ಫೆ.18ರಂದು ದೇಶಾದ್ಯಂತ ರೈಲು ತಡೆ ಪ್ರತಿಭಟನೆಗೆ ಕರೆ ನೀಡಿದ ರೈತ ಸಂಘಟನೆ!

By Suvarna NewsFirst Published Feb 10, 2021, 10:20 PM IST
Highlights

ಟ್ರಾಕ್ಟರ್ ರ್ಯಾಲಿ, ಚಕ್ಕಾ ಜಾಮ್ ಬಳಿಕ ಇದೀಗ ರೈತ ಸಂಘಟನೆ ಮತ್ತೊಂದು ಪ್ರತಿಭಟನೆ ಘೋಷಿಸಿದೆ. ಫೆಬ್ರವರಿ 18 ರಂದು ರೈಲು ತಡೆ ಪ್ರತಿಭಟನೆಗೆ ಕರೆ ನೀಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ನವದೆಹಲಿ(ಫೆ.10): ರೈತ ಸಂಘಟನೆಗಳು ದೇಶಾದ್ಯಂತ  ಮತ್ತೊಂದು ಹೋರಾಟಕ್ಕೆ ಕರೆ ನೀಡಿದೆ. ಫೆಬ್ರವರಿಿ 18 ರಂದು ದೇಶದ್ಯಾಂತ ರೈಲು ತಡೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧದ ಹೋರಾಟವನ್ನು ರೈತ ಸಂಘಟನೆಗಳು ತೀವ್ರಗೊಳಿಸಿದೆ.

ರೈತ ಪ್ರತಿಭಟನೆ ನಡುವೆ ಸೇರಿಕೊಂಡ ಖಲಿಸ್ತಾನಕ್ಕೆ ಪಾಕ್ ಬಹಿರಂಗ ಬೆಂಬಲ; ವೈರಲ್ ವಿಡಿಯೋ!

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತಿನ ಬಳಿಕ ರೈತ ಸಂಘಟನೆಗಳು ಈ ನಿರ್ಧಾರ ತೆಗೆದುಕೊಂಡಿದೆ. ರೈತರನ್ನು ಮಾತುಕತೆಗೆ ಆಹ್ವಾನಿಸಿದ ಬೆನ್ನಲ್ಲೇ ರೈತ ಸಂಘಟನೆಗಲು ಚರ್ಚಿಸಿ ರೈಲು ತಡೆ ನಡೆಸಲು ಮುಂದಾಗಿದೆ. ಫೆಬ್ರವರಿ 18 ರಂದು 4 ಗಂಟೆಗಳ ಕಾಲ ರೈಲು ತಡೆ ನಡೆಸಲಿದೆ.

ಇನ್ನೂ 9 ತಿಂಗಳು ರೈತ ಪ್ರತಿಭಟನೆ ಖಚಿತ; ಶೀಘ್ರದಲ್ಲೇ ದೇಶಾದ್ಯಂತ ಮತ್ತೊಂದು ಹೋರಾಟ!

ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೈಲು ತಡೆ ನಡೆಸಲಾಗುವುದು ಎಂದು ರೈತ ಸಂಘಟನೆಗಳು ಹೇಳಿವೆ. ಒಂದೊಂದೆ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ. ರಸ್ತೆ, ತಡೆ ರೈಲು ತಡೆ ಪ್ರತಿಭಟನೆಗೆ ಸ್ಪಂದಿಸದಿದ್ದರೆ, ದೊಡ್ಡ ಮಟ್ಟದ ಹೋರಾಟ ಮಾಡಲು ರೈತ ಸಂಘಟನಗಳು ಸಜ್ಜಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ

click me!