Fact Check: ಎದೆಹಾಲಿನ ಬಗ್ಗೆ ಸದ್ಗುರು ಜಗ್ಗಿ ನಗೆಪಾಟಲಿನ ಹೇಳಿಕೆ?

Kannadaprabha News   | Asianet News
Published : Feb 24, 2020, 10:29 AM ISTUpdated : Feb 25, 2020, 03:39 PM IST
Fact Check: ಎದೆಹಾಲಿನ ಬಗ್ಗೆ ಸದ್ಗುರು ಜಗ್ಗಿ ನಗೆಪಾಟಲಿನ ಹೇಳಿಕೆ?

ಸಾರಾಂಶ

‘ತಾಯಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ ಮತ್ತು ಆ ಮಕ್ಕಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣಾಗಿದ್ದರೆ ಆಗ ತಾಯಿಯ ಒಂದು ಸ್ತನ ಒಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ, ಇನ್ನೊಂದು ಸ್ತನ ಇನ್ನೊಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಹೇಳಿಕೆ ನೀಡಿದ್ದಾರೆ. ನಿಜನಾ ಈ ಸುದ್ದಿ? 

‘ತಾಯಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ ಮತ್ತು ಆ ಮಕ್ಕಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣಾಗಿದ್ದರೆ ಆಗ ತಾಯಿಯ ಒಂದು ಸ್ತನ ಒಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ, ಇನ್ನೊಂದು ಸ್ತನ ಇನ್ನೊಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಹೇಳಿಕೆ ನೀಡಿದ್ದಾರೆ. ಈ ಮನುಷ್ಯನನ್ನು ಸ್ತ್ರೀರೋಗತಜ್ಞರ ರಾಷ್ಟ್ರೀಯ ಸಮಾವೇಶದಲ್ಲಿ ಮಾತಾಡಲು ಕರೆದಿದ್ದರು’ ಎಂಬ ಟ್ವೀಟ್‌ ವೈರಲ್‌ ಆಗುತ್ತಿದೆ.

 

ಈ ಹೇಳಿಕೆಯನ್ನು ಗಮನಿಸಿ, ನಿಮಗೆ ಗೊತ್ತಿರುವ ವಿಷಯದ ಬಗ್ಗೆ ಮಾತ್ರ ಮಾತಾಡಬೇಕು. ಗೊತ್ತಿಲ್ಲದ ವಿಷಯದ ಬಗ್ಗೆ ಮಾತಾಡಲು ಹೋದರೆ ಹೀಗೇ ಆಗುತ್ತದೆ. ಎಷ್ಟೂಅಂತ ಸುಳ್ಳು ಹೇಳುತ್ತೀರಾ ಎಂದೆಲ್ಲ ನೇಟಿಜನ್‌ಗಳು ಸದ್ಗುರು ಅವರನ್ನು ಆಡಿಕೊಂಡು ನಕ್ಕಿದ್ದಾರೆ.

Fact Check| ಶಾಹೀನ್‌ ಬಾಗ್‌ ಹಿಂಭಾಗದಲ್ಲಿ ಕಾಂಡೋಮ್‌ಗಳ ರಾಶಿ!

ನಿಜಕ್ಕೂ ಸದ್ಗುರು ಹೀಗೆ ಹೇಳಿದ್ದರಾ ಎಂದು ಪರಿಶೀಲಿಸಿದಾಗ ಇದು 2017ರಲ್ಲಿ ದೆಹಲಿ ಐಐಟಿ ಕಾರ್ಯಕ್ರಮದಲ್ಲಿ ಅವರು ನೀಡಿದ್ದ ಹೇಳಿಕೆ ಹೌದೆಂಬುದು ಗೊತ್ತಾಗಿದೆ. ಆದರೆ, ಅವರು ಈ ಹೇಳಿಕೆಯ ಜೊತೆಗೆ, ತಾಯಿ ಗಂಡುಮಗುವಿಗೆ ಜನ್ಮ ನೀಡಿದರೆ ಆಕೆಯ ಸ್ತನ ಒಂದು ರೀತಿಯ ಪೋಷಕಾಂಶವಿರುವ ಹಾಲನ್ನು ಉತ್ಪತ್ತಿ ಮಾಡುತ್ತದೆ, ಹೆಣ್ಣುಮಗುವಿಗೆ ಜನ್ಮ ನೀಡಿದರೆ ಇನ್ನೊಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ. ನಿಸರ್ಗದ ಸೌಂದರ್ಯವಿದು ಎಂದೂ ಅವರು ಹೇಳಿದ್ದರು. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ ಎಂದು ವೈದ್ಯರೂ ತಿಳಿಸಿದ್ದಾರೆ. ಆದರೆ, ಅದರ ನಂತರ ಸದ್ಗುರು ಹೇಳಿದ ಅವಳಿ ಮಕ್ಕಳ ಕುರಿತ ಮಾಹಿತಿಯನ್ನು ವೈದ್ಯರು ದೃಢಪಡಿಸಿಲ್ಲ. ಹೀಗಾಗಿ ಸದ್ಗುರು ಕುರಿತಾದ ವೈರಲ್‌ ಹೇಳಿಕೆ ಅರ್ಧ ಸತ್ಯ, ಅರ್ಧ ಸುಳ್ಳು.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌