
ರಾಯ್ಪುರ(ಫೆ.06): ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ತಂದೆ ನಂದ ಕುಮಾರ್ ಬಾಘೇಲ್ ಅವರು ಸಮುದಾಯವೊಂದರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಭಾನುವಾರ ಸರ್ವ ಬ್ರಾಹ್ಮಣ ಸಮಾಜದ ದೂರಿನ ಅನ್ವಯ, ನಂದಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ವಿದೇಶಿಯರಾದ ಬ್ರಾಹ್ಮಣರನ್ನು ಬಹಿಷ್ಕರಿಸಬೇಕು. ಬ್ರಾಹ್ಮಣರನ್ನು ಗ್ರಾಮಗಳಿಗೆ ಬಿಟ್ಟುಕೊಳ್ಳಬಾರದು. ಅಲ್ಲದೆ ಅವರನ್ನು ದೇಶದಿಂದಲೇ ಹೊರಹಾಕಬೇಕು’ ಎಂದು ನಂದ ಕುಮಾರ್ ಬಾಘೇಲ್(86) ಅವರು ಜನರಿಗೆ ಕರೆ ನೀಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲದೆ’ ಎಂದು ಸರ್ವ ಬ್ರಾಹ್ಮಣ ಸಮಾಜ ದೂರಿದೆ.
ಈ ಬಗ್ಗೆ ಸಿಎಂ ಭೂಪೇಶ್ ಪ್ರತಿಕ್ರಿಯಿಸಿದ್ದು, ‘ಸಮುದಾಯವೊಂದರ ಕುರಿತಾಗಿ ತಮ್ಮ ತಂದೆ ನೀಡಿದ ಹೇಳಿಕೆಯಿಂದ ನೋವಾಗಿದ್ದು, ಅವರ ವಿರುದ್ಧ ನಮ್ಮ ಸರ್ಕಾರ ಮತ್ತು ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ.
ಭೂಪೇಶ್ ಬಾಘೇಲ್ ಅವರ ತಂದೆ ಈ ಹಿಂದೆ ಶ್ರೀರಾಮನ ಕುರಿತಾಗಿಯೂ ಇದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ