ಮೊಬೈಲ್‌ನಲ್ಲಿ ಮುಳುಗಿದ ಮೇಲೆ ಸಿಂಹ ಬಂದರೂ ತಿಳಿಯದೇ...? ಇಲ್ಲೇನಾಯ್ತು ನೋಡಿ

By Anusha KbFirst Published Nov 29, 2022, 9:29 PM IST
Highlights

ಸಿಂಹ ಹುಲಿ ಮುಂತಾದ ಪ್ರಾಣಿಗಳನ್ನು ನೋಡಿದ ಕೂಡಲೇ ಎದ್ನೋ ಬಿದ್ನೋ ಎಂದು ಜೀವ ಕೈಯಲ್ಲಿಡುದುಕೊಂಡು ಓಡೋದೆ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ಸಿಂಹಗಳೆರಡು ಹೊಲವೊಂದರಲ್ಲಿ ಹಾಯಾಗಿ ಓಡಾಡುತ್ತಿದ್ದರು ರೈತನೋರ್ವ ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ಹೊಲ ಕಾಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

ಸಿಂಹ ಹುಲಿ ಮುಂತಾದ ಪ್ರಾಣಿಗಳನ್ನು ನೋಡಿದ ಕೂಡಲೇ ಎದ್ನೋ ಬಿದ್ನೋ ಎಂದು ಜೀವ ಕೈಯಲ್ಲಿಡುದುಕೊಂಡು ಓಡೋದೆ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ಸಿಂಹಗಳೆರಡು ಹೊಲವೊಂದರಲ್ಲಿ ಹಾಯಾಗಿ ಓಡಾಡುತ್ತಿದ್ದರು ರೈತನೋರ್ವ ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ಹೊಲ ಕಾಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

ಹೊಲ ಸಂಪೂರ್ಣ ಹಸಿರಾಗಿದ್ದು,  ರೈತನೋರ್ವ ಒಂದು ಕೈಯಲ್ಲಿ ದೊಣ್ಣೆ ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಹೊಲ ಕಾಯುತ್ತಿದ್ದಾನೆ. ಈ ವೇಳೆ ಅದೇ ಹೊದಲ್ಲಿ ಸಿಂಹವೊಂದು ಹಾಯಾಗಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ. ಮತ್ತೊಂದು ಸಿಂಹ ಆ ಸಿಂಹವಿರುವ ಜಾಗಕ್ಕೆ ಬರುತ್ತಿದೆ. ಆದರೆ ಇದನ್ನು ನೋಡಿಯೂ ನೋಡದಂತೆ ರೈತನೋರ್ವ ತನ್ನ ಮೋಬೈಲ್ ನೊಡಿಕೊಂಡು ಧೈರ್ಯವಾಗಿ ನಿಂತಿದ್ದಾನೆ. ಹೊಲದಲ್ಲಿ ರೈತ ಹಾಗೂ ಸಿಂಹ ಇಬ್ಬರೂ ಒಂದೇ ಹೊಲದಲ್ಲಿ ನಿಂತಿರುವ ವಿಡಿಯೋವನ್ನು ಮತ್ತಿನ್ಯಾರೋ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಐಎಫ್‌ಎಸ್ (Indian Forest Service) ಅಧಿಕಾರಿ ಸಾಕೇತ್ ಬದೊಲಾ (Saket Badola) ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ದೃಶ್ಯವನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಹಬಾಳ್ವೆ ಎಂದು ವಿಡಿಯೋಗೆ ಅವರು ಶೀರ್ಷಿಕೆ ನೀಡಿದ್ದಾರೆ. 

Coexistence!! pic.twitter.com/6YYm4lmxAO

— SAKET (@Saket_Badola)

ಸಾಮಾನ್ಯವಾಗಿ ಕಾಡುಪ್ರಾಣಿಗಳು (Wild Animal) ಹಸಿದಿದ್ದಲ್ಲಿ ಮಾತ್ರ ಬೇಟೆಯಾಡುತ್ತವೆ. ಅದರ ಹೊರತಾಗಿ ಅವುಗಳು ಅವುಗಳಷ್ಟಕ್ಕೆ ಯಾರ ಸುದ್ದಿಗೂ ಹೋಗದೇ ಸುಮ್ಮನೆ ಮಲಗಿರುತ್ತವೆ. ಆದರೆ ಅವುಗಳ ಶಾಂತಿಭಂಗ ಮಾಡಿ ಕೆರಳಿಸಲು ಹೋದರೆ ಮಾತ್ರ ರೊಚ್ಚಿಗೆದ್ದು ದಾಳಿ ಮಾಡುತ್ತವೆ. ಅದೇ ರೀತಿ ಇಲ್ಲಿ ಸಿಂಹಗಳು ಹಾಯಾಗಿ ತಮ್ಮಷ್ಟಕ್ಕೆ ತಾವೇ ಮಲಗಿದ್ದು, ಇತ್ತ ರೈತ ಕೂಡ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದಾನೆ. ಸಾಮಾನ್ಯವಾಗಿ ಮೊಬೈಲ್‌ನಲ್ಲಿ ಮುಳುಗುವ ಕೆಲವರಿಗೆ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಅರಿವು ಕೂಡ ಇರುವುದಿಲ್ಲ. ಅದೇ ರೀತಿ ಇಲ್ಲೂ ಈ ಯುವಕ ಹೆದರದೇ ಓಡಲು ಇದೂ ಒಂದು ಕಾರಣವಿರಲೂಬಹುದು. ಅಂತೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಾಕಷ್ಟು ವೈರಲ್ ಆಗುತ್ತಿದ್ದು, ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಣ್ಣೀರು ತರಿಸುತ್ತಿದೆ ಕಾಡಿನ ರಾಜನ ದುಸ್ಥಿತಿ: ತಿನ್ನಲು ಆಹಾರವಿಲ್ಲದೇ ಅಸ್ಥಿಪಂಜರದಂತಾದ ಸಿಂಹಗಳು

ಇದೇ ವಿಡಿಯೋವನ್ನು ಮತ್ತೊಬ್ಬ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ( ಕೂಡ ಪೋಸ್ಟ್ ಮಾಡಿದ್ದು, ಗುಜರಾತ್‌ನ ಹೊಲದಲ್ಲಿ ಒಂದು ದಿನ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನದ (Gir National Park in Gujarat) ಸಮೀಪದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಆ ಬಗ್ಗೆ ಖಚಿತತೆ ಇಲ್ಲ. ಆದರೆ ಅನೇಕರು ಈ ವಿಡಿಯೋ ನೋಡಿ ಹಲವು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈ ಸಿಂಹಗಳು ಕೃಷಿ ವಿಭಾಗದ  ಪರಿಶೀಲನೆಗೆ ಬಂದಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ರೈತನಿಗೆ ನೆರವಾಗುವು ಕ್ರಮ. ಸಿಂಹಗಳಿರುವುದರಿಂದ ಈ ಹೊಲದಲ್ಲಿ ಮೊಲ ಮುಂತಾದ ಸಸ್ಯಗಳನ್ನು ತಿಂದು ಕೃಷಿ ಹಾಳು ಮಾಡುವ ಪ್ರಾಣಿಗಳು ಬರಲಾರವು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇಲ್ಲಿನ ಜನರು ಶ್ವಾನಗಳಂತೆ ಸಿಂಹಗಳ ಜೊತೆಯೂ ಸಹಬಾಳ್ವೆಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಗಿರ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಜಿಲ್ಲೆಗಳಾದ ಅಮ್ರೆಲಿ (amreli), ವೆರವಲ್ (veraval) ಪ್ರದೇಶದಲ್ಲಿ ಇದು ಸಾಮಾನ್ಯ ವಿಚಾರ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

WorldLionDay: ಗಿರ್‌ ಅರಣ್ಯದಲ್ಲಿ ರಾಜ ರಾಣಿ ಮಕ್ಕಳು... ಅಪರೂಪದ ದೃಶ್ಯ ಸೆರೆ

ಮತ್ತೆ ಕೆಲವರು ಇವುಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲವೇ ಎಂದು ಕುತೂಹಲದಿಂದ ಕೇಳಿದ್ದಾರೆ. ಮತ್ತೆ ಕೆಲವರು ಬಹುಶಃ ಇವುಗಳಿಗೆ ರೈತ ಆಹಾರ ನೀಡುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.

ಎಮ್ಮೆಗಳಿಂತ ಕಡಿಮೆ ದರಕ್ಕೆ ಸಿಂಹಗಳನ್ನು ಖರೀದಿ ಮಾಡ್ಬಹುದು.. ಆಫರ್‌ ಪಾಕಿಸ್ತಾನದಲ್ಲಿ ಮಾತ್ರ!

click me!