
ನವದೆಹಲಿ(ಜ.03): ಕೇಂದ್ರದ ಕೃಷಿ ಕಾನೂನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟಿಸುತ್ತಿರುವ ರೈತ ಅದೇನೇ ಆದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬಂತೆ ಗಟ್ಟಿಯಾಗಿ ನಿಂತಿದ್ದಾನೆ. ಆದರೀಗ ಮೈ ಕೊರೆಯುವ ಚಳಿ ಮಧ್ಯೆ ಮಳೆಯೂ ಸುರಿಯಲಾರಂಭಿಸಿದ್ದು, ರೈತನ ತಾಳ್ಮೆಗೆ ಸವಾಲೆಸೆದಂತಿದೆ. ಕಳೆದೆರಡು ದಿನದಿಮದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅನ್ನದಾತ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಿದ್ದರೂ ಅವರ ಛಲ ಕೊಂಚವೂ ಕಡಿಮೆಯಾಗಿಲ್ಲ ಹಾಗೂ ರೈತರು ಕೂಡಾ ತಮ್ಮ ಬೇಡಿಕೆ ಸಂಬಂಧ ಸರ್ಕಾರಕ್ಕೆ ಅಲ್ಟಿಮೆಟಂ ಕೂಡಾ ನೀಡಿದ್ದಾರೆ.
ರೈತರ ತಾಳ್ಮೆ ಪರೀಕ್ಷಿಸುತ್ತಿದೆ ಮಳೆ
ದೆಹಲಿಯ ವಿವಿಧ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಬೆಳ್ಳಂ ಬೆಳಗ್ಗೆ ಮಳೆ ಸುರಿದಾಗ ಭಾರೀ ಸಮಸ್ಯೆ ಉಂಟಾಗಿದೆ. ಈ ಮಳೆಯಿಂದ ಒದದ್ದೆಯಾಗದಂತೆ ಉಳಿದುಕೊಳ್ಳಲು ಕೆಲ ರೈತರು ತಮ್ಮನ ಟೆಂಟ್‌ಗಳತ್ತ ಓಡಿದರೆ, ಇನ್ನು ಕೆಲವರು ಟ್ರೋಲಿ ಕೆಳಗೆ ಹೋಗಿದ್ದಾರೆ. ಮೈಕೊರೆಯುವ ಚಳಿ ನಡುವೆ ಸುರಿದ ಈ ಮಳೆಗೆ ರೈತರು ಮತ್ತಷ್ಟು ನಡುಗಿದ್ದಾರೆ. ಹೀಗಿದ್ದರೂ ಕೆಲ ರೈತರು ಈ ಮಳೆ ನಡುವೆಯೂ ಒದ್ದೆಯಾಗುತ್ತಲೇ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ನಾಳೆ ಸರ್ಕಾರ ತಮ್ಮ ಬೇಡಿಕೆ ಒಪ್ಪಿಕೊಳ್ಳಬಹುದು: ರೈತರ ಭರವಸೆ
ರೈತರ ಪ್ರತಿಭಟನೆ ಆರಂಭವಾಗಿ ಇಂದಿಗೆ 38ನೇ ದಿನ. ಹೀಗಿರುವಾಗ ಸುರಿದ ಮಳೆಯಿಂದ ರೈತರು ಮಲಗಲು ನಿರ್ಮಿಸಿದ ಟೆಂಟ್, ಬಟ್ಟೆ, ಟ್ರೋಲಿ ಹೀಗೆ ಎಲ್ಲವೂ ಒದ್ದೆಯಾಗಿದೆ. ಹಈ ನಡುವೆಯೂ ದೆಹಲಿ ಉತ್ತರ ಪ್ರದೇಶ ಗಡಿ, ಗಾಜೀಪುರದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಈ ಕೆಟ್ಟ ವಾತಾವರಣದಲ್ಲೂ ನಾವು ನಮ್ಮ ಕುಟುಂಬದಿಂದ ದೂರ ರಸ್ತೆಗಳಲ್ಲಿ ಪ್ರತಿಭಟಿಸುತ್ತಿದ್ದೇವೆ. ಹೀಗಿರುವಾಗ ನಾಳೆ ಸರ್ಕಾರ ನಮ್ಮ ಬೆಡಿಕೆಯನ್ನು ಒಪ್ಪಿಕೊಳ್ಳುವ ಭರವಸೆ ಇದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ