FIR against Kangana Ranaut: ಸ್ವಾತಂತ್ರ್ಯವಲ್ಲ, ಭಿಕ್ಷೆ ಹೇಳಿಕೆಗೆ ಆಗ್ರಾದಲ್ಲೂ ನಟಿ ವಿರುದ್ಧ ದೂರು

By Suvarna News  |  First Published Nov 24, 2021, 7:49 PM IST

ವಿವಾದಗಳಿಗೂ ಬಾಲಿವುಡ್‌ ನಟಿ ಕಂಗನಾಗೂ ಅವಿನಾಭಾವ ಸಂಬಂಧ, ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡಿ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವ ಬಾಲಿವುಡ್‌ ನಟಿ ಈಗ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಇವರ ವಿರುದ್ಧ ಈಗ ಆಗ್ರಾ ಮೂಲದ ವಕೀಲರೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದು ದೇಶದ್ರೋಹ(sedition case)ದ ಪ್ರಕರಣ ದಾಖಲಿಸಿದ್ದಾರೆ. 


ಇತ್ತೀಚೆಗೆ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ನಟನೆಗಿಂತ ಹೆಚ್ಚು ತಾವು ನೀಡುತ್ತಿರುವ ಹೇಳಿಕೆಗಳಿಂದಾಗುವ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ೧೯೪೭ರಲ್ಲಿ  ಭಾರತಕ್ಕೆ ಸಿಕ್ಕಿದ್ದು, ಸ್ವಾತಂತ್ರ್ಯ ಅಲ್ಲ, ಅದು ಕೇವಲ ಭಿಕ್ಷೆ(bheekh) ಎಂದು ನಟಿ ಕಂಗನಾ ಈ ಹಿಂದೆ ಹೇಳಿಕೆ ನೀಡಿದ್ದರು. ಈ ಬಗ್ಗೆ ವಕೀಲ ರಾಮಶಂಕರ್‌ ಶರ್ಮಾ(Ramashankar Sharma) ಕೋರ್ಟ್‌ ಮೆಟ್ಟಿಲೇರಿದ್ದಾರೆ. ನಟಿ ಕಂಗನಾ ರಾಣಾವತ್‌ ಈ ರೀತಿ ಹೇಳಿಕೆ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕೆ ಪ್ರಾಣವನ್ನು ಅರ್ಪಿಸಿದ್ದ ಸಾವಿರಾರು ಹುತಾತ್ಮರಿಗೆ ಅವಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂಲಗಳ ಪ್ರಕಾರ ಆಗ್ರಾ(Agra)ದ ಮುಖ್ಯ ನ್ಯಾಯಾಲಯದ ನ್ಯಾಯಾಧೀಶರು(CJM), ನ್ಯೂ ಆಗ್ರಾ ಪೊಲೀಸ್‌ ಠಾಣೆ(New Agra police station)ಯಿಂದ ವರದಿ ಕೇಳಿದ್ದಾರೆ. ಅಲ್ಲದೇ ನ್ಯಾಯಾಲಯವೂ ಈ ಅರ್ಜಿಯ ವಿಚಾರಣೆಗೆ ನ.೨೫ರಂದು ದಿನಾಂಕ ನಿಗದಿ ಮಾಡಿದೆ. ಕಂಗನಾ ಹೇಳಿಕೆಯಿಂದ ಸ್ವಾತಂತ್ರ ಹೋರಾಟದಲ್ಲಿ ಮಡಿದ ಸಾವಿರಾರು ಜನರಿಗೆ ಅವಮಾನವಾಗಿದೆ. ಕಂಗನಾ ಸ್ವಾತಂತ್ರ್ಯದ ಬಗ್ಗೆ ಏನು ಹೇಳಿಕೆ ನೀಡಿದ್ದಾರೋ ಅದೆಲ್ಲವೂ ಆಕೆಯ ವೈಯಕ್ತಿಕ ನಂಬಿಕೆಯಾಗಿದೆ. ಅವರದನ್ನು ಸಾರ್ವಜನಿಕವಾಗಿ ಮತ್ತೆ ಮತ್ತೆ ಹೇಳಿದರೆ ಅದು ಚರ್ಚೆಯ ವಿಚಾರವಾಗುತ್ತದೆ . ಕಂಗನಾ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ದೂರು ದಾಖಲಿಸಿದ ವಕೀಲ ರಾಮಶಂಕರ್‌ ಶರ್ಮಾ ಹೇಳಿದ್ದಾರೆ.  ನಟಿ ಕಂಗನಾ ವಿರುದ್ಧ ದೂರು ದಾಖಲು ಮಾಡಿರುವ ವಕೀಲರಿಗೆ ಸ್ಥಳೀಯ ಹೋರಾಟಗಾರರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. 

Latest Videos

undefined

Kangana Ranaut: 'ಇನ್ನೊಂದು ಕೆನ್ನೆ ತೋರಿಸಿದರೆ ಸಿಗೋದು ಭಿಕ್ಷೆ, ಸ್ವಾತಂತ್ರ್ಯವಲ್ಲ'

ಈ ಬಗ್ಗೆ ಮಾತನಾಡಿದ ಆಗ್ರಾ ಮೂಲದ ಸಾಮಾಜಿಕ ಹೋರಾಟಗಾರ ಸಮೀರ್‌(Sameer), ಕಂಗನಾ ರಾಣಾವತ್‌, ಯಾವುದೇ ಪಕ್ಷಪಾತವಿಲ್ಲದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಇತಿಹಾಸವನ್ನು ಮತ್ತೊಮ್ಮೆ ಓದಬೇಕು. ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಿ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಸಾವಿರಾರು ಜನ ಪ್ರಾಣತ್ಯಾಗ ಮಾಡಿದ್ದಾರೆ ಎಂದರು. ಹಿಂದೂಸ್ತಾನಿ ಬಿರ್ದಾರಿಯ ಉಪಾಧ್ಯಕ್ಷ  ವಿಶಾಲ್‌ ಶರ್ಮಾ( Vishal Sharma) ಮಾತನಾಡಿ,  ಕಂಗನಾ ಕೇವಲ ನಟಿ, ಆಕೆ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿದ ತಜ್ಞೆ ಅಲ್ಲ. ಅಲ್ಲದೇ ಆಕೆ ನೀಡಿದ ಹೇಳಿಕೆಗೆ ಯಾವುದೇ ಶೈಕ್ಷಣಿಕ ಪ್ರಾಮುಖ್ಯತೆ(academic significance) ಇಲ್ಲ ಎಂದು ಹೇಳಿದರು.

ಕಂಗನಾ ಭಾರತಕ್ಕೆ (india) ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಗಾಂಧೀಜಿಯವರ ಅಹಿಂಸಾ ಮಂತ್ರವನ್ನು ಲೇವಡಿ ಮಾಡಿ ವಿವಾದ ಸೃಷ್ಟಿಸಿದ್ದರು. ತಮ್ಮ ಹೇಳಿಕೆ ವಿವಾದಾಕ್ಕೀಡಾಗುತ್ತಿದ್ದಂತೆ ಹೇಳಿಕೆಯನ್ನು ಸಮರ್ಥಿಸಿರುವ ಕಂಗನಾ, ‘ಗಾಂಧೀಜಿ ಅವರು ಸುಭಾಷ್‌ ಚಂದ್ರ ಬೋಸ್‌, ಭಗತ ಸಿಂಗ್‌ರಿಗೆ ಯಾವುದೇ ಬೆಂಬಲ ನೀಡಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಮುಂದಿಡುವುದರಿಂದ ಭಿಕ್ಷೆ ಸಿಗುವುದೇ ಹೊರತು ಸ್ವಾತಂತ್ರ್ಯವಲ್ಲ ಎಂದಿದ್ದರು.

Indira Gandhi ಖಲಿಸ್ತಾನಿಗಳನ್ನು ಸೊಳ್ಳೆಗಳಂತೆ ಹೊಸಕಿ ಹಾಕಿದ್ದರು : ಕಂಗನಾ ರಣಾವತ್!

ಇನ್ಸ್ಟಾಗ್ರಾಂ ಖಾತೆಯಲ್ಲಿ ’ಗಾಂಧಿ ಹಾಗೂ ಇತರರು ನೇತಾಜಿಯನ್ನು ಹಸ್ತಾಂತರಿಸಲು ಒಪ್ಪಿದರು’ ಎಂಬ ಶೀರ್ಷಿಕೆಯುಳ್ಳ ಹಳೆಯ ಸುದ್ದಿಯನ್ನು ಹಂಚಿಕೊಂಡ ನಟಿ, ‘ನೀವು ಗಾಂಧಿ ಅಥವಾ ನೇತಾಜಿಯನ್ನು ಬೆಂಬಲಿಸಬಹುದು. ಇಬ್ಬರನ್ನೂ ಒಟ್ಟಿಗೆ ಬೆಂಬಲಿಸಲು ಸಾಧ್ಯವಿಲ್ಲ, ಆಯ್ಕೆಮಾಡಿ, ನಿರ್ಧರಿಸಿ ಎಂದು ಬರೆದಿದ್ದರು. 

ಕಂಗನಾ ಹೇಳಿಕೆಗೆ ಬಿಜೆಪಿ ಸಂಸದ ವರುಣ್‌ ಗಾಂಧಿ (Varun Gandhi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ (Congress) ಸೇರಿದಂತೆ ಹಲವು ಪಕ್ಷಗಳು, ಸಿನಿಮಾ ರಂಗದ ಪ್ರಮುಖರು, ಕ್ರೀಡಾ ಕ್ಷೇತ್ರದ ತಾರೆಯರು ಹಾಗೂ ಶ್ರೀಸಾಮಾನ್ಯರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ವಿರುದ್ಧ ದೇಶ ದ್ರೋಹದ ಕೇಸು ದಾಖಲಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಇನ್ನು ಹಲವು ಕಡೆ ಕಂಗನಾ ವಿರುದ್ಧ ಪ್ರಕರಣ (Case) ಕೂಡಾ ದಾಖಲಿಸಲಾಗಿದೆ.

click me!