ಹಲ್ಲಿಗಳ ಪ್ರೈವೇಟ್ ಪಾರ್ಟ್ ಮಾರಾಟ ಮಾಡುತ್ತಿದ್ದ 38 ವರ್ಷದ ಜ್ಯೋತಿಷಿಯ ಬಂಧನ

Published : Jul 21, 2025, 02:52 PM IST
Lizard Private Part Sale

ಸಾರಾಂಶ

 ಹಲ್ಲಿಗಳ ಜನನಾಂಗಗಳನ್ನು ಮಾರಾಟ ಮಾಡುತ್ತಿದ್ದ ಜ್ಯೋತಿಷಿಯನ್ನು ಬಂಧಿಸಲಾಗಿದೆ. ರಹಸ್ಯ ಮತ್ತು ತಾಂತ್ರಿಕ ಆಚರಣೆಗಳಲ್ಲಿ ಬಳಕೆಗಾಗಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. 

ಫರಿದಾಬಾದ್: ಹರಿಯಾಣದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಲ್ಲಿಗಳ ಜನಾಂಗ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹಲ್ಲಿಗಳ ಪ್ರೈವೇಟ್ ಪಾರ್ಟ್ ಮಾರಾಟ ಮಾಡುತ್ತಿದ್ದ ಜ್ಯೋತಿಷಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಅರಣ್ಯ ಇಲಾಖೆ, ಪೊಲೀಸರು, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಮತ್ತು ವನ್ಯಜೀವಿ ಟ್ರಸ್ಟ್ ಆಫ್ ಇಂಡಿಯಾ ಜಂಟಿಯಾಗಿ ದಾಳಿ ನಡೆಸಿ ನಕಲಿ ಜ್ಯೋತಿಷಿಯನ್ನು ಬಂಧಿಸಲಾಗಿದೆ. ಫರಿದಾಬಾದ್‌ನ ಸೆಕ್ಟರ್ -8 ರ ಘಟನೆ ಇದಾಗಿದ್ದು, 38 ವರ್ಷದ ಯಜ್ಞ ದತ್ ಬಂಧಿತ ಸ್ವಯಂ ಘೋಷಿತ ಜ್ಯೋತಿಷಿ. ಈ ಜನಾಂಗಗಳ ಮಾರಾಟ ಏಕೆ ಮಾಡುತ್ತಿದ್ದ? ಇವುಗಳನ್ನು ಹೇಗೆ ಸೇಲ್ ಮಾಡುತ್ತಿದ್ದ ಎಂಬುದರ ಮಾಹಿತಿ ಇಲ್ಲಿದೆ.

ಫರಿದಾಬಾದ್‌ನ ಸೆಕ್ಟರ್ -8ರಲ್ಲಿ ವಾಸವಾಗಿದ್ದ ಯಜ್ಞ ದತ್, ಮಾನಿಟರ್ ಹಲ್ಲಿ ಜನಾಂಗಗಳನ್ನು ಮಾರಾಟ ಮಾಡುತ್ತಿದ್ದನು. ಇವುಗಳನ್ನು ರಹಸ್ಯ ಮತ್ತು ತಾಂತ್ರಿಕ ಆಚರಣೆಗಳಲ್ಲಿ ಬಳಸಲಾಗುತ್ತಿದ್ದ ಎಂದು ಹೇಳಲಾಗುತ್ತಿದೆ. ದಾಳಿ ವೇಳೆ ಅಧಿಕಾರಿಗಳು ಹಲ್ಲಿಗಳ ಮೂರು ಜನಾಂಗಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊರಗೆ ಆಧ್ಯಾತ್ಮಿಕ ಉಪನ್ಯಾಸ ಮಾಡೋದಾಗಿ ಯಜ್ಞ ದತ್ ಹೇಳಿಕೊಂಡಿದ್ದನು.

ಹೇಗೆ ಮಾರಾಟ?

ಯಜ್ಞ ದತ್ ತನ್ನ ಜ್ಯೋತಿಷ್ಯ ಕಚೇರಿ ಮತ್ತು ಆನ್‌ಲೈನ್ ವೇದಿಕೆಯ ಮೂಲಕ ಈ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ದಾಳಿ ನಡೆಸಿದ ಅಧಿಕಾರಿಗಳು ನಕಲಿ ಜ್ಯೋತಿಷಿ ಯಜ್ಞ ದತ್‌ನಿಂದ ಹಲ್ಲಿಗಳ ಮೂರು ಜನನಾಂಗಗಳು ಮತ್ತು ಮೃದು ಹವಳದ ಐದು ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಏನು ಶಿಕ್ಷೆ?

1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪಟ್ಟಿಯಲಿ ಮಾನಿಟರ್ ಹಲ್ಲಿಯನ್ನು ಪಟ್ಟಿ ಮಾಡಲಾಗಿದೆ. ಮಾನಿಟರ್ ಹಲ್ಲಿಯ ಜಾತಿಯನ್ನು ರಕ್ಷಿಸಲು ಉಳಿಸಲು ಅತ್ಯುನ್ನತ ಕಾನೂನು ರಕ್ಷಣಾ ವ್ಯವಸ್ಥೆಗಳಿವೆ. ದೇಶದಲ್ಲಿ ಮಾನಿಟರ್ ಹಲ್ಲಿಯ ದೇಹದ ಭಾಗಗಳನ್ನು ಇಟ್ಟುಕೊಳ್ಳುವುದು ಅಥವಾ ವ್ಯಾಪಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿಯ ತಪ್ಪು ಸಾಬೀತಾದ್ರೆ ಅಪರಾಧಿಗೆ 3 ರಿಂದ 7 ವರ್ಷಗಳವರಗೆ ಜೈಲು ಶಿಕ್ಷೆ ವಿಧಿಸಬಹುದು. ನ್ಯಾಯಾಲಯ 10 ಸಾವಿರ ರೂ.ಗಳವರಗೆ ದಂಡವನ್ನು ಸಹ ವಿಧಿಸಬಹುದು.

ಖರೀದಿದಾರರು ಯಾರು?

ಯಜ್ಞ ದತ್ ಬಳಿ ವ್ಯವಹರಿಸುತ್ತಿದ್ದ ಖರೀದಿದಾರರು ಯಾರು ಎಂದು ಪತ್ತೆ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಯಜ್ಞ ದತ್ ಜೊತೆ ಇನ್ಯಾರಾದ್ರು ಶಾಮೀಲು ಆಗಿದ್ದಾರೆ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುವ ಅಗತ್ಯವಿದೆ ಎಂದು ರುಗ್ರಾಮ್ ವಿಭಾಗೀಯ ಅರಣ್ಯ ಅಧಿಕಾರಿ ಆರ್.ಕೆ. ಜಂಗ್ರಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..