50 ಹಳ್ಳಿಗಳಲ್ಲಿ ಭೀತಿ ಸೃಷ್ಟಿಸಿ 8 ಜನರ ಕೊಂದಿದ್ದ 5ನೇ ನರಹಂತಕ ತೋಳ ಸೆರೆ

By Kannadaprabha News  |  First Published Sep 11, 2024, 9:41 AM IST

ಬಹ್ರೈಚ್‌ನಲ್ಲಿ 8 ಮಂದಿಯನ್ನು ಬಲಿ ಪಡೆದಿದ್ದ 6 ನರಭಕ್ಷಕ ತೋಳಗಳ ಪೈಕಿ 5 ತೋಳಗಳನ್ನು ಸೆರೆ ಹಿಡಿಯಲಾಗಿದೆ. ಉಳಿದ ಒಂದು ತೋಳವನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ. ತೋಳಗಳ ದಾಳಿಗೆ ರೇಬಿಸ್ ಕಾರಣ ಎಂದು ತಜ್ಞರು ಶಂಕಿಸಿದ್ದಾರೆ.


ಬಹ್ರೈಚ್‌ (ಉ.ಪ್ರ.): ಇಲ್ಲಿ ಮಕ್ಕಳೂ ಸೇರಿದಂತೆ 8 ಮಂದಿಯನ್ನು ಕೊಂದು 20ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿ ಆತಂಕ ಸೃಷ್ಟಿಸಿದ್ದ 6 ನರಭಕ್ಷಕ ತೋಳಗಳ ಪೈಕಿ ಮಂಗಳವಾರ ತೋಳವೊಂದನ್ನು ಸೆರೆಹಿಡಿಯಲಾಗಿದೆ. ಇದರಿಂದ ಸೆರೆ ಹಿಡಿದ ತೋಳಗಳ ಸಂಖ್ಯೆ 5ಕ್ಕೆ ಏರಿಕೆ ಆಗಿದೆ ಹಾಗೂ ಇನ್ನೊಂದು ತೋಳದ ಸೆರೆ ಬಾಕಿ ಉಳಿದಂತಾಗಿದೆ. ಈ ತೋಳಗಳನ್ನು ಹಿಡಿಯಲು ಉತ್ತರಪ್ರದೇಶದ ಅರಣ್ಯ ಇಲಾಖೆ ‘ಆಪರೇಷನ್‌ ಭೇಡಿಯಾ’ ಅಭಿಯಾನ ಆರಂಭಿಸಿತ್ತು. ಇದರ ಭಾಗವಾಗಿ ಮಂಗಳವಾರ ತೋಳ ಸೆರೆ ಹಿಡಿದು ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಮಾತನಾಡಿ, ಸೋಮವಾರ ರಾತ್ರಿ ಹೆಣ್ಣು ತೋಳವೊಂದು ನಾವು ಹಾಕಿದ್ದ ಬಲೆಯಲ್ಲಿ ಸಿಕ್ಕಿಬಿದ್ದಿದೆ. ಗ್ರಾಮಸ್ಥರ ನೆರವಿನಿಂದ ಅರಣ್ಯ ಸಿಬ್ಬಂದಿ ತೋಳವನ್ನು ಹಿಡಿದು ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಉಳಿದ ಒಂದು ತೋಳ ಈ ತೋಳಗಳ ಗುಂಪುನ ನಾಯಕ ಆಗಿರಬಹುದು. ಅದನ್ನು ಸಹ ಆದಷ್ಟು ಬೇಗ ಹಿಡಿಯುತ್ತೇವೆ’ ಎಂದು ತಿಳಿಸಿದ್ದಾರೆ.

Tap to resize

Latest Videos

undefined

40 ವರ್ಷಗಳ ಹಿಂದೆ ನಡೆದ ಪಾವಗಡದ ಈ ಹಳ್ಳಿಯ ಮಕ್ಕಳ ಹತ್ಯೆ, ಇಂದಿಗೂ ಬಗೆಹರಿಯದ ನಿಗೂಢ ಕಥೆ!

8 ಜನರನ್ನು ಬಲಿಪಡೆದಿರುವ ನರಹಂತಕ ತೋಗಳ ಹತ್ಯೆ ಮಾಡಲು 9 ಶಾರ್ಪ್‌ ಶೂಟರ್‌ಗಳನ್ನು ನಿಯೋಜಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್‌ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಕುರಿತು ಮಾಹಿತಿ ನೀಡಿದ ಅರಣ್ಯಾಧಿಕಾರಿಗಳು, ಅರಣ್ಯ ಇಲಾಖೆಯ 6 ಹಾಗೂ ಪೊಲೀಸ್‌ ಇಲಾಖೆಯ 3 ಶೂಟರ್‌ಗಳನ್ನು ನೇಮಿಸಲಾಗಿದೆ. ಇವರನ್ನು ತಲಾ ಮೂವರಂತೆ ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ತೋಳ ಕಂಡ ತಕ್ಷಣ ಶೂಟ್‌ ಮಾಡುವುದು ಅಥವಾ ಅದನ್ನು ಹಿಡಿದು ಮೃಗಾಲಕ್ಕೆ ತೆರಳಿಸುವುದು ಈ ತಂಡಗಳ ಕಾರ್ಯವಾಗಿರುತ್ತದೆ ಎಂದು ತಿಳಿಸಿದ್ದರು.

ದಾಳಿಗೆ ರೇಬಿಸ್ ಕಾರಣ
ತಜ್ಞರು ದಾಳಿಕೋರ ತೋಳಗಳಿಗೆ ರೇಬಿಸ್ ಅಥವಾ ಕೆನೈನ್ ಡಿಸ್ಟೆಂಬರ್ ವೈರಸ್ ತಗುಲಿರಬಹುದು. ಕಾಯಿಲೆಗೆ ಒಳಗಾದ ತೋಳಗಳು ಮಾನವನ ಭಯ ವನ್ನೇ ಕಳೆದುಕೊಳ್ಳುತ್ತವೆ. ಹೀಗಾಗಿ ಇಷ್ಟು ವರ್ಷ ಸುಮ್ಮನಿದ್ದ ತೋಳಗಳು ಏಕಾಏಕಿ ದಾಳಿ ಆರಂಭಿಸಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.

ನರಹಂತಕ ತೋಳ ಸೆರೆಗೆ ಮಕ್ಕಳ ಮೂತ್ರದಲ್ಲಿ ಅದ್ದಿದ ಗೊಂಬೆ ಬಳಕೆ

click me!