Manipur: ಪೊಲೀಸರಿಂದ ಬಿಡಿಸಿ ಎಳೆದೊಯ್ದು ನಗ್ನ ಪರೇಡ್‌ ಮಾಡಿ ರೇಪ್‌; ಈ ವಿಕೃತ ಘಟನೆಗೆ ಇಲ್ಲಿದೆ ಅಸಲಿ ಕಾರಣ..

By Kannadaprabha News  |  First Published Jul 21, 2023, 11:32 AM IST

ಮೇ 4ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಮೈತೇಯಿ ಸಮುದಾಯದ ವಿವಿಧ ಸಂಘಟನೆಗಳ 800 -1000ಕ್ಕೂ ಹೆಚ್ಚು ಜನರ ಗುಂಪು ಕುಕಿ ಸಮುದಾಯದ ಹಳ್ಳಿಗಳ ಮೇಲೆ ದಾಳಿ ನಡೆಸಿತು. ದಾಳಿಕೋರರು ಎಕೆ ರೈಫಲ್ಸ್‌, ಎಸ್‌ಎಲ್‌ಆರ್‌ ಗನ್‌, ಇನ್ಸಾಸ್‌ ಗನ್‌, 0303 ರೈಫಲ್ಸ್‌ ಇಟ್ಟುಕೊಂಡು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿರುವ ನಮ್ಮ ಬಿ.ಪೈನೋಮ್‌ ಹಳ್ಳಿಯ ಮೇಲೆ ದಾಳಿ ನಡೆಸಿದ್ದರು ಎಂದು ಮಣಿಪುರ ಘಟನೆ ಬಗ್ಗೆ ಮಾಹಿತಿ ತಿಳಿದುಬಂದಿದೆ. 


ಗುವಾಹಟಿ (ಜುಲೈ 21, 2023): ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ವೇಳೆ ಮಹಿಳೆಯರನ್ನು ನಗ್ನ ಮೆರವಣಿಗೆ ಮಾಡಿದ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಆ ಘಟನೆ ಹೇಗೆ ನಡೆಯಿತು ಎಂಬುದನ್ನು ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೊಲೀಸರಿಗೆ ಸಲ್ಲಿಸಿದ ತಮ್ಮ ದೂರಿನಲ್ಲಿ ಬಿಚ್ಚಿಟ್ಟಿದ್ದಾಳೆ. ‘ಕುಕಿ ಸಮುದಾಯದ ಪುರುಷರು, ಮೈತೇಯಿ ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿ, ಆಕೆಯ ದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿದ್ದಾರೆ ಎಂಬ ವಿಡಿಯೋವೊಂದು ಎಲ್ಲೆಡೆ ಹರಿದಾಡಿತ್ತು’
ಅದರ ಮಾರನೇ ದಿನವೇ ಅಂದರೆ ಮೇ 4ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಮೈತೇಯಿ ಸಮುದಾಯದ ವಿವಿಧ ಸಂಘಟನೆಗಳ 800 -1000ಕ್ಕೂ ಹೆಚ್ಚು ಜನರ ಗುಂಪು ಕುಕಿ ಸಮುದಾಯದ ಹಳ್ಳಿಗಳ ಮೇಲೆ ದಾಳಿ ನಡೆಸಿತು. ದಾಳಿಕೋರರು ಎಕೆ ರೈಫಲ್ಸ್‌, ಎಸ್‌ಎಲ್‌ಆರ್‌ ಗನ್‌, ಇನ್ಸಾಸ್‌ ಗನ್‌, 0303 ರೈಫಲ್ಸ್‌ ಇಟ್ಟುಕೊಂಡು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿರುವ ನಮ್ಮ ಬಿ.ಪೈನೋಮ್‌ ಹಳ್ಳಿಯ ಮೇಲೆ ದಾಳಿ ನಡೆಸಿದ್ದರು.

ದಾಳಿ ವೇಳೆ ಅವರು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತು, ಆಹಾರ, ಧಾನ್ಯ, ಹಣ ಎಲ್ಲವನ್ನೂ ದೋಚಿ ಕಂಡಕಂಡ ಮನೆಗಳಿಗೆ ಬೆಂಕಿ ಹಚ್ಚಿದರು. ಹೀಗಾಗಿ ಅವರಿಂದ ತಪ್ಪಿಸಿಕೊಳ್ಳಲು ನಾವು ಕಾಡಿಗೆ ಓಡಿದ್ದೆವು. ಆಗ ಪೊಲೀಸರು ಬಂದು ನಮ್ಮನ್ನು ರಕ್ಷಿಸಿ ವಾಹನದಲ್ಲಿ ಕರೆದೊಯ್ದರು. ಆದರೆ ಪೊಲೀಸ್‌ ಠಾಣೆಗೆ ಹೋಗುವುದಕ್ಕೂ ಮೊದಲೇ ವಿರೋಧಿಗಳ ದೊಡ್ಡ ದಂಡು ಬಂದು ನಮ್ಮನ್ನು ಇಳಿಸಿತು. ಪೊಲೀಸರು ಪ್ರತಿರೋಧ ತೋರದೆ ಅವರ ಕೈಗೆ ನಮ್ಮನ್ನು ಒಪ್ಪಿಸಿದರು’ ಎಂದು ಹೇಳಿದ್ದಾಳೆ.

Tap to resize

Latest Videos

ಇದನ್ನು ಓದಿ: ಮಣಿಪುರ ಸ್ತ್ರೀಯರ ನಗ್ನ ಪರೇಡ್‌: ದೇಶಾದ್ಯಂತ ದಿಗ್ಭ್ರಮೆ, ಆಕ್ರೋಶ;ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ

‘ನಾವು ಒಟ್ಟು ಐದು ಜನರಿದ್ದೆವು. ನಾನು, ನನ್ನ ಸಹೋದರ, ನಮ್ಮ ತಂದೆ ಮತ್ತು 40 ಹಾಗೂ 50 ವರ್ಷದ ಇನ್ನಿಬ್ಬರು ಮಹಿಳೆಯರು ಜೊತೆಗಿದ್ದೆವು. ನನ್ನ ಸಹೋದರ ಮತ್ತು ತಂದೆಯನ್ನು ಅವರು ಕೊಂದುಹಾಕಿದರು. ನಂತರ ನಮ್ಮನ್ನು ವಿವಸ್ತ್ರಗೊಳಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿ, ಅಲ್ಲೇ ನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಕೊನೆಗೆ ಅಲ್ಲೇ ಬಿಟ್ಟುಹೋದರು’ ಎಂದು ವಿವರಿಸಿದ್ದಾಳೆ.

ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದು ನಮಗೆ ಗೊತ್ತಿರಲಿಲ್ಲ. ಮಣಿಪುರದಲ್ಲಿ ಇಂಟರ್ನೆಟ್‌ ಇಲ್ಲ. ಈಗ ಅದು ವೈರಲ್‌ ಆದ ಮೇಲೆ ಗೊತ್ತಾಗಿದೆ ಎಂದೂ ಆಕೆ ತಿಳಿಸಿದ್ದಾಳೆ.

ಇದನ್ನೂ ಓದಿ: ಮಣಿಪುರ ಘಟನೆ ಅಪರಾಧಿಗಳನ್ನು ಸುಮ್ಮನೆ ಬಿಡಲ್ಲ: ಮೋದಿ; ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವು ಕೈಗೊಳ್ತೇವೆ; ಸುಪ್ರೀಂಕೋರ್ಟ್‌

ಈ ವಿಕೃತ ಘಟನೆಗೆ ಕಾರಣ ಏನು?
ಸುಳ್ಳನ್ನು ನಂಬಿ ಪ್ರತೀಕಾರ ತೆಗೆದುಕೊಳ್ಳಲು ಹೋಗಿ ದುಷ್ಕೃತ್ಯ
ಚುರಚಂದ್‌ಪುರ್‌ದಲ್ಲಿ ಕುಕಿ ಸಮುದಾಯದ ಪುರುಷನೊಬ್ಬ ಮೈತೇಯಿ ಸಮುದಾಯದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿದ್ದಾನೆ ಎಂದು ವಿವರಿಸುವ ಫೋಟೋವೊಂದು ಮೇ 3 ರಂದು ಮಣಿಪುರದಲ್ಲಿ ವೈರಲ್‌ ಆಗಿತ್ತು. ಇದು ಮೈತೇಯಿ ಸಮುದಾಯದ ಜನರನ್ನು ಭಾರೀ ಆಕ್ರೋಶಕ್ಕೆ ತಳ್ಳಿತ್ತು. ಇದರಿಂದ ಉದ್ತಿಕ್ತಗೊಂಡ ಮೈತೇಯಿ ಸಮುದಾಯದ ಜನರು ಮಾರನೇ ದಿನ ಕುಕಿ ಸಮುದಾಯದ ಹಳ್ಳಿಗಳ ಮೇಲೆ ದಾಳಿ ಮಾಡಿ ಮಹಿಳೆಯರನ್ನು ನಗ್ನ ಪರೇಡ್‌ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಘಟನೆಗೆ ಕಾರಣವಾದ ಫೋಟೋ ನಕಲಿ ಎಂದು ಪತ್ತೆಯಾಗಿತ್ತು.

ಇದನ್ನೂ ಓದಿ: 2004ರಲ್ಲೂ ಮಣಿಪುರದಲ್ಲಿ ನಡೆದಿತ್ತು 12 ಸ್ತ್ರೀಯರ ನಗ್ನ ಪೆರೇಡ್

click me!