
ಪ್ರಯಾಗರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮತ್ತೆ ಬೆಂಕಿ ಕೆನ್ನಾಲಿಗೆ ತೋರಿದ್ದು, 15 ಅನಧಿಕೃತ ಟೆಂಟ್‌ಗಳು ಭಸ್ಮವಾಗಿವೆ. ಕಳೆದ ವಾರದ ಬೆಂಕಿ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಸುದೈವವಶಾತ್ ಯಾವುದೇ ಅನಾಹುತಗಳು ವರದಿಯಾಗಿಲ್ಲ. ಮಹಾಕುಂಭನಗರದ ಸೆಕ್ಟರ್ 22ರ ಕ್ರಮಂಗಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಅಗ್ನಿಶಾಮಕ ದಳ ತೆರಳುವಲ್ಲಿ ತಡವಾಯಿತು. ಆದರೆ ಬಳಿಕ ಯಶಸ್ವಿಯಾಗಿ ಬೆಂಕಿ ನಂದಿಸಲಾಗಿದೆ. ತನಿಖೆ ವೇಳೆ ಭಸ್ಮವಾದ 15 ಟೆಂಟ್‌ಗಳು ಅನಧಿಕೃತ ಎಂದು ತಿಳಿದುಬಂದಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜ.19ರಂದು ಮಹಾಕುಂಭನಗರದಲ್ಲಿ ಬೆಂಕಿ ಕಾಣಿಸಿಕೊಂಡು 100ಕ್ಕೂ ಹೆಚ್ಚು ಟೆಂಟ್‌ಗಳು ಅಗ್ನಿಗಾಹುತಿಯಾಗಿದ್ದವು.
ಹೆಚ್ಚಿನ ಭದ್ರತೆಗೆ ಸುಪ್ರೀಂಗೆ ಅರ್ಜಿ
ನವದೆಹಲಿ: ಪ್ರಯಾಗರಾಜ್‌ನ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನ ಸಾವನ್ನಪ್ಪಿದ್ದು, 60 ಜನ ಗಾಯಗೊಂಡಿರುವ ಹಿನ್ನೆಲೆ ಭಕ್ತರ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಲು ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಪಿಐಎಲ್ ಸಲ್ಲಿಕೆಯಾಗಿದೆ. ವಕೀಲ ವಿಶಾಲ್ ತಿವಾರಿ ಅವರು ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಆರ್ಟಿಕಲ್ 21ರ ಅಡಿಯಲ್ಲಿ ಬರುವ ಸಮಾನತೆ ಮತ್ತು ಜೀವನದ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕೋರಿದ್ದಾರೆ.
ಪುಣ್ಯ ಸ್ನಾನಕ್ಕೆ 21 ಕಿ.ಮೀ ಪ್ರಯಾಣ ಮಾಡಿದ್ದ ಭಕ್ತ ಕಾಲ್ತುಳಿತಕ್ಕೆ ಬಲಿ
ಮಹಾಕುಂಭನಗರ: ಸಂಗಮದಲ್ಲಿ ಸ್ಥಾನ ಮಾಡಿದರೆ ಪುಣ್ಯ ಎನ್ನುವ ನಂಬಿಕೆಯೊಂದಿಗೆ ಸುಮಾರು 21 4. ಕಿಮೀ ಪ್ರಯಾಣ ಮಾಡಿ ಪ್ರಯಾಗ 3 ಜಾರ್ಖಂಡ್‌ನ ವ್ಯಕ್ತಿ ಕಾಲ್ತುಳಿತಕ್ಕೆ ಬಲಿ ಬ್ಯಾಂಕ್ ಉದ್ಯೋಗಿ ಶಿವರಾಜ್ ಗುಪ್ತಾ (58) ಎನ್ನುವವರು ಬುಧವಾರ ನಡೆದ ಕಾಲ್ತುಳಿತಕ್ಕೆ ಬಲಿಯಾದವರು. ಇವರು, ಘಟಾಶಿಲಾದಿಂದ 16 ಜನರೊಂದಿಗೆ ಆಗಮಿಸಿದ್ದರು. ಉಸಿರಾ ಟದ ಸಮಸ್ಯೆಯಿಂದ ಬಳಲುತ್ತಿದ್ದ ಗುಪ್ತಾ ನೂಕು ನುಗ್ಗಲಿನಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ; ತಮ್ಮವರಿಗಾಗಿ ಕಣ್ಣು ಮಿಟುಕಿಸದೇ ಕಾಯುತ್ತಿರುವ ಜನರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ