
ನವದೆಹಲಿ: ಪ್ರಯಾಣಿಕರ ರೈಲಿನ ಟಿಕೆಟ್ ದರ ನಿಗದಿ ಹೇಗೆ ಮಾಡಲಾಗುತ್ತದೆ ಎಂದು ಹೇಳಲಾಗದು. ಯಾಕೆಂದರೆ ಅದು ವ್ಯಾಪಾರದ ಸೀಕ್ರೆಟ್. ಈ ದರ ನಿಗದಿ ಪ್ರಕ್ರಿಯೆಗೆ ಮಾಹಿತಿ ಹಕ್ಕುಗಳ ಕಾಯ್ದೆಯಿಂದ ರಕ್ಷಣೆ ಇದೆ ಎಂದು ಭಾರತೀಯ ರೈಲ್ವೆಯು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ತಿಳಿಸಿದೆ.
ತತ್ಕಾಲ್ ಬುಕ್ಕಿಂಗ್ ಸೇರಿ ಪ್ರಯಾಣಿಕರ ರೈಲು ಪ್ರಯಾಣದ ಮೂಲ ದರ ನಿಗದಿ ಕುರಿತ ಮಾಹಿತಿ ನೀಡುವಂತೆ ಕೋರಿ ಆರ್‌ಟಿಐ ನಡಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಈ ಪ್ರತಿಕ್ರಿಯೆ ನೀಡಲಾಗಿದೆ.
ಪ್ರಯಾಣಿಕರ ದರವನ್ನು ವಿವಿಧ ಪ್ರಯಾಣ ವರ್ಗಗಳು (ಎಸಿ, ನಾನ್ ಎಸಿ ಹೀಗೆ...) ಹಾಗೂ ಒದಗಿಸಲಾಗುವ ಸೌಲಭ್ಯಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಆದರೆ, ದರ ನಿಗದಿಗೆ ಯಾವ ಮಾರ್ಗ ಅನುಸರಿಸಲಾಗುತ್ತದೆ ಎಂಬುದು ವ್ಯಾಪಾರದ ರಹಸ್ಯವಾಗಿದೆ. ವ್ಯಾಪಾರ ರಹಸ್ಯಗಳು ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಆರ್‌ಟಿಐ ಕಾಯ್ದೆಯ ಸೆಕ್ಷನ್ 8ರಡಿ ಬಹಿರಂಗಪಡಿಸಲು ಆಗುವುದಿಲ್ಲ. ಇಂಥ ಮಾಹಿತಿ ಬಹಿರಂಗಪಡಿಸುವುದರಿಂದ ಕಾಯ್ದೆಯಡಿ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ