ಹೈವೋಲ್ಟೇಜ್‌ ತಂತಿ ತಗುಲಿ ಬಸ್‌ಗೆ ಬೆಂಕಿ: 5 ಮಂದಿ ಸಾವು

By Kannadaprabha NewsFirst Published Mar 12, 2024, 11:10 AM IST
Highlights

ಬಸ್ಸಿಗೆ ಓವರ್‌ಹೆಡ್‌ ಹೈವೋಲ್ಟೇಜ್‌ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ಐದು ಮಂದಿ ಸಜೀವ ದಹನಗೊಂಡ ಘಟನೆ ಉತ್ತರಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.

ಗಾಜಿಪುರ: ಬಸ್ಸಿಗೆ ಓವರ್‌ಹೆಡ್‌ ಹೈವೋಲ್ಟೇಜ್‌ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ಐದು ಮಂದಿ ಸಜೀವ ದಹನಗೊಂಡ ಘಟನೆ ಉತ್ತರಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಕುಟುಂಬವೊಂದು ಮುದುವೆ ಕಾರ್ಯಕ್ರಮಗಳನ್ನು ಮುಗಿಸಿ ದೇಗುಲಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜೀವಹಾನಿಗೆ ಸಂತಾಪ ಸೂಚಿಸಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಮೃತ ಕುಟುಂಬಕ್ಕೆ ತಲಾ 5 ಲಕ್ಷ ರು. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರು. ಆರ್ಥಿಕ ನೆರವು ನೀಡಲಾಗುವುದು ಎಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಫೋಸ್ಟ್‌ ಮಾಡಿದ್ದಾರೆ.

ಎನ್‌ಕೌಂಟರ್‌ಗೆ ಬಲಿಯಾದ ಆರೋಪಿಯ ಮಗಳ ಮದ್ವೆ ಅದ್ದೂರಿಯಾಗಿ ಪ್ಯಾಲೇಸ್‌ನಲ್ಲಿ ನಡೆಸಿಕೊಟ್ಟ ಪೊಲೀಸರು

ಸಂದೇಶ್‌ಖಾಲಿ: ಸಿಬಿಐನಿಂದ ಶೇಖ್‌ನ 3 ಆಪ್ತರ ಬಂಧನ

ಕೋಲ್ಕತಾ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಸೋಮವಾರ ಪಶ್ಚಿಮ ಬಂಗಾಳದ ಟಿಎಂಸಿ ಉಚ್ಚಾಟಿತ ನಾಯಕ ಶೇಖ್‌ ಶಾಜಹಾನ್‌ನ ಮೂವರು ಆಪ್ತರನ್ನು ಬಂಧಿಸಿದೆ. ಸೋಮವಾರ ತನಿಖೆ ಮುಂದುವರೆಸಿದ ಸಿಬಿಐ, ಶೇಖ್‌ ಮನೆಯ ಸೆಕ್ಯೂರಿಟಿ ಗಾರ್ಡ್‌ ದಿದಾರ್‌ ಬಕ್ಷ್ ಮೊಲ್ಲಾ, ಪಂಚಾಯ್ತಿ ಮುಖ್ಯಸ್ಥ ಜೈನುದ್ದೀನ್‌ ಮೊಲ್ಲಾ ಹಾಗೂ ಫಾರುಖ್‌ ಅಕುಂಜಿ ಎಂಬ ಮತ್ತೊಬ್ಬನನ್ನು ಬಂಧಿಸಿದೆ. ಇವರನ್ನು ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯದೆದುರು ಹಾಜರು ಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂವರು ಶೇಖ್‌ ಶಜಹಾನ್‌ನ ಆಪ್ತರಾಗಿದ್ದು, ದಾಳಿಯ ಮಾಸ್ಟರ್‌ ಮೈಂಡ್‌ ಆಪ್ತರಾಗಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಪುಣ್ಯಸ್ನಾನಕ್ಕೆ ತೆರಳಿದ ಭಕ್ತರ ಟ್ರಾಕ್ಟರ್ ಅಪಘಾತ, ಮಕ್ಕಳು-ಮಹಿಳೆಯರು ಸೇರಿ 22 ಸಾವು!

ಸಂದೇಶ್‌ಖಾಲಿ: ಸಿಬಿಐ ತನಿಖೆ ಪ್ರಶ್ನಿಸಿದ್ದ ಬಂಗಾಳ ಸರ್ಕಾರದ ಅರ್ಜಿ ವಜಾ

ನವದೆಹಲಿ: ಪ.ಬಂಗಾಳದ ಸಂದೇಶ್‌ಖಾಲಿಯಲ್ಲಿ ಇ.ಡಿ. ಅಧಿಕಾರಿಗಳ ಮೇಲೆ ಟಿಎಂಸಿ ಕಾರ್ಯಕರ್ತರು ಮಾಡಿರುವ ದಾಳಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಕಲ್ಕತ್ತಾ ಹೈ ಕೊರ್ಟ್‌ನ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಮಾರ್ಚ್ 6 ರಂದು, ಪಶ್ಚಿಮ ಬಂಗಾಳ ಸರ್ಕಾರವು ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್‌ ಮೊರೆಹೋಗಿತ್ತು. ಈ ಬಗ್ಗೆ ವಿಚಾರಣೆ ದ್ವಿಸದಸ್ಯ ಪೀಠವು ಹೆಚ್ಚುವರಿ ಬಂಗಾಳದ ಮನವಿ ತಿರಸ್ಕರಿಸಿತು. ಆದರೆ ಮಾ. 5ರಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಮಾಡಿದ ಟೀಕೆಗಳನ್ನು ತೆಗೆದು ಹಾಕಲು ಸೂಚಿಸಿತು.
 

click me!