
ತಿರುವನಂತಪುರಂ (ನ.28) ಹಲವು ಯುವತಿಯರ ಜೊತೆ ಚಾಟಿಂಗ್, ಕೆಲವರ ಜೊತೆ ರಿಲೇಶನ್‌ಶಿಪ್ ಇಟ್ಟುಕೊಂಡಿದ್ದಾರೆ ಅನ್ನೋ ಗಂಭೀರ ಆರೋಪಗಳ ನಡುವೆ ಯುವತಿ ತನಗಾದ ಅನ್ಯಾಯದ ವಿರುದ್ದ ಮಾಡುತ್ತಿರುವ ಸತತ ಹೋರಾಟಕ್ಕೆ ಇದೀಗ ಮೊದಲ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಶಾಸಕ ತನ್ನನ್ನು ಗರ್ಭಿಣಿ ಮಾಡಿ ಬಳಿಕ ಗರ್ಭಪಾತ ಮಾಡುವಂತೆ ಬೆದರಿಸಿದ್ದಾರೆ ಎಂದು ದೂರು ಹಿಡಿದು ಹೊರಟ ಯುವತಿಗೆ ಸೂಕ್ತ ನೆರವು ಸಿಗಲಿಲ್ಲ. ಮುಖ್ಯಮಂತ್ರಿಗೂ ದೂರು ನೀಡಿದ ಬಳಿಕ ಇದೀಗ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಶಾಸಕನ ವಿರುದ್ಧ ದೂರು ದಾಖಲಾದ ಘಟನೆ ಕೇರಳದಲ್ಲಿ ನಡೆದಿದೆ. ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟಥಿಲ್ ಆರೋಪಿ. ಯುವತಿ ದೂರು ನೀಡುತ್ತಿದ್ದಂತೆ ನಾಯಕ ರಾಹುಲ್ ಮಾಂಕೂಟಥಿಲ್ ನಾಪತ್ತೆಯಾಗಿದ್ದಾರೆ.
ಯುವತಿ ಮುಖ್ಯಮಂತ್ರಿ ಭೇಟಿಯಾಗಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣ ಭಾರಿ ಸದ್ದು ಮಾಡಿದೆ. ತಿರುವಂತಪುರಂನ ವಲಿಯಾ ಮಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಯುವತಿಯನ್ನು ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರೆ. ಇದೇ ವೇಳೆ ತನ್ನ ಬಳಿ ಇರುವ ಚಾಟಿಂಗ್ ಆಡಿಯೋ ಗಳನ್ನು ಪೊಲೀಸರಿಗೆ ನೀಡಿದ್ದಾರೆ. ಇದು ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟಥಿಲ್ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಯುವತಿ ಹೇಳಿಕೆ ಪಡೆದಿರುವ ಪೊಲೀಸರು ರಾಹುಲ್ ಮಾಂಕೂಥಿಲ್ ಮಾತ್ರವಲ್ಲ, ರಾಹುಲ್ ಸೂಚನೆಯಂತೆ ಯುವತಿ ಗರ್ಭಪಾತಕ್ಕೆ ಮಾತ್ರೆ ಪೂರೈಸಿದ ಆತನ ಗೆಳೆಯ ಅಡೂರ್ ನಿವಾಸಿ ಜಾಬಿ ಜೊಸೆಫ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಯೂಥ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ರಾಹುಲ್ ಮಾಂಕೂಥಿಲ್ ಪಾಲಕ್ಕಾಡ್ ಶಾಸಕ. ರಾಹುಲ್ ತನ್ನ ಅಧಿಕಾರ, ಹಣ ಬಳಸಿಕೊಂಡು ಮಲೆಯಾಳಂ ಸಿನಿಮಾ ಇಂಡಸ್ಟ್ರಿಯ ಹಲವು ನಟಿಯರ ಜೊತೆ ವ್ಯಾಟ್ಸಾಪ್ ಚಾಟ್, ಸಂಬಂಧ ಬೆಳೆಸಿಕೊಳ್ಳಲುಪ್ರಯತ್ನಿಸಿದ್ದಾನೆ. ಹಲವರಿಗೆ ಮೆಸೇಜ್ ಮಾಡಿದ್ದಾನೆ. ಹಲವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಆಗಸ್ಟ್ ತಿಂಗಳಲ್ಲೇ ಈತನ ವಿರುದ್ದ ಇಬ್ಬರು ನಟಿಯರು ಸ್ಫೋಟಕ ಆರೋಪಗಳನ್ನು ಮಾಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದರು. ಈ ಆರೋಪ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಯೂಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೇ ವೇಳೆ ರಾಹುಲ್ ಮಾಂಕೂಟಥಿಲ್ ಅಸಲಿ ಮುಖ ಬಹಿರಂಗವಾಗಿತ್ತು. ಹೀಗಾಗಿ ಕೇರಳ ಕಾಂಗ್ರೆಸ್ ಮುಜುಗರ ತಪ್ಪಿಸಲು ರಾಹುಲ್ ಮಾಂಕೂಟಥಿಲ್ ಅಮಾನತು ಗೊಳಿಸಿತ್ತು. ಈ ಪ್ರಕರಣ ತಣ್ಣಗಾಗುತ್ತಿದ್ದಂತೆ ಇದೀಗ ಯುವತಿ ದೂರು ನೀಡಿದ್ದಾಳೆ. ಯುವತಿ ಜೊತೆಗೆ ಚಾಟಿಂಗ್ ಮಾಡುತ್ತಾ ಆತ್ಮೀಯನಾದ ಕಾಂಗ್ರೆಸ್ ಶಾಸಕ, ಬಳಿಕ ಹಲವು ಹೊಟೆಲ್‌ಗಳಲ್ಲಿ ರೂಂ ಬುಕ್ ಮಾಡಿ ಯುವತಿಯನ್ನು ಬಳಸಿಕೊಂಡಿದ್ದಾಳೆ. ಯುವತಿ ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ಒತ್ತಾಯಿಸಿದ್ದಾಳೆ. ಯುವತಿಯನ್ನು ಬೆದರಿಸಿದ ರಾಹುಲ್ ಮಾಂಕೂಟಥಿಲ್ ಗರ್ಭಪಾತಕ್ಕೆ ಮಾತ್ರೆ ಗೆಳೆಯನ ಮೂಲಕ ನೀಡಿದ್ದಾನೆ. ರಾಹುಲ್ ಮಾಂಕೂಟಥಿಲ್ ನಡು ದಾರಿಯಲ್ಲಿ ಕೈಬಿಟ್ಟಿರುವುದು ಅರಿವಾಗುತ್ತಿದ್ದಂತೆ ಯುವತಿ ದೂರು ನೀಡಿದ್ದಾಳೆ.
ನೆಮಾಮ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿರುವ ಕಾರಣ ಈ ಪ್ರಕರಣವನ್ನು ವಲಿಯ ಮಾಲಾ ಪೊಲೀಸ್ ಠಾಣೆಯಿಂದ ನೆಮಾಮ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತಿರುವಂತಪುರಂ ಕೋರ್ಟ್‌ನಲ್ಲಿ ಯುವತಿ ಹೇಳಿಕೆ ದಾಖಲಿಸಲಾಗುತ್ತದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರಾಹುಲ್ ಮಾಂಕೂಟಥಿಲ್ ವಿರುದ್ದ ನಟಿಯರು ಆರೋಪ ಮಾಡುತ್ತಿದ್ದಂತೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮುಜುಗರ ತಪ್ಪಿಸಲು ಕೇರಳ ಕಾಂಗ್ರೆಸ್ ಪಕ್ಷದಿಂದ ರಾಹುಲ್ ಅಮಾನತುಗೊಳಿಸಿತ್ತು. ಆದರೆ ಬಿಜೆಪಿ ಶಾಸಕನಾಗಿ ರಾಹುಲ್ ಮುಂದುವರಿಯಲು ಅನರ್ಹ. ಹೀಗಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನಡುವಂತೆ ಪಟ್ಟು ಹಿಡಿದಿತ್ತು. ಇದೀಗ ಬಿಜೆಪಿ ಮತ್ತೆ ರಾಹುಲ್ ಮಾಂಕೂಟಥಿಲ್ ಹಾಗೂ ಕಾಂಗ್ರೆಸ್ ವಿರುದ್ದ ಸತತ ವಾಗ್ದಾಳಿ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ