ಕೋವಿಡ್ ಚಿಕಿತ್ಸೆಗಾಗೇ ಉಳಿತಾಯ ಮಾಡುತ್ತಿರುವ ಮಧ್ಯಮ ವರ್ಗ: ವರದಿ| ಆದ್ಯತೆ ಕಳೆದುಕೊಂಡ ಭವಿಷ್ಯದ ಖರ್ಚು| ಆರೋಗ್ಯ, ಉದ್ಯೋಗ ನಷ್ಟದ ಬಗ್ಗೆ ಚಿಂತೆ| ಅಗತ್ಯ ಖರ್ಚುಗಳಿಗಿಲ್ಲ ಕಡಿವಾಣ
ಮುಂಬೈ(ಜು.18): ಮಹಾಮಾರಿ ಕೊರೋನಾ ವೈರಸ್ ಮಧ್ಯಮ ವರ್ಗದ ಕುಟುಂಬವನ್ನು ಇನ್ನಿಲ್ಲದಂತೆ ಕಾಡಿದ್ದು, ತಮ್ಮ ಬಹುಪಾಲು ಗಳಿಕೆಯನ್ನು ಕೋವಿಡ್ ಚಿಕಿತ್ಸೆಗಾಗಿಯೇ ಉಳಿತಾಯ ಮಾಡುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಅಚಾನಕ್ಕಾಗಿ ಉಂಟಾದ ಆರೋಗ್ಯ ತುರ್ತು ಪರಿಸ್ಥಿತಿ ಈ ವರ್ಗವನ್ನು ಬಹುವಾಗಿ ಕಾಡಿದ್ದು, ಮಕ್ಕಳ ಶಿಕ್ಷಣ ಅಥವಾ ಮದುವೆಯಂಥ ದೀರ್ಘ ಕಾಲಿನ ಯೋಜನೆಗೆ ಉಳಿತಾಯ ಮಾಡದೇ ಕೋವಿಡ್ ಚಿಕಿತ್ಸೆಗಾಗಿಯೇ ಎತ್ತಿಡುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಲಾಕ್‌ಡೌನ್ ಮತ್ತೆ ಮುಂದುವೆಯುತ್ತಾ? ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು!
ಖಾಸಗಿ ವಿಮಾ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಇದು ಗೊತ್ತಾಗಿದ್ದು, ಪ್ರತಿಕ್ರಿಯಿಸಿದವರ ಪೈಕಿ ಅತೀ ಹೆಚ್ಚು ಮಂದಿ ಕೊರೋನಾ ಚಿಕಿತ್ಸೆಗೆ ಉಳಿತಾಯ ಮಾಡುತ್ತಿದ್ದಾರೆ. ಬಳಿಕದ ಸ್ಥಾನದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಹಾಗೂ ಕೆಲಸ ನಷ್ಟಇದೆ. ಮಕ್ಕಳ ಶಿಕ್ಷಣ,ಮನೆ ಖರೀದಿ, ಮಕ್ಕಳ ವಿವಾಹ ಮುಂತಾದ ಅಗತ್ಯಗಳು ಆದ್ಯತೆ ಕಳೆದುಕೊಂಡಿವೆ ಎಂದು ಹೇಳಿದೆ.
ಹೆತ್ತ ತಾಯಿಯ ಎತ್ತಿ ಬಿಸಾಕಿದ: ವೃದ್ಧ ತಾಯಿಗೆ ಮಗ, ಮೊಮ್ಮಗನಿಂದ ಅಮಾನುಷ ಹಲ್ಲೆ
ಇದೇ ವೇಳೆ ಮಧ್ಯಮ ವರ್ಗದ ಆರ್ಥಿಕ ಭದ್ರತೆಯೂ ಕುಸಿದಿದ್ದು, ಮೆಟ್ರೋ ನಗರದಲ್ಲಿ ಅದರ ಪ್ರಮಾಣ ಶೇ.46ರಷ್ಟಿದೆ. ಒಂದನೇ ಹಾಗೂ ಎರಡನೇ ಹಂತದ ನಗರಗಳಲ್ಲಿ ಆರ್ಥಿಕ ಭದ್ರತೆಯ ಪ್ರಮಾಣ ಕ್ರಮವಾಗಿ ಶೇ.52 ಹಾಗೂ ಶೇ.55ರಷ್ಠಿದೆ. ಇದೇ ವೇಳೆ ಅಗತ್ಯಗಳಿಗೆ ಜನರ ಖರ್ಚು ಹಿಂದಿನಷ್ಟೇ ಇದ್ದು, ಒಂದನೇ ಹಂತ ಹಾಗೂ ಮೆಟ್ರೋ ನಗರದಲ್ಲಿನ ಶೇ.48 ಮಂದಿಗಳಲ್ಲಿ ಉಳಿತಾಯ ಹೆಚ್ಚಿದೆ ಎಂದು ಸಮೀಕ್ಷೆ ಹೇಳಿದೆ.