Asianet Suvarna News Asianet Suvarna News

40 ವರ್ಷಗಳ ಹಿಂದೆ ನಡೆದ ಪಾವಗಡದ ಈ ಹಳ್ಳಿಯ ಮಕ್ಕಳ ಹತ್ಯೆ, ಇಂದಿಗೂ ಬಗೆಹರಿಯದ ನಿಗೂಢ ಕಥೆ!

1983 ರಲ್ಲಿ ಪಾವಗಡದಲ್ಲಿ ಪುಟ್ಟ ಮಕ್ಕಳ ಕಣ್ಮರೆ ಪ್ರಾರಂಭವಾಯಿತು. ಮಕ್ಕಳ ಬಟ್ಟೆ ಮತ್ತು ಅವಶೇಷಗಳು ಕಾಡಿನಲ್ಲಿ ಪತ್ತೆಯಾದವು, ಇದು ತೋಳದ ದಾಳಿಯೆಂಬ ಊಹೆಗೆ ಪುಷ್ಟಿ ನೀಡಿತು. ಆದರೆ ಕೆಲವು ಗ್ರಾಮಸ್ಥರು ಮಾಟಮಂತ್ರದ ಬಗ್ಗೆ ಶಂಕಿಸಿದರು.

Mysterious and strange stalks tumakuru Pavagada village  in Karnataka gow
Author
First Published Aug 20, 2024, 6:15 PM IST | Last Updated Aug 20, 2024, 6:16 PM IST

ಇದು ಬರೋಬ್ಬರಿ 40 ವರ್ಷಗಳ ಹಿಂದಿನ ಕಥೆ. ಕರ್ನಾಟಕದ ಪಾವಗಡದಲ್ಲಿ ನಡೆದ ಈ ನಿಗೂಢ  ಭಾರತವನ್ನು ಬೆಚ್ಚಿಬೀಳಿಸಿದ   ನಿಗೂಢ  ರಹಸ್ಯದ ಕಥೆ.  ಬೆಂಗಳೂರಿನಿಂದ 150 ಕಿಮೀ ದೂರದಲ್ಲಿರುವ ಪಾವಗಡ ತುಮಕೂರು ಜಿಲ್ಲೆಯಲ್ಲಿದ್ದು, ಪಾವಗಡ ಕೋಟೆ ಸೇರಿ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ್ದು, ಈಗ ಅನೇಕ ಮಂದಿ ಪ್ರವಾಸಿಗರು ಅಲ್ಲಿಗೆ  ಭೇಟಿ ನೀಡುತ್ತಾರೆ. 

ಆದರೆ ಒಂದು ಕಾಲದಲ್ಲಿ ತನ್ನ ನಿಗೂಢತೆಯಿಂದ  ಸುದ್ದಿಯಲ್ಲಿತ್ತು ಪಾವಗಡ ಎಂಬ ಈ ಚಿಕ್ಕ ಊರು. ಈ ನಿಗೂಢ ಘಟನೆಗಳು ನಡೆದದ್ದು 1983ರಲ್ಲಿ, ಆಗ ಈ ಚಿಕ್ಕ ಊರಿನಲ್ಲಿ 800 ರಿಂದ ಸಾವಿರ ಜನ ವಾಸಿಸುತ್ತಿದ್ದರು. ಎಲ್ಲರೂ ಪ್ರೀತಿಯಿಂದ ಸಹಬಾಳ್ವೆ ನಡೆಸುತ್ತಿದ್ದರು. ಶೇಂಗಾವನ್ನು ಇಲ್ಲಿ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ಅಂದು ಶಾಂತವಾಗಿದ್ದ ಪಾವಗಡದಲ್ಲಿ ಚಿಕ್ಕ ಮಕ್ಕಳ ನಿಗೂಢ ಸಾವು ಇಡೀ ಊರನ್ನೇ ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿತು. ಮಾತ್ರವಲ್ಲ ಅಂದಿನ ಕಾಲಕ್ಕೆ ಇದು ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಈ ಊರಿನ ಈ ಕಥೆ ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಮೊರೆ ಹೋದ ಎಸ್‌ಐಟಿ!

ರಾತ್ರಿ 8 ಗಂಟೆಯ ಸಮಯವಿರಬಹುದು ಎಲ್ಲರೂ ಊಟ ಮಾಡಿ ಅಕ್ಕಪಕ್ಕದವರು ಕುಳಿತುಕೊಂಡು ಹೊರಗಡೆ ಮಾತನಾಡುತ್ತಿದ್ದರು. ಇದ್ದಕ್ಕಿಂದಂತೆಯೇ ನಾಯಿಗಳು ಊಳಿಡುವ ಸದ್ದು ಕೇಳಿಸುತ್ತೆ. ಆದರೆ ಸದ್ದು ಮಾತ್ರ ಸಾಧಾರಣ ನಾಯಿಯಂತೆ ಕೇಳಿಸುತ್ತಿರಲಿಲ್ಲ. ಅದು ತೋಳದ ಊಳಿಡುವಿಕೆಯಾಗಿತ್ತು. ಈ ವಿಚಿತ್ರ ಕೂಗಿಗೆ ಜನ ನಾಯಿದ್ದಲ್ಲ ಎಂಬ ಸಂದೇಹಪಟ್ಟರು. ಹೆಂಗಸರು ಮಕ್ಕಳು ಈ ವಿಚಿತ್ರ ಸದ್ದಿಗೆ ಮನೆಯ ಹೊರಗಡೆ ಬರುತ್ತಿರಲಿಲ್ಲ. ಊರಿನ ಗಂಡಸರು ತಮ್ಮೂರಿನ ಬೀದಿಬದಿಯ ಕಸವನ್ನು ಗುಡಿಸಿ ಸ್ವಚ್ಚ ಮಾಡಿದರು. ಯಾವುದೇ ನಾಯಿಗಳು ಅಲ್ಲಿಗೆ ಬಾರದಂತೆ ತಡೆದರು. ಉಳಿದ ಆಹಾರವನ್ನು ಬಿಸಾಡುವುದನ್ನು ನಿಷೇಧಿಸಿದರು. ಇದು ನಾಯಿಗಳು ರಾತ್ರಿ ಹೊತ್ತು ಊಳಿಡುವುದನ್ನು ತಡೆಯುವ ಉದ್ದೇಶವಾಗಿತ್ತು. ರಾತ್ರಿ ಮನೆಯಿಂದ ಹೊರಗೆ ಬರುವುದು , ಮಕ್ಕಳು ಆಟ ಆಡುವುದನ್ನು ನಿಲ್ಲಿಸಿ ಮನೆಯೊಳಗೆ ಇರಲು ಆರಂಭಿಸಿದರು.

ಅದು 1983ರ ಏಪ್ರಿಲ್ 29 ರ ರಾತ್ರಿ ಆ ಊರಿನ ಫೀಲ್ಡ್ ವರ್ಕ್‌ರ್ ತನ್ನ ಮನೆಯಲ್ಲಿ ಪತ್ನಿ ಮತ್ತು ಐದು ವರ್ಷದ ಮಗಳ ಜೊತೆಗೆ ಪುಟ್ಟ ಮನೆಯಲ್ಲಿ ಮಲಗಿದ್ದರು. ರಾತ್ರಿ ತಂಪಾದ ಗಾಳಿ ಬರಲಿ ಎಂದು ಕಿಟಿಕಿ ಮತ್ತು ಬಾಗಿಲು ತೆರೆದು ಮಲಗಿದ್ದರು. ಒಂದು ಸಮಯದಲ್ಲಿ ಆತನಿಗೆ ಎಚ್ದರವಾಗಿ ನೋಡಿದ್ರೆ ಮಗಳು ಕಾಣುತ್ತಿರಲಿಲ್ಲ. ಗಾಬರಿಗೊಂಡು ಮನೆಯ ಸುತ್ತ ನೋಡಿದಾಗ ಆತನಿಗೆ ಪರದೆಯ ಹಿಂದೆ ತೋಳ ನಿಂತಂತೆ ಕಾಣಿಸಿತು. ಮಗಳನ್ನು ಕರೆದಾಗ ಆಕೆ ಕಾಣಲಿಲ್ಲ. ಹೆಂಡತಿಗೆ ಎಚ್ಚರವಾಗಿ ಇಬ್ಬರೂ ಮಗಳನ್ನು ಹುಡುಕಲು ಆರಂಭಿಸಿದರು.

ಬೆಂಗಳೂರು: ಡ್ರಾಪ್‌ ನೆಪದಲ್ಲಿ ಅತ್ಯಾಚಾರ ಪ್ರಕರಣ, ಯುವತಿ ವಿರುದ್ಧವೇ ಎಫ್ಐಆರ್ ದಾಖಲು!

ಬಳಿಕ ಊರವರು ಕೂಡ ಹುಡುಕಲು ಆರಂಭಿಸಿದಾಗ ಮತ್ತೆ ಊಳಿಡುವ ಸದ್ದು ಕೇಳಿಸಿತು. ಆ ಕಡೆ ಹೋದಾಗ ಮಗಳ ಕಡಗ ಆತನಿಗೆ ಸಿಕ್ಕಿತು. ಆತನ ಎದೆ ದಸಕ್ಕೆಂದಿತು. ನಿರಂತರವಾಗಿ ಆ ರಾತ್ರಿ ಹುಡುಕಿದರೂ ಆಕೆ ಎಲ್ಲೂ ಸಿಗಲಿಲ್ಲ. ಮರುದಿನ ಪೊಲೀಸರು ಬಂದು ಕಾಡಿನಲ್ಲಿ ಹುಡುಕಿದರು. ಆದರೆ ಯಾವುದೇ ಕುರುಹು ಸಿಗಲಿಲ್ಲ. ಪ್ರಾಣಿಗಳ ಹೆಜ್ಜೆಯಿಂದ ಇದು ತೋಳ ಎಂದರು. ಇದಾಗಿ ಒಂದು ವಾರದ ನಂತರ ಮಗುವಿನ ಬಟ್ಟೆ ತಲೆಬುರುಡೆ ಸಿಕ್ಕಿತು. ಬಟ್ಟೆಯಲ್ಲಿ ರಕ್ತದ ಕಲೆ ಇರುತ್ತಿತ್ತು.

ಬಳಿಕ  ಇದಾದ ಎರಡು ವಾರಗಳ ನಂತ ತನ್ನ ಹೆತ್ತವರ ಜೊತೆಗೆ ಮಲಗಿದ್ದಾಗ  3 ವರ್ಷದ ಹೆಣ್ಣು ಮಗಳು ಕಾಣೆಯಾದಳು. ಎಷ್ಟು ಹುಡುಕಿದರೂ ಆಕೆಯ ಸುಳಿವು ಸಿಗಲಿಲ್ಲ. ವಿಚಾರಿಸಿದಾಗ ರಾತ್ರಿ ಮಲಗಿದ್ದೆ ಶಬ್ಧವಾಯ್ತು ಎಂದು ಕಣ್ಣು ಬಿಟ್ಟು ನೋಡಿದಾಗ ತೋಳದಂತೆ ಕಾಣುತ್ತಿದ್ದ ಪ್ರಾಣಿಯೊಂದು ಯಾವುದೇ ವಸ್ತುವನ್ನು ಎಳೆದುಕೊಂಡು ಹೋಗಿದ್ದನ್ನು ನೋಡಿದ್ದೇನೆ ಅನ್ನುತ್ತಾನೆ. ಹೀಗಾಗಿ ತೋಳಗಳ ಹಿಂಡು ಪಾವಗಡವನ್ನು ಪ್ರವೇಶಿಸಿದರೆ ಎಂದು ಗ್ರಾಮಸ್ಥರು ಎಲ್ಲಾ ತೋಳಗಳನ್ನು ಭೇಟಿಯಾಡಿ ಕೊಂದರು. 

ಹೀಗೆ ಎಲ್ಲರೂ ಬಹಳ ಜಾಗರೂಕತೆ ಸುರಕ್ಷತೆಯಿಂದ ಜೀವನ ನಡೆಸಲು ಆರಂಭಿಸಿದರು. ಒಂದು ದಿನ ಪಕ್ಕದ ಗ್ರಾಮದ ಹಿರಿಯ ವ್ಯಕ್ತಿಯೊಬ್ಬರು. ಮಕ್ಕಳ ಬಗ್ಗೆ ಮಾತನಾಡುತ್ತಾ. ಹೇಗೆ ಈ ಊರಿನಲ್ಲಿ ಪುಟ್ಟ ಬಾಲಕಿಯರು ನಾಪತ್ತೆಯಾಗುತ್ತಿದ್ದಾರೆಂದು ಹೇಳುತ್ತಿದ್ದ , ಇದನ್ನು ಕೇಳಿದ ಮತ್ತೋರ್ವ ಹಿರಿಯ ಕುಬ್ಜ ದೇಹದ ವ್ಯಕ್ತಿ ತನ್ನ ಗಡಸು ಧ್ವನಿಯಲ್ಲಿ "ಇನ್ನೂ ಮೂವರ ಅವಶ್ಯಕತೆ ಇದೆ" ಎಂದ. ಹೀಗೆ ಹೇಳಿದ ಆ ವ್ಯಕ್ತಿಯ ಕಿವಿಯಲ್ಲಿ ಕಪ್ಪು ಮಣಿಗಳ ಓಲೆಯಿತ್ತು. ಕೈಯಲ್ಲೊಂದು ಕೋಲು ಕೂಡ ಇತ್ತು. ಆತನ ಕೈ ಮೇಲೆ ಬಿಲ್ಲು ಬಾಣದ ಹಚ್ಚೆ ಹಾಕಿಸಿಕೊಂಡಿದ್ದ, ಈತ ಹೇಳಿದ ಮಾತು ಭಯ ಹುಟ್ಟಿಸುವಂತಿತ್ತು. 

ಇದಾದ ಕೆಲವು ದಿನಗಳಲ್ಲೇ ರಾತ್ರಿ ಮಲಗಿರುವಾಗಲೇ ಆ ಊರಿನ ಮೂರು ಬಾಲಕಿಯರು ಒಬ್ಬೊಬ್ಬರಂತೆಯೇ ನಾಪತ್ತೆಯಾದರು. ಪೊಲೀಸ್‌ ಪ್ರಕರಣದ ಬಳಿಕ ಹುಡುಕಾಟ ನಡೆಸಿದಾಗ ಕಾಡಿನಲ್ಲಿ ಬಟ್ಟೆ ಮತ್ತು ಆ ಬಾಲಕಿಯರ ಆಭರಣಗಳು, ಮೂಳೆಗಳು ಸಿಗುತ್ತವೆ.  ಗ್ರಾಮಸ್ಥರು ಹೇಳೋದು ಇದು ತೋಳಗಳು ತಿಂದು ಹಾಕಿದೆಯೆಂದು. ಇನ್ನು ಕೆಲವರು ನಮ್ಮನ್ನೆಲ್ಲ ಪಾವಗಡ ಬಿಟ್ಟು ಬೇರೆ ಕಡೆ ಹೋಗಲು ತೋಳ  ಸೂಚಿಸುತ್ತಿದೆ ಎಂದು ನಂಬಿದ್ದರು.

ಮತ್ತೆ ಕೆಲವರ ಪ್ರಕಾರ ಈ ಕೃತ್ಯದ ಹಿಂದೆ ಪಕ್ಕದ ಊರಿನ ಮಾಟಗಾರರ ಕೈವಾಡವಿದೆ ಎಂದರು. ಮಾಟ ಮಂತ್ರದಲ್ಲಿ 5 ಮಾಟಗಾರರು 5 ಪುಟ್ಟ ಬಾಲಕಿಯರನ್ನು ಬಲಿಕೊಟ್ಟು ತಾವು ಅಮರರಾಗಬೇಕೆಂದಿದ್ದಾರೆ. ಈ ಐದು ಬಲಿ ಒಂದೇ ಊರಿನ ಪುಟ್ಟ ಬಾಲಕಿಯರದ್ದಾಗಬೇಕಿತ್ತು ಹೀಗಾಗಿ ಕಿಡ್ನಾಪ್ ಮಾಡಿ ಈ ಕೃತ್ಯ ಎಸಗಿದ್ದಾರೆಂದು ಕೆಲವರು ಊಹಿಸಿದರು.

ಆದರೆ ಇಲ್ಲಿ ಗಮನಿಸಬೇಕಾದುದೆಂದರೆ ಹೆಣ್ಣು ಮಕ್ಕಳೇ ಕಾಣೆಯಾಗಿದ್ದರು. ಅವರೆಲ್ಲ 5 ವರ್ಷದ ಪುಟ್ಟ ಬಾಲಕಿಯರಾಗಿದ್ದರು. ಅದು ಹುಣ್ಣಿಮೆಯ ಸಮಯವಾಗಿರುತ್ತಿತ್ತು. ಜೊತೆಗೆ ಬಾಲಕಿಯರು ಕಾಣೆಯಾದ ಒಂದು ವಾರದ ನಂತರ ಊರಿನ ಯಾರಿಗಾದರೊಬ್ಬರಿಗೆ ತಲೆಬುರುಡೆ ಮತ್ತು ಬಟ್ಟೆಗಳು ರಕ್ತದ ಕಲೆಗಳು ಕಾಣಿಸುತ್ತಿತ್ತು. ಈ ಬಗ್ಗೆ ಅನೇಕ ಊಹಾಪೋಹಗಳು ಇದ್ದರೂ ಇದು ತೋಳದ ಘಟನೆಯೇ ಎಂದು ಖ್ಯಾತಿ ಪಡೆದಿದೆ.
 

Latest Videos
Follow Us:
Download App:
  • android
  • ios