ನಿರ್ಮಲಾ ಸೀತಾರಾಮನ್‌ ನಕಲಿ ಪ್ರೊಫೈಲ್ ವೈರಲ್: ಬಯೋದಲ್ಲಿನ ಮಾಹಿತಿ ನೋಡಿ ನಕ್ಕ ನೆಟ್ಟಿಗರು

Published : Oct 17, 2024, 01:42 PM IST
ನಿರ್ಮಲಾ ಸೀತಾರಾಮನ್‌ ನಕಲಿ ಪ್ರೊಫೈಲ್ ವೈರಲ್: ಬಯೋದಲ್ಲಿನ ಮಾಹಿತಿ ನೋಡಿ ನಕ್ಕ ನೆಟ್ಟಿಗರು

ಸಾರಾಂಶ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಕಲಿ ಬಂಬಲ್ ಪ್ರೊಫೈಲ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವ್ಯಾಪಕವಾಗಿ  ವೈರಲ್ ಆಗುತ್ತಿದೆ .

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಕಲಿ ಪ್ರೊಫೈಲ್ ಕ್ರಿಯೇಟ್ ಆಗಿದೆ. ಈ ಪ್ರೊಫೈಲ್ ಬಯೋ ಫನ್ನಿಯಾಗಿದ್ದು, ಯಾರೋ ತಮಾಷೆಗಾಗಿ ಖಾತೆ ರಚಿಸಿದ್ದಂತೆ ಕಾಣಿಸುತ್ತಿದೆ. ಸಚಿವರ ವೃತ್ತಿಜೀವನವನ್ನು ವಿಡಂಬನಾತ್ಮಕವಾಗಿ ಮತ್ತು ಹಾಸ್ಯಮಯವಾಗಿ ಬರೆಯಲಾಗಿದೆ. ಈ ಪ್ರೊಫೈಲ್‌ನಲ್ಲಿ ನಿರ್ಮಲಾ ಸೀತಾರಾಮನ್ ವಯಸ್ಸು 24 ಎಂದು ನಮೂದಿಸಲಾಗಿದೆ. "ಚೀಫ್ ಟ್ಯಾಕ್ಸ್ ಸ್ಲೇಯರ್ ಅಟ್ ಮಿನಿಸ್ಟ್ರಿ" ಎಂಬ ವಿಚಿತ್ರ ಹುದ್ದೆಯನ್ನು ಹೊಂದಿದ್ದಾರೆ. ನಾನು ಮೊದಲ ನೋಟದಲ್ಲೇ ಪ್ರೀತಿಯನ್ನು ನಂಬುವುದಿಲ್ಲ, ಆದರೆ ನೀವು ಹೊಂದಿರುವ ಎಲ್ಲದರ ಮೇಲೆ ನಾನು ಜಿಎಸ್‌ಟಿಯನ್ನು ನಂಬುತ್ತೇನೆ. ನಾನು ನಿಮ್ಮ ರೆಡ್ ಫ್ಲ್ಯಾಗ್‌ಗಳ ಮೇಲೆ ಹೆಚ್ಚು ತೆರಿಗೆಗಳನ್ನು ಹೆಚ್ಚಿಸಿದ್ದೇನೆ. ಸ್ವೈಪ್ ಮಾಡಿ ನೀವು ಸಂತೋಷವನ್ನು ಕಳೆಯುವುದು, ದುಃಖವನ್ನು ಹೆಚ್ಚಿಸುವುದು ಮತ್ತು ನಿಮ್ಮ ಒತ್ತಡವನ್ನು ಹೆಚ್ಚಿಸುವುದು ಹೇಗೆ ಎಂದು ತಿಳಿದಿರುವ ಮಹಿಳೆಯರಾಗಿದ್ದರೆ ನಾನು ನಿಮ್ಮ ಗೆಳತಿ ಅಲ್ಲ, ನಾನು ನಿಮ್ಮ ಹೊಣೆಗಾರಿಕೆ ಎಂದು ಬಯೋದಲ್ಲಿ ಬರೆಯಲಾಗಿದೆ. 

ಇತರೆ ಮಾಹಿತಿಯಲ್ಲಿ ಎತ್ತರ 170 ಸೆಂಮೀ, ಮಹಿಳೆ, ಹಿಂದೂ ಎಂದು ನಮೂದಿಸಲಾಗಿದೆ. ಮಕ್ಕಳು ಬೇಕಿಲ್ಲ ಮತ್ತು ಮಕ್ಕಳಿಲ್ಲ ಎಂದು ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಲಾಂಗ್ ಟರ್ಮ್ ರಿಲೇಶನ್‌ಶಿಪ್ ಎಂದು ಬರೆಯಲಾಗಿದೆ. ಆಸಕ್ತ ವಿಷಯದಲ್ಲಿ ಹಾರರ್‌ ಸಿನಿಮಾ ಮತ್ತು ಟಿವಿ ಶೋ ಎಂದು ಬರೆಯಲಾಗಿದೆ.

ನಾನು ನಿಮ್ಮ ಸಂಬಳ, ಬುದ್ಧಿ ಮತ್ತು ಆತ್ಮದ ಮೇಲೆಯೂ ತೆರಿಗೆ ವಿಧಿಸುತ್ತೇನೆ. ಇದರಲ್ಲಿ ಯಾವ ರಿಯಾಯ್ತಿ ಮತ್ತು ಕರುಣೆ ತೋರಿಸಲ್ಲ. ಇದು ಕೇವಲ ಹಣಕಾಸಿನ ಪ್ರಾಬಲ್ಯ ಎಂಬ ವಿಷಯವನ್ನು ಬರೆಯಲಾಗಿದೆ. ನಾನು ಯಾವುದೇ ಕಾರಣವಿಲ್ಲದೇ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಲಬಲ್ಲೆ. ತೆರಿಗೆ ವ್ಯವಸ್ಥೆಯನ್ನು ತುಂಬಾ ಕಟ್ಟುನಿಟ್ಟಾಗಿ ಮಾಡಿ, ಪ್ರತಿಯೊಬ್ಬರೂ ತಾವು ಎಂದಿಗೂ ಇದರಿಂದ ಪಾರಾಗದಂತೆ ನೋಡಿಕೊಳ್ಳುವುದು. 
 

 

… (Rest of the body translated similarly, including Twitter responses and links)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ