
ಜೈಪುರ್ (ನ.09) ದೀಪಾವಳಿ ಹಬ್ಬದಲ್ಲಿ ಪಟಾಕಿಯಿಂದ ಹಲವೆಡೆ ಅವಘಡಗಳು ಸಂಭವಿಸಿದೆ. ಪಟಾಕಿ ಸಿಡಿಸುವಾಗ ಎದೆಗೆ ಬಡಿದು ಬಾಲಕ ಮೃತಪಟ್ಟ ಘಟನೆ ಸೇರಿದಂತೆ ಹಲವು ದುರಂತಗಳು ನಡೆದಿದೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿಯಿಂದ ಗಾಯಗೊಂಡ ಹಲವರು ದಾಖಲಾಗಿದ್ದಾರೆ. ಇದೀಗ ಮತ್ತೊಂದು ದುರಂತ ವರದಿಯಾಗಿದೆ. ಬೀದಿ ಬೀದಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿತ್ತು. ಈ ವೇಳೆ ಹಾರಿದ ಕಿಡಿಯಿಂದ ಪಟಾಕಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕಾಂಗ್ರೆಸ್ ಕೌನ್ಸಿಲರ್ ಉಷಾ ದೇವಿ ಪೂನಾಮಿಯಾ ಹಾಗೂ ಅರ ಪತಿ ಪ್ರಕಾಶ್ ಪುನಾಮಿಯಾ ದುರಂತ ಅಂತ್ಯಕಂಡಿದ್ದಾರೆ.
ರಾಜಸ್ಥಾನದ ಪಾಲಿ ಜಿಲ್ಲೆಯಾ ಫಲ್ನಾದಲ್ಲಿ ಈ ದುರ್ಘಟನೆ ನಡೆದಿದೆ. ಕಾಂಗ್ರೆಸ್ ಕೌನ್ಸಿಲರ್ ಉಷಾದೇವಿ ಹಾಗೂ ಅವರ ಪತ್ನಿ ಪ್ರಕಾಶ್ ಕಾಸ್ಮೆಟಿಕ್ಸ್ ಹಾಗೂ ಬ್ಯಾಟರಿ ಶಾಪ್ ನಡೆಸುತ್ತಿದ್ದಾರೆ. ದೀಪಾವಳಿ ಸಂಭ್ರಮದ ಕಾರಣ ಇವರ ಶಾಪ್ ಹೊರಭಾಗದಲ್ಲಿ ಪಟಾಕಿ ಮಾರಟಕ್ಕೆ ಇಡಲಾಗಿತ್ತು. ತಾತ್ಕಾಲಿಕ ಟೆಂಟ್ ಹಾಕಿ ಮಾರಾಟ ಮಾಡಲಾಗುತ್ತಿತ್ತು. ಇತ್ತ ಇದೇ ಬೀದಿಯಲ್ಲಿ ಅಕ್ಕ ಪಕ್ಕದಲ್ಲಿ ಪಟಾಕಿ ಸಿಡಿಸಿ ದೀಪಾವಳಿ ಸಂಬ್ರಮ ಆಚರಿಸಲಾಗುತ್ತಿತ್ತು.
ಪಟಾಕಿ ಸಿಡಿಸುವಾಗ ಹಾರಿದ ಕಿಡಿ ಪುನಾಮಿಯಾ ಅವರ ಪಟಾಕಿ ಶಾಪ್‌ಗೆ ತಾಗಿದೆ. ಕ್ಷಣಾರ್ಧದಲ್ಲೇ ಪಟಾಕಿಗಳು ಸಿಡಿಯಲು ಆರಂಭಿಸಿದೆ. ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಂಗಡಿಯಲ್ಲಿ 68ರ ಹರೆಯದ ಉಷಾದೇವಿ ಪೂನಾಮಿಯಾ ಹಾಗೂ ಪತಿ 70 ಹರೆಯದ ಪ್ರಕಾಶ್ ಪುನಾಮಿಯ ಇಬ್ಬರು ಇದ್ದರು. ಪತ್ನಿ ಉಷಾದೇವಿಗೆ ಸ್ಥಳದಿಂದ ಓಡಲು ಸೂಚಿಸಿದ್ದಾರೆ. ಉಷಾದೇವಿ ತಮ್ಮ ಕಾಸ್ಮೆಟ್ ಶಾಪ್‌ನಲ್ಲಿದ್ದ ಕಾರಣ ತಕ್ಷಣವೇ ನೆಲ ಮಾಳಿಗೆಗೆ ಓಡಿದ್ದಾರೆ. ಇತ್ತ ಪತಿ ಪ್ರಕಾಶ್ ಪಟಾಕಿ ಅಂಗಡಿಯಲ್ಲಿದ್ದ ಕಾರಣ ಓಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲೇ ಪಟಾಕಿಗಳು ಸಿಡಿದು ಪ್ರಕಾಶ್ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.
ಪಟಾಕಿ ಶಾಪ್, ಕಾಸ್ಮೆಟಿಕ್ ಶಾಪ್ ಹಾಗೂ ಬ್ಯಾಟರಿ ರಿಟೇಲ್ ಶಾಪ್ ಎಲ್ಲವೂ ಹೊತ್ತಿಕೊಂಡಿದೆ. ಇದರ ದಟ್ಟ ಹೊಗೆ ನೆಲಮಾಳಿಗೆ ಆವರಿಸಿದೆ. ಹೀಗಾಗಿ ಉಷಾದೇವಿ ದಟ್ಟ ಹೊಗೆಯಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇದೇ ವೇಳೆ ಸಹೋದಕರ ಗೌತಮ್ ಪೂನಾಮಿಯಾ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಒಂದೇ ಸಮನೆ ಪಟಾಕಿ ಸಿಡಿಯಲು ಆರಂಭಿಸಿದ ಕಾರಣ ರಕ್ಷಣೆ ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲ ಈ ಪಟಾಕಿ ಸ್ಫೋಟಗೊಂಡ ಪರಿಣಾಮ ಸಹೋದರ ಗೌತಮ್ ಪೂನಾಮಿಯಾ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗೌತಮ್ ಪೂನಾಮಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾತ್ಕಾಲಿಕ ಪಟಾಕಿ ಅಂಗಡಿಗೆ ಹೊತ್ತಿಕೊಂಡ ಬೆಂಕಿಯಿಂದ ಕಾಸ್ಮೆಟಿಕ್ ಶಾಪ್, ಬ್ಯಾಟರಿ ಶಾಪ್ ಸೇರಿದಂತೆ ಒಟ್ಟು ಮೂರು ಶಾಪ್ ಹೊತ್ತಿ ಉರಿದಿದೆ. ಪರಿಣಾಮ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ. ಘಟನೆಯಲ್ಲಿ ಉಷಾದೇವಿ ಹಾಗೂ ಪ್ರಕಾಶ್ ಇಬ್ಬರು ಮೃತಪಟ್ಟಿದ್ದಾರೆ. ಗೌತಮ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ದಂಪತಿಯ ಪುತ್ರ ಮುಂಬೈನಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತ ಮೃತದೇಹಗಳ ಮರಣತ್ತೋರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಘಟನೆ ಬೆನ್ನಲ್ಲೇ ಪಾಲಿ ಜಿಲ್ಲೆಯಲ್ಲಿ ಪೊಲೀಸರು ಮಹತ್ವದ ಸೂಚನೆ ನೀಡಿದ್ದಾರೆ. ಪಟಾಕಿ ಅಂಗಡಿಗಳ ಮಾಲೀಕರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಪಟಾಕಿ ಅಂಗಡಿ ಪಕ್ಕದಲ್ಲಿ ಪಟಾಕಿ ಸಿಡಿಸಿದಂತೆ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ