ಉತ್ತಮ ಸೇವೆ ನೀಡಲು ಹೊಸ ವೇದಿಕೆ ಸೃಷ್ಟಿಸಿದ ಆಂಧ್ರಪ್ರದೇಶ ಸರ್ಕಾರ

Published : Jan 31, 2025, 09:36 AM IST
ಉತ್ತಮ ಸೇವೆ ನೀಡಲು ಹೊಸ ವೇದಿಕೆ ಸೃಷ್ಟಿಸಿದ ಆಂಧ್ರಪ್ರದೇಶ ಸರ್ಕಾರ

ಸಾರಾಂಶ

ಆಂಧ್ರಪ್ರದೇಶ ಸರ್ಕಾರವು 'ಮನ ಮಿತ್ರ' ಎಂಬ ವಾಟ್ಸಾಪ್ ಆಡಳಿತ ವೇದಿಕೆಯನ್ನು ಬಿಡುಗಡೆ ಮಾಡಿದೆ. ಇದರ ಮಧ್ಯಮದಲ್ಲಿ 36 ಸರ್ಕಾರಿ ಇಲಾಖೆಗಳ 161 ಸೇವೆಗಳನ್ನು ಜನರಿಗೆ ಒದಗಿಸಲಾಗುವುದು.

ಅಮರಾವತಿ: ಆಂಧ್ರಪ್ರದೇಶದ ಜನತೆಗೆ ಉತ್ತಮ ಹಾಗೂ ಅನುಕೂಲಕರ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ‘ಮನ ಮಿತ್ರ’(ನನ್ನ ಗೆಳೆಯ) ಹೆಸರಿನ ವಾಟ್ಸಾಪ್‌ ಆಡಳಿತ ವೇದಿಕೆಯನ್ನು ಐಟಿ ಸಚಿವ ನಾರಾ ಲೋಕೇಶ್‌ ಅವರು ಸಿಎಂ ನಿವಾಸದಲ್ಲಿ ಬಿಡುಗಡೆ ಮಾಡಿದ್ದಾರೆ.

36 ಸರ್ಕಾರಿ ಇಲಾಖೆಗಳನ್ನು ಸಂಯೋಜಿಸಿ ರಚಿಸಲಾಗಿರುವ ಮನ ಮಿತ್ರದಲ್ಲಿ ರಾಜ್ಯದ ಜನರು ದೇವಸ್ಥಾನದ ಭೇಟಿಗೆ ಸಮಯ ನಿಗದಿಪಡಿಸುವುದು, ರಾಜ್ಯ ಸಾರಿಗೆ ಬಸ್‌ ಟಿಕೆಟ್‌ ಕಾಯ್ದಿರಿಸುವುದು, ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯುವುದು ಸೇರಿದಂತೆ 161 ಸೇವೆಗಳು ಲಭ್ಯವಿದೆ.

ಇದರ ಬಿಡುಗಡೆ ಬಳಿಕ ಮಾತನಾಡಿದ ಸಚಿವ ಲೋಕೇಶ್‌, ‘ಮುಂದಿನ ದಿನಗಳಲ್ಲಿ ಇಂತಹ ಹಲವು ಸೌಲಭ್ಯಗಳನ್ನು ಪರಿಚಯಿಸಲಾಗುವುದು. ನಮ್ಮ ಉದ್ದೇಶಗಳು ಜನ ಕೇಂದ್ರಿತವಾಗಿವೆ. ಪ್ರತಿ ಬಾರಿ ದಾಖಲೆ ಪಡೆಯಲು ಜನ ಸರ್ಕಾರಿ ಕಚೇರಿಗಳಿಗೇಕೆ ಬರಬೇಕು? ಜನರು ಕ್ಷಣಾರ್ಧದಲ್ಲಿ ಕ್ಯಾಬ್‌ ಅಥವಾ ಸಿನಿಮಾ ಟಿಕೆಟ್‌ ಬುಕ್‌ ಮಾಡಬಹುದಾದರೆ, ದಾಖಲೆಗಳನ್ನೇಕೆ ಅಷ್ಟೇ ಸುಲಭದಲ್ಲಿ ಪಡೆಯಬಾರದು’ ಎಂದರು.

2ನೇ ಹಂತದಲ್ಲಿ ಮನ ಮಿತ್ರವು ಹೆಚ್ಚುವರಿ 360 ಸೇವೆಗಳನ್ನು ಒದಗಿಸಲಿದೆ. ಪ್ರಸ್ತುತ ತಿರುಮಲ ತಿರುಪತಿ ದೇವಸ್ಥಾನದ ಸೇವಗಳು ಇದರ ಭಾಗವಾಗಿಲ್ಲವಾದರೂ ಮುಂದಿನ ದಿನಗಳಲ್ಲಿ ಇದನ್ನು ಸೇರಿಸಲಾಗುವುದು ಎಂದು ಲೋಕೇಶ್‌ ತಿಳಿಸಿದ್ದಾರೆ. 2024ರ ಅ.22ರಂದು ಆಂಧ್ರ ಸರ್ಕಾರ ಈ ಸಂಬಂಧ ಮೆಟಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಇದನ್ನೂ ಓದಿ: ಭಾರತದಿಂದಲೇ ಹೊಸ ಜನರೇಟಿವ್‌ ಎಐ ಮಾಡೆಲ್‌: ಚೀನಾದ ಡೀಪ್‌ಸೀಕ್‌ಗೆ ಭಾರತದ ಉತ್ತರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್