
ಕೊಚ್ಚಿ (ಮಾ.21) : ಎರಡು ವರ್ಷದ ಪುಟ್ಟ ಕಂದಮ್ಮ, 4 ವರ್ಷ ಹಾಗೂ 14 ವರ್ಷದ ಇಬ್ಬರು ಮಕ್ಕಳು ಸಂಸಾರ ಅದು. ಪತಿ ದುರಂತ ಅಂತ್ಯಕಂಡ ಬಳಿಕ ಪತ್ನಿ ಮೂರು ಮಕ್ಕಳ ಜೊತೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರು. ಕೊನಗೆ ಸಂಸಾರದ ನಾಲ್ಕು ಮಂದಿ ಜೊತೆಗೆ ಸಂಬಂಧಿ ಮಹಿಳೆ ದುರಂತ ಅಂತ್ಯ ಕಂಡ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ತಿರುವಂತಪುರಂ ಮೂಲದ ಈ ಕುಟುಂಬ ಚಿಕಿತ್ಸೆಗಾಗಿ ವಡುತಲಗೆ ವರ್ಗಾವಣೆಗೊಂಡಿತ್ತು. ಘಟನಾ ಸ್ಥಳದಿಂದ ಡೆತ್ ನೋಟ್ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತರನ್ನು ಶ್ರೀಕುಮಾರಿ, ಅವರ ಮಗಳು ಅಶ್ವತಿ ಎಸ್ ನಾಯರ್, ಕಾರ್ಣಿವನ್ (14), ಕೀರ್ತವನ್ (4) ಮತ್ತು ಎರಡು ವರ್ಷದ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ಈ ಕುಟುಂಬ ಎರಡು ತಿಂಗಳ ಹಿಂದಷ್ಟೇ ವಡುತಲದಲ್ಲಿ ಬಾಡಿಗೆ ಮನೆಗೆ ಬಂದಿತ್ತು. ಆಸ್ಟರ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯಲು ಇವರು ಎರ್ನಾಕುಲಂಗೆ ಬಂದಿದ್ದರು. 2025ರ ಫೆಬ್ರವರಿಯಿಂದ ತಿರುವನಂತಪುರಂನಲ್ಲಿರುವ ತಮ್ಮ ಸ್ವಂತ ಮನೆಯನ್ನುಬೇರೆಯವರಿಗೆ ಬಾಡಿಗೆಗೆ ನೀಡಿ ಇವರು ಎರ್ನಾಕುಲಂಗೆ ಬಂದಿದ್ದರು. ಚಿಕಿತ್ಸೆಗಾಗಿ ಈ ನಿರ್ಧಾರ ಮಾಡಿದ್ದರು.
ಡೆತ್ ನೋಟ್ ಹಾಗೂ ಮೇಲ್ನೋಟಕ್ಕೆ ಇಂದೊಂದು ಸಾಮೂಹಿಕ ದುರಂತ ಅಂತ್ಯದ ಘಟನೆ ಎಂದು ಪೊಲೀಸರು ಹೇಳಿದ್ದಾರೆ. ಡೆತ್ ನೋಟ್‌ನಲ್ಲಿ ಪತಿ ಕುಟುಂಬಸ್ಥರ ವಿರುದ್ದ ಕೆಲ ಆರೋಪಗಳಿವೆ. ಪತಿ ಕುಟುಂಬಸ್ಥರು ನೀಡಿದ ಕಿರುಕುಳವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಪತಿ ಕೆಲ ತಿಂಗಳ ಹಿಂದೆ ಬದುಕು ಅಂತ್ಯಗೊಳಿಸಿದ್ದರು. ಪತಿ ಮರಣದ ನಂತರ, ಪತಿಯ ಕುಟುಂಬಸ್ಥರ ಕಿರುಕಳ ತೀವ್ರಗೊಂಡಿದೆ ಎಂದು ಆರೋಪಿಸಿದ್ದಾರೆ. ಈ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸೆಂಟ್ರಲ್ ಎಸಿಪಿ ಸಿ. ಪ್ರೇಮಾನಂದಕೃಷ್ಣನ್ ತಿಳಿಸಿದ್ದಾರೆ.
ಈ ಸಾಮೂಹಿಕ ಆತ್ಮಹತ್ಯೆಗೆ ಅಶ್ವತಿಯ ಪತಿಯ ಕುಟುಂಬವೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಲಾಗಿದೆ. ಪತಿಯ ಕುಟುಂಬದವರ ನಿಂದನೆಯೇ ಈ ದುರಂತಕ್ಕೆ ಕಾರಣ ಎಂದು ಪತ್ರದಲ್ಲಿ ಬರೆಯಲಾಗಿದೆ. ಅಶ್ವತಿಯ ಪತಿ ಕೂಡ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ವಿಶೇಷ ಸೂಚನೆ: ಬದುಕು ಅಂತ್ಯಗೊಳಿಸುವ ನಿರ್ಧಾರ ಯಾವುದೇ ಹಂತದಲ್ಲೂ ಮಾಡಬೇಡಿ. ಇದು ಯಾವ ಸಮಸ್ಯೆಗೂ ಪರಿಹಾರವಲ್ಲ. ಮಾನಸಿಕ ತಜ್ಞರು, ಆಪ್ತರನ್ನು ಸಂಪರ್ಕಿಸಿ, ಉಚಿತ ಸಮಾಲೋಚನಾ ಕೇಂದ್ರಗಳಿಗೆ ಕರೆ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ