
ಬೆಂಗಳೂರು(ಮೇ.03): ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸಲು ದೇಶದ ಮೂರೂ ಸಶಸ್ತ್ರ ಪಡೆಗಳು ಭಾನುವಾರ ದೇಶದ ಉದ್ದಗಲಕ್ಕೂ ಕೋವಿಡ್ ಆಸ್ಪತ್ರೆಗಳ ಮೇಲೆ ವಿಮಾನಗಳ ಮೂಲಕ ಫ್ಲೈ ಪಾಸ್ಟ್ ಹಾಗೂ ಹೆಲಿಕಾಪ್ಟರ್‌ಗಳಿಂದ ಹೂಮಳೆ ಸುರಿಸಿ ಧನ್ಯವಾದ ಸಲ್ಲಿಸಿವೆ.
ವಾಯುಪಡೆಯ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾಗೂ ದಿಬ್ರುಘರ್‌ನಿಂದ ಕಛ್‌ವರೆಗೆ ಹಾರಾಟ ನಡೆಸಿ ಹೂವು ಚೆಲ್ಲಿವಡ. ಭೂಸೇನೆಯ ಸಶಸ್ತ್ರ ಪಡೆಗಳು ಮೌಂಟೇನ್ ಬ್ಯಾಂಡ್ ನುಡಿಸಿ, ವಿಶೇಷ ಕವಾಯತು ನಡೆಸಿ ವೈದ್ಯರು, ನರ್ಸ್‌ಗಳು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಹಾಗೂ ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದು, ನೌಕಾಪಡೆಯು ತನ್ನ ಯುದ್ಧನೌಕೆಗಳಲ್ಲಿ ವಿದ್ಯುತ್ ಬೆಳಗಿ ಕೊರೋನಾ ವಾರಿಯರ್‌ಗಳ ಜೊತೆ ದೇಶದ ಯೋಧರೂ ಇದ್ದಾರೆ ಎಂದು ಸಾಂಕೇತಿಕವಾಗಿ ಹೇಳಿದೆ.
ಈಗಾಗಲೇ ಬೆಳಿಗ್ಗೆ 10ರಿಂದ 11 ಗಂಟೆಯ ನಡುವೆ ಯುದ್ಧವಿಮಾನಗಳು ಹಾಗೂ ಸರಕು ವಿಮಾನಗಳು ಹಾರಾಟ ನಡೆಸಿ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಆಸ್ಪತ್ರೆಗಳ ಮೇಲೆ ಹೂವಿನ ಮಳೆ ಸುರಿಸಿವೆ.
ಬೆಂಗಳೂರಿನಲ್ಲೂ ಹೂಮಳೆ:
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮೇಲೆ ಭಾರತೀಯ ಸೇನೆಯಿಂದ ಹೂ ಮಳೆ ಸುರಿಸಿ ಗೌರವ ಸಮರ್ಪಣೆ ಮಾಡಿದೆ. ವಾಯು ಪಡೆಯ ಸಿ 130 ಜೆ ಹರ್ಕ್ಯುಲೆಸ್ ಮತ್ತು ಎಮ್ ಐ 17 ಹೆಲಿಕಾಪ್ಟರ್ ವಿಕ್ಟೋರಿಯಾ ಆಸ್ಪತ್ರೆಯ ಹೆಲ್ತ್ ವಾರಿಯರ್ಸ್‌ಗೆ ಮೇಲೆ ಹೂ ಮಳೆ ಸುರಿದಿದೆ.
ವಾಯು ಸೇನೆಯ ವಿಮಾನಗಳು ಬರುವ ಮೊದಲು ಡಾಕ್ಟರ್‌ಗಳು, ನರ್ಸ್‌ಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆ ಬಿಲ್ಡಿಂಗ್‍ನಿಂದ ಹೊರಭಾಗದಲ್ಲಿ ನಿಂತಿದ್ದರು. ಈ ವೇಳೆ ಹೂ ಮಳೆ ಸುರಿಯಲಾಗಿದೆ. ಇತ್ತ ವೈದ್ಯರು ಹಾಗೂ ದಾದಿಯರು ಕೂಡ ಚಪ್ಪಾಳೆ ತಟ್ಟಿ ವಾಯುಸೇನಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ವಿಶೇಷ ಗೌರವದಿಂದ ಕೊರೊನಾ ವಾರಿಯರ್ಸ್ ಮಂದಹಾಸ ಬೀರಿದ್ದು, ಸೇವೆ ಮಾಡಿದ್ದು ಸಾರ್ಥಕವಾಯ್ತೆಂಬ ಭಾವನೆ ಮುಡಿದೆ ಎಂದಿದ್ದಾರೆ. ಹೂ ಮಳೆ ಗೌರವ ಮುಗಿದ ಮೇಲೆ ಸಿಬ್ಬಂದಿ ಘೋಷಣೆ ಕೂಗಿದ್ದಾರೆ. ಇತ್ತ ಕಮಾಂಡ್ ಆಸ್ಪತ್ರೆ ಮೇಲೂ ಸುಮಾರು 8 ನಿಮಿಷಗಳ ಕಾಲ ವಾಯು ಸೇನೆ ಹೂ ಮಳೆ ಸುರಿಸಿದೆ.
ರಾತ್ರಿ ನೌಕಾಸೇನೆಯಿಂದ ಗೌರವ
ಇನ್ನು ರಾತ್ರಿ 7.30ರಿಂದ 11.59ರ ವರೆಗೆ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಐದು ಯುದ್ಧ ನೌಕೆಗಳು ವಿದ್ಯುದ್ದೀಪಗಳನ್ನು ಬೆಳಗಿ ‘ಕೊರೋನಾ ವಾರಿಯರ್‌ಗಳಿಗೆ ಸೆಲ್ಯೂಟ್’ ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ