
ಮಹಾ ಕುಂಭಮೇಳದಲ್ಲಿ ಪ್ರೇತಾತ್ಮಗಳು ಸ್ನಾನ ಮಾಡಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ದಾಖಲಾಗಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಸಾಧುಗಳಿಗೆ ಕೇಳಿದಾಗ, ಇದೇ ರೀತಿ ಪ್ರತಿಬಾರಿಯೂ ಆಗುತ್ತದೆ, ಜನರು ಸ್ನಾನ ಮಾಡಿದ ಬಳಿಕ ಪ್ರೇತಾತ್ಮಗಳು ಬಂದು ಸ್ನಾನ ಮಾಡಿ ಹೋಗುವುದು ಸಹಜ ಎಂದು ಹೇಳಿದ್ದಾರೆ ಎಂದೂ ಈ ವಿಡಿಯೋದಲ್ಲಿ ಹೇಳಲಾಗಿದೆ. ಇದಾಗಲೇ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಇದೇ ವಿಡಿಯೋ ವೈರಲ್ ಆಗುತ್ತಿದೆ. ಕೆಲವರು ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿಯೂ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕೇಸರಿ ಬಟ್ಟೆ ತೊಟ್ಟ 'ಆತ್ಮ'ಗಳು ಸ್ನಾನ ಮಾಡುವುದನ್ನು ನೋಡಬಹುದಾಗಿದೆ.
ಆದರೆ ಇದು ಫೇಕ್ ವಿಡಿಯೋ. ಅಸಲಿಗೆ ಇದು, ಬ್ರೆಜಿಲ್‌ನ ಪರಾನಾದ್ದು ಎಂದು ತನಿಖೆಯಿಂದ ತಿಳಿದುಬಂದಿದೆ, ಇದರಲ್ಲಿ ಬೀಚ್‌ನಲ್ಲಿ ಕಂಡುಬರುವ ಜನರು ಜೀವಂತವಾಗಿದ್ದಾರೆ. ವೈರಲ್ ವಿಡಿಯೋವನ್ನು ಮಹಾ ಕುಂಭಮೇಳಕ್ಕೆ ಲಿಂಕ್ ಮಾಡುವ ಸುಳ್ಳು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಮಹಾಕುಂಭದಲ್ಲಿ ಸ್ನಾನ ಮಾಡಲು ಸಂತರು ಮತ್ತು ಋಷಿಗಳು ಮಾತ್ರವಲ್ಲ, ದೈವಿಕ ಆತ್ಮಗಳೂ ಬರುತ್ತವೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿದೆ.
ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಿಲ್ಲವೆಂದು ಜೀವ ಬಿಡೋದಾ? ಸಹಸ್ರಾರು ಮಂದಿ ಪ್ರಾಣ ಉಳಿಸಿದ ವೈದ್ಯನಿಗೆ ಇದೆಂಥ ಸಾವು?
ವೈರಲ್ ವಿಡಿಯೋದ ಸತ್ಯವನ್ನು ತಿಳಿಯಲು, ಸಜಾಗ್ ತಂಡವು ಗೂಗಲ್ ಲೆನ್ಸ್ ಬಳಸಿ ವಿಡಿಯೋದಲ್ಲಿ ಕಂಡುಬರುವ ವಿಭಿನ್ನ ಫ್ರೇಮ್‌ಗಳನ್ನು ಪರಿಶೀಲಿಸಿದೆ. ಇದರ ಅಸಲಿ ವಿಡಿಯೋದಲ್ಲಿನ ಶೀರ್ಷಿಕೆ ಪೋರ್ಚುಗೀಸ್ ಭಾಷೆಯಲ್ಲಿದೆ. ಅದನ್ನು Google ಅನುವಾದದ ಸಹಾಯದಿಂದ ಅನುವಾದಿಸಲಾಯಿತು. ಆಗ ಕಂಡು ಬಂದಿದ್ದು ಇದು ಬ್ರೆಜಿಲ್‌ನ ಪರಾನಾದ್ದು ಎಂದು. ಪರಾನಾದಲ್ಲಿರುವ ಪ್ರಾಜೆಕ್ಟ್ ಫಾಲ್ಕನ್ ವಿಮಾನಗಳು ಮತ್ತು ರಾಜ್ಯದ ರಿಮೋಟ್ ಪೈಲಟ್ ವಿಮಾನಗಳು ರಾತ್ರಿಯಲ್ಲಿ ಕಡಲತೀರಗಳಲ್ಲಿ ಭದ್ರತೆಯನ್ನು ಮೇಲ್ವಿಚಾರಣೆ ಮಾಡುತ್ತಿವೆ ಎಂದು ಅದರಲ್ಲಿ ತಿಳಿಸಲಾಗಿದೆ.
ಕಡಲತೀರದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳ ನಂತರ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ವಿಶೇಷ ಅಭಿಯಾನವನ್ನು ನಡೆಸಲಾಗುತ್ತದೆ. ಕಡಿಮೆ ಬೆಳಕಿನಿಂದಾಗಿ ಸಮುದ್ರದ ಪ್ರವಾಹಗಳು ಇದ್ದಕ್ಕಿದ್ದಂತೆ ಜನರನ್ನು ಆವರಿಸಿಕೊಳ್ಳುವುದರಿಂದ, ರಾತ್ರಿಯಲ್ಲಿ ನೀರಿಗೆ ಇಳಿಯುವುದನ್ನು ತಪ್ಪಿಸುವಂತೆ ಭದ್ರತಾ ಸಂಸ್ಥೆಗಳು ಪ್ರವಾಸಿಗರು ಮತ್ತು ಸ್ಥಳೀಯರಿಗೆ ಮನವಿ ಮಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮುಳುಗುವ ಅಪಾಯ ಹೆಚ್ಚಾಗುತ್ತದೆ. ಮದ್ಯ ಸೇವಿಸಿ ಟೈಟ್ ಆದರೆ, ಅದರ ಪ್ರಭಾವದಲ್ಲಿ ಸಮುದ್ರಕ್ಕೆ ಹೋಗುವುದನ್ನು ತಪ್ಪಿಸಲು ತಜ್ಞರು ಸಲಹೆ ನೀಡುತ್ತಾರೆ. ಕುಡಿದ ಮತ್ತಿನಲ್ಲಿ ನೀರು ಕುಡಿಯುವುದರಿಂದ ಸಮತೋಲನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ, ಅಪಘಾತಗಳ ಸಾಧ್ಯತೆ ಹೆಚ್ಚಾಗುತ್ತದೆ ಎನ್ನುವ ಕಾರಣ ಈ ಎಚ್ಚರಿಕೆ ನೀಡಲಾಗುತ್ತದೆ. ಪರಾನಾದ ಮಿಲಿಟರಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಸಂಪೂರ್ಣ ಜಾಗರೂಕತೆಯಿಂದಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ