ಅಮ್ಮಾ ಕಾಪಾಡು ಕಾಪಾಡು ಎಂದು ಮಗಳು ಕೂಗುವ ಧ್ವನಿ ಕೇಳಿಸಿ, ನಿಮ್ಮ ಮಗಳು ಎಂಎಲ್ಎ ಮಗನೊಂದಿಗೆ ಕಾಂಪ್ರಮೈಸಿಂಗ್ ಪೊಸಿಶನ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದಾಳೆ ಎಂದ ನಕಲಿ ಪೋಲೀಸ್. ಧ್ವನಿ ಮಗಳದೇ ಆದರೂ ಈ ತಾಯಿಗೆ ಇದು ಫೇಕ್ ಕಾಲ್ ಎಂದು ತಿಳಿದದ್ದು ಹೇಗೆ?
ಈ ತಾಯಿಗೆ ಆ ಕಾಲ್ ಬಂದಾಗ ಹಾರ್ಟ್ ಅಟ್ಯಾಕ್ ಆಗುವುದೊಂದು ಬಾಕಿ. ಪೋಲೀಸ್ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯು ನಿಮ್ಮ ಮಗಳು ಈಗೆಲ್ಲಿದ್ದಾಳೆ ನಿಮಗೆ ಗೊತ್ತೇ ಎಂದು ಕೇಳಿದ್ದಾನೆ.
ನಂತರ ಆತ ನಿಮ್ಮ ಮಗಳು ಇತರೆ ಮೂವರು ಹುಡುಗಿಯರೊಂದಿಗೆ ಶಾಸಕರ ಮಗನೊಂದಿಗೆ ರಾಜಿ ಸ್ಥಾನದಲ್ಲಿದ್ದು, ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಅವಳ ಮೂವರು ಸ್ನೇಹಿತೆಯರ ಜೊತೆ ಬಂಧಿಸಲಾಗಿದೆ. ಅವಳೇ ನನಗೆ ನಿಮ್ಮ ಸಂಖ್ಯೆ ನೀಡಿದ್ದಾಳೆ ಎಂದು ಹೇಳಿದ್ದಾನೆ.
ಮಗಳೆಲ್ಲಿದ್ದಾಳೆ ಗೊತ್ತೇ ಎಂದು ಕೇಳಿದಾಗ ಅವಳಿಗೆ ಅಪಘಾತವಾಯ್ತೋ ಅಥವಾ ಇನ್ನೇನಾದರೂ ಗಾಯ ನೋವು ಸಂಭವಿಸಿದೆಯೋ ಎಂದು ಕಂಗೆಟ್ಟಿದ್ದ ತಾಯಿಗೆ ಈ ಮಾತು ಕೇಳಿ ಕೊಂಚ ಸಮಾಧಾನವಾಯಿತಂತೆ.
ನಂತರ, 'ಆಪ್ ಕಿ ಬೇಟಿ ಕೋ ಅರೆಸ್ಟ್ ಕರ್ ಲಿಯಾ ಗಯಾ ಹೈ' ಎಂದ ಫೇಕ್ ಪೋಲೀಸ್ ಮಾತು ಕೇಳಿದ ಮೇಲೆ ಇದು ಮೋಸ ಎನಿಸಿತಂತೆ. ಕೂಡಲೇ ಆಕೆ, 'ನಕಲಿ ಪೋಲೀಸ್'ಗೆ ತನ್ನ ಮಗಳೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಕೇಳಿಕೊಂಡರು. ಆಗ ಆ ವ್ಯಕ್ತಿ ಮತ್ತಷ್ಟು ಒರಟಾಗಿ ಮಾತನಾಡುತ್ತಾ ಅಸಭ್ಯವಾಗಿ ಬೈದಾಡಿದನು. ಅಷ್ಟರಲ್ಲಿ ಹಿಂದಿನಿಂದ 'ಮಮ್ಮಾ ಮುಜೆ ಬಚಾ ಲೋ, ಮಮ್ಮಾ ಮುಜೆ ಬಚಾ ಲೋ..' ಎಂದು ಮಗಳ ಧ್ವನಿ ಕೇಳಿತು.
ಹೀಗೆ ಶುರುವಾಯ್ತು ಅಕ್ಷತಾ ಮೂರ್ತಿ ರಿಷಿ ಸುನಕ್ ಲವ್ ಸ್ಟೋರಿ
ಇದು ಮಗಳದೇ ಧ್ವನಿ ಹೌದಾದರೂ, ಮಗಳೂ ಕೂಗುವ ರೀತಿ ಇದಲ್ಲ ಎಂದು ಅರಿತ ಬುದ್ಧಿವಂತ ತಾಯಿಗೆ ಇದು ಫೇಕ್ ಕಾಲ್, ಆಕಡೆ ರೆಕಾರ್ಡಿಂಗ್ ಹಾಕಲಾಗಿದೆ ಎಂದು ತಿಳಿಯಿತಂತೆ. ಜೊತೆಗೆ, ಪೋಲೀಸ್ ಎಂದುಕೊಂಡವನು ಕೊಂಚ ಹಣ ಬಿಚ್ಚಿದ್ರೆ ಮಗಳನ್ನು ಕೇಸ್‌ನಿಂದ ಬಿಟ್ಟು ಬಿಡಬಹುದು ಎನ್ನುತ್ತಿದ್ದಂತೆಯೇ ಇದೊಂದು ಹಗರಣ ಎಂದರಿತ ತಾಯಿ, ಮತ್ತೊಮ್ಮೆ ಮಗಳೊಂದಿಗೆ ಮಾತಾಡಲು ಅವಕಾಶ ಕೇಳಿದರಂತೆ. ಆಗ ಪೋಲೀಸ್ ಮತ್ತಷ್ಟು ಕೋಪಗೊಳ್ಳುತ್ತಿದ್ದಂತೆಯೇ 'ಸರಿ ಅವಳನ್ನು ಬಂಧಿಸಿ ಕರೆದುಕೊಂಡು ಹೋಗಿ' ಎಂದರಂತೆ. ಕೂಡಲೇ ಆತ ಕಾಲ್ ಕಟ್ ಮಾಡಿದ.
ವಾಯ್ಸ್ ಕ್ಲೋನಿಂಗ್ ಹಗರಣ
ಹೀಗೆ ಕೃತಕ ಬುದ್ಧಿಮತ್ತೆ ಬಳಸಿ, ಮಗಳ ಧ್ವನಿ ಅನುಕರಿಸಿ ತಮ್ಮನ್ನು ವಂಚಿಸಲು ಬಂದ ಫೇಕ್ ಪೋಲೀಸ್ ಕುರಿತ ವಿಚಾರವನ್ನು ಕಾವೇರಿ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಂತ್ರಜ್ಞಾನವೊಂದು ನಿಮ್ಮನ್ನು ಹೇಗೆಲ್ಲ ವಂಚಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ನಿಮ್ಮ ಪ್ರಪಂಚವನ್ನು ತಲೆಕೆಳಗಾಗಿ ಮಾಡುವ ಫೋನ್ ಕರೆ ಬರಬಹುದು. ಕೊಂಚ ಯಾಮಾರಿದರೂ
ವಾಯ್ಸ್ ಕ್ಲೋನಿಂಗ್ ಹಗರಣಕ್ಕೆ ಬಲಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು.