ್ಯದ ಶಂಕೆ

By Kannadaprabha NewsFirst Published Jun 16, 2024, 8:32 AM IST
Highlights

ಮಣಿಪುರ ಸಚಿವಾಲಯವು ಪ್ರತ್ಯೇಕ ಆಡಳಿತಕ್ಕೆ ಆಗ್ರಹಿಸುತ್ತಿರುವ ಕುಕಿ ಇಂಪಿ ಸಂಘಟನೆಯ ಆಡಳಿತ ಕಚೇರಿ ಹತ್ತಿರದಲ್ಲೇ ಇರುವ ಕಾರಣ, ಅವರೇ ದಾಳಿ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇಂಫಾಲ್‌(ಜೂ.16):  ಮಣಿಪುರ ರಾಜಧಾನಿ ಇಂಫಾಲದಲ್ಲಿರುವ ವಿಧಾನಸಭಾ ಕಟ್ಟಡದ ಪಕ್ಕದಲ್ಲೇ ಇರುವ ಕಟ್ಟಡವೊಂದರಲ್ಲಿ ಶನಿವಾರ ಭಾರೀ ಬೆಂಕಿ ಕಾಣಿಸಿದೆ. ಮುಖ್ಯಮಂತ್ರಿ ಮನೆಯ ಸಮೀಪದಲ್ಲೇ ಈ ಅವಘಢ ಸಂಭವಿಸಿದೆ. ಈ ಘಟನೆಯಲ್ಲಿ ಉಗ್ರರ ಕೈವಾಡವನ್ನು ಶಂಕಿಸಲಾಗಿದೆ.

3-4 ದಿನಗಳ ಹಿಂದಷ್ಟೇ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ತೆರಳುವ ವೇಳೆ ಉಗ್ರರ ಗುಂಪು ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿತ್ತು. ಇದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಈ ಕಳವಳಕಾರಿ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಘಟನೆಯಲ್ಲಿ ಮುಖ್ಯಮಂತ್ರಿ ಮನೆ ಅಥವಾ ವಿಧಾನಸಭಾ ಕಟ್ಟಡಕ್ಕೆ ಯಾವುದೇ ಹಾನಿ ಆಗಿಲ್ಲ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಲಹೆಗೆ ಕಿವಿಗೊಡಿ: ಪ್ರಧಾನಿ ಮೋದಿಗೆ ವಿಪಕ್ಷ ಆಗ್ರಹ

ಮಣಿಪುರ ಸಚಿವಾಲಯವು ಪ್ರತ್ಯೇಕ ಆಡಳಿತಕ್ಕೆ ಆಗ್ರಹಿಸುತ್ತಿರುವ ಕುಕಿ ಇಂಪಿ ಸಂಘಟನೆಯ ಆಡಳಿತ ಕಚೇರಿ ಹತ್ತಿರದಲ್ಲೇ ಇರುವ ಕಾರಣ, ಅವರೇ ದಾಳಿ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ 219 ಜನರು ಸಾವನ್ನಪ್ಪಿದ್ದಾರೆ.

click me!