
ನವದೆಹಲಿ (ಸೆ.15) ಪತ್ನಿ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ಕೇಂದ್ರ ಹಣಕಾಸು ಸಚಿವಾಲಯ ಅಧಿಕಾರಿ ನವಜೋತ್ ಸಿಂಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ಕಂಟೋನ್ಮೆಟ್ ಮೆಟ್ರೋ ನಿಲ್ದಾಣದ ಬಳಿಕ ರಿಂಗ್ ರೋಡ್ ಮೂಲಕ ಸಾಗುತ್ತಿದ್ದ ವೇಳೆ ಅತೀ ವೇಗದಿಂದ ಆಗಮಿಸಿದ BMW ಕಾರು ಡಿಕ್ಕಿಯಾಗಿದೆ. 52 ವರ್ಷದ ನವಜೋತ್ ಸಿಂಗ್ ಗಂಭೀರ ಗಾಯಗಳಿಂದ ಮೃತಪಟ್ಟರೆ, ಸಂದೀಪ್ ಕೌರ್ ತೀವ್ರ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ (ಸೆ.14) ಕಚೇರಿಗೆ ರಜಾ ದಿನವಾದ ಕಾರಣ ನವಜೋತ್ ಸಿಂಗ್ ಪತ್ನಿ ಜೊತೆ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ತೆರಳಿದ್ದರು. ಪ್ರಾರ್ಥನೆ ಸಲ್ಲಿಸುವ ಮರಳುತ್ತಿರುವಾಗ ಘಟನೆ ಸಂಭವಿಸಿದೆ. ಮಹಿಳೆ ಚಲಾಯಿಸುತ್ತಿದ್ದ BMW ಕಾರು ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ನವಜೋತ್ ಸಿಂಗ್ ಡೈವೈಡರ್‌ಗೆ ಬಡಿದು ರಸ್ತೆಗೆ ಬಿದ್ದಿದ್ದಾರೆ. ಇತ್ತ ಪತ್ನಿ ಸಂದೀಪ್ ಕೌರ್ ಕೂಡ ರಸ್ತೆಗೆ ಬಿದ್ದು ತೀವ್ರಗಾಯಗೊಂಡಿದ್ದಾರೆ. ತಕ್ಷಣವೇ ಕಾರಿನಲ್ಲಿದ್ದ ಮಹಿಳೆ ಹಾಗೂ ಆಕೆಯ ಪತಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗಳಿಂದ ನವಜೋತ್ ಸಿಂಗ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಅಸ್ಥಿ ವಿಸರ್ಜಿಸಿ ಹಿಂದಿರುಗುತ್ತಿದ್ದ ಕಾರ್ ಅಪಘಾತ; ಇಬ್ಬರು ಮಕ್ಕಳು ಸೇರಿದಂತೆ ಏಳು ಜನರ ಸಾವು
52 ವರ್ಷದ ನವಜೋತ್ ಸಿಂಗ್, ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಿರಿಯ ಅಧಿಕಾರಿಯಾಗಿದ್ದ ನವಜೋತ್ ಸಿಂಗ್ ದೆಹಲಿಯ ಹರಿನಗರದಲ್ಲಿ ವಾಸವಿದ್ದರು. ಘಟನೆಯಲ್ಲಿ BMW ಕಾರು ಚಲಾಯಿಸುತ್ತಿದ್ದ ಮಹಿಳೆಯ ಪತಿಗೂ ಗಾಯವಾಗಿದೆ. ನವಜೋತ್ ಸಿಂಗ್ ಪತ್ನಿ ಸಂದೀಪ್ ಕೌರ್ ಹಾಗೂ ಕಾರು ಚಾಲಕಿ ಪತಿ ಇಬ್ಬರೂ ನ್ಯೂಲೈಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆ ಚಲಾಯಿಸುತ್ತಿದ್ದ BMW ಕಾರು ನವಜೋತ್ ಸಿಂಗ್ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತದ ಬಳಿಕ ನವಜೋತ್ ಸಿಂಗ್ ಹಾಗೂ ಪತ್ನಿ ಸಂದೀಪ್ ಕೌರ್ ಹಾಗೂ ಮಹಿಳೆಯ ಪತಿ ಮೂವರನ್ನು ಖಾಸಗಿ ಕ್ಯಾಬ್ ಮೂಲಕ ಮಹಿಳೆ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಮಹಿಳೆ ಸ್ಥಳೀಯ ಆಸ್ಪತ್ರೆ ದಾಖಲಿಸಿ ತಕ್ಷಣದ ಚಿಕಿತ್ಸೆ ನೀಡುವ ಬದಲು 17 ಕಿಲೋಮೀಟರ್ ದೂರದ ನ್ಯೂಲೈಫ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರ ನಡುವೆ ತೀವ್ರ ರಕ್ತಸ್ರಾವದಿಂದ ನವಜೋತ್ ಸಿಂಗ್ ಮೃತಪಟ್ಟಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೆ ನವಜೋತ್ ಸಿಂಗ್ ಪ್ರಾಣ ಉಳಿಸಬಹುದಿತ್ತು ಅನ್ನೋ ಮಾತುಗಳು ಕೇಳಿಬಂದಿದೆ.
ಹಾಸನ ದುರಂತಕ್ಕೆ ಮೋದಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. BMW ಕಾರು ಹಾಗೂ ನವಜೋತ್ ಸಿಂಗ್ ಬೈಕ್ ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಿಂದ ಮಾಹಿತ ಕಲೆ ಹಾಕಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಆಸ್ಪತ್ರೆಗೆ ಭೇಟಿ ನೀಡಿರುವ ಪೊಲೀಸರು ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಆರೋಗ್ಯ ವಿಚಾರಿಸಿದ್ದಾರೆ. BMW ಕಾರು ಚಲಾಯಿಸುತ್ತಿದ್ದ ಮಹಿಳಾ ಚಾಲಕಿಯನ್ನು ವಿಚಾರಣೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ