Fact Check| ಜಗತ್ತಿನ ಅತಿ ಪುಟ್ಟ ಪಕ್ಷಿ ಹಮ್ಮಿಂಗ್‌ ಬರ್ಡ್‌ ನೋಡಿ!

Published : Nov 16, 2019, 10:25 AM ISTUpdated : Nov 16, 2019, 11:41 AM IST
Fact Check| ಜಗತ್ತಿನ ಅತಿ ಪುಟ್ಟ ಪಕ್ಷಿ ಹಮ್ಮಿಂಗ್‌ ಬರ್ಡ್‌ ನೋಡಿ!

ಸಾರಾಂಶ

ಮನುಷ್ಯನ ಉಗುರಿನ ಮೇಲೆ ನಿಂತಿರುವ ಪುಟ್ಟಪಕ್ಷಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದರೊಂದಿಗೆ ಇದು ಜಗತ್ತಿನ ಅತಿ ಚಿಕ್ಕ ಹಕ್ಕಿ ಹಮ್ಮಿಂಗ್‌ ಬರ್ಡ್‌ ಎಂದು ಹೇಳಲಾಗಿದೆ. ಇದು ನಿಜಾನಾ? ಈ ಫೋಟೋ ಹಿಂದಿನ ಸತ್ಯವೇನು? ಇಲ್ಲಿದೆ ವಿವರ

ನವದೆಹಲಿ[ನ.16]: ಮನುಷ್ಯನ ಉಗುರಿನ ಮೇಲೆ ನಿಂತಿರುವ ಪುಟ್ಟಪಕ್ಷಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದರೊಂದಿಗೆ ಇದು ಜಗತ್ತಿನ ಅತಿ ಚಿಕ್ಕ ಹಕ್ಕಿ ಹಮ್ಮಿಂಗ್‌ ಬರ್ಡ್‌ ಎಂದು ಹೇಳಲಾಗಿದೆ. ‘ಬ್ಯಾನ್‌ ಬಾಯ್‌ ಸಹೀದ್‌’ ಎನ್ನುವ ಫೇಸ್‌ಬುಕ್‌ ಬಳಕೆದಾರರು ಈ ಫೋಟೋವನ್ನು ಮೊದಲು ಪೋಸ್ಟ್‌ ಮಾಡಿದ್ದು ಬಂಗಾಳಿ ಭಾಷೆಯಲ್ಲಿ ‘ಜಗತ್ತಿನ ಅತಿ ಚಿಕ್ಕ ಪಕ್ಷಿ ಹಮ್ಮಿಂಗ್‌ ಬರ್ಡ್‌. ನಾನು ಮೊದಲ ಬಾರಿಗೆ ನೋಡಿದ್ದು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಸದ್ಯ ಇದೀಗ ವೈರಲ್‌ ಆಗುತ್ತಿದ್ದು 15000ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ.

ಆದರೆ ನಿಜಕ್ಕೂ ಇದು ಹಮ್ಮಿಂಗ್‌ ಬರ್ಡ್‌ ಹೌದೇ ಎಂದು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ನ್ಯೂಸ್‌ ರೂಮ್‌ ಪರಿಶೀಲನೆಗೆ ಮುಂದಾದಾಗ ಇದು ಹಮ್ಮಿಂಗ್‌ ಬರ್ಡ್‌ ಅಲ್ಲ, ಕಲಾವಿದರೊಬ್ಬರ ಕೈಚಳಕದಲ್ಲಿ ರಚನೆಯಾದ ಕಲೆ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಇದರ ಮೂಲದ ಬಗ್ಗೆ ಉತ್ತರ ಲಭಿಸಿದ್ದು, ಫೋಟೋ ವೆಬ್‌ಸೈಟ್‌ವೊಂದರಲ್ಲಿ ಇದೇ ಫೋಟೋ ಕಂಡು ಬಂದಿದೆ. ಅದರಲ್ಲಿ ‘ಮಲಿನಿಕ್‌ ಮಿನಿಯೇಚ​ರ್ಸ್’ ಎಂದು ಫೋಟೋಕ್ರೆಡಿಟ್‌ ನೀಡಲಾಗಿದೆ.

ಇದರ ಜಾಡು ಹಿಡಿದು ಹುಡುಕ ಹೊರಟಾಗ ವೈರಲ್‌ ಆಗಿರುವ ಫೋಟೋದ ಕಲೆಗಾರ್ತಿ ಅಮೆರಿಕ ಮೂಲಕ ಇನಾ ಎಂದು ತಿಳಿದುಬಂದಿದೆ. ಇನಾ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಫೋಟೋವನ್ನು ಪೋಸ್ಟ್‌ ಕೂಡ ಮಾಡಿದ್ದಾರೆ. ಅವರು ತಮ್ಮ ಹೆಸರು ಇನಾ. ಬಲ್ಗಾರಿಯಾ ಮೂಲದವರಾಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸುತ್ತಿರುವುದಾಗಿ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.

ಜಗತ್ತಿನ ಅತಿ ಪುಟ್ಟಪಕ್ಷಿಗಳೆಂದರೆ ಹಮ್ಮಿಂಗ್‌ ಬರ್ಡ್‌ ನಿಜ. ಅವು ಸಾಮಾನ್ಯವಾಗಿ 3-5 ಇಂಚು ಸುತ್ತಳತೆ ಇರುತ್ತವೆ. ಅವುಗಳಲ್ಲಿ ಅತಿ ಚಿಕ್ಕದು 2 ಇಂಚು ಸುತ್ತಳತೆ ಹೊಂದಿದೆ. ಆದರೆ ಫೋಟೋದಲ್ಲಿರುವುದು ಹಮ್ಮಿಂಗ್‌ ಬರ್ಡ್‌ ಅಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?