ಕೇರಳದಲ್ಲಿ 14 ಬುಲೆಟ್‌ ಪತ್ತೆ: ಪಾಕಿಸ್ತಾನದವು ಎಂಬ ಶಂಕೆ!

Published : Feb 24, 2020, 10:24 AM IST
ಕೇರಳದಲ್ಲಿ 14 ಬುಲೆಟ್‌ ಪತ್ತೆ: ಪಾಕಿಸ್ತಾನದವು ಎಂಬ ಶಂಕೆ!

ಸಾರಾಂಶ

ಕೇರಳದಲ್ಲಿ 14 ಬುಲೆಟ್‌ ಪತ್ತೆ: ಪಾಕಿಸ್ತಾನದವು ಎಂಬ ಶಂಕೆ| ಗುಂಡಿನ ಮೇಲೆ ‘ಪಿಒಎಫ್‌’ ಎಂಬ ಅಕ್ಷರ| ಇದು ಪಾಕಿಸ್ತಾನ ಆರ್ಡಿನನ್ಸ್‌ ಫ್ಯಾಕ್ಟರಿ ಸಂಕೇತ?

ತಿರುವನಂತಪುರ[ಫೆ.24]: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 14 ವಿದೇಶೀ ನಿರ್ಮಿತ ಸಜೀವ ಗುಂಡುಗಳು ಪತ್ತೆಯಾಗಿವೆ. ಇವು ಪಾಕಿಸ್ತಾನಿ ನಿರ್ಮಿತ ಗುಂಡುಗಳು ಆಗಿರಬಹುದು ಎಂಬ ಶಂಕೆ ಇದೆ. ಹೀಗಾಗಿ ತನಿಖೆಯನ್ನು ಕೇರಳ ಸರ್ಕಾರವು ಕೇರಳ ಪೊಲೀಸರ ಭಯೋತ್ಪಾದಕ ನಿಗ್ರಹ ದಳಕ್ಕೆ ತನಿಖೆಯನ್ನು ಒಪ್ಪಿಸಿದೆ. ಇದೇ ವೇಳೆ, ತನಿಖೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ಮತ್ತು ಇತರ ರಾಜ್ಯಗಳ ಸಹಕಾರವನ್ನು ಕೂಡ ಬಯಸಲಾಗಿದೆ.

ಪ್ಯಾಕ್‌ನಲ್ಲಿ ಇಡಲಾಗಿದ್ದ 14 ಗುಂಡುಗಳನ್ನು ಕೊಲ್ಲಂ ಜಿಲ್ಲೆಯ ಕುಳತುಪ್ಪುಳ ಎಂಬಲ್ಲಿ ಇಬ್ಬರು ನಾಗರಿಕರು ಶನಿವಾರ ಪತ್ತೆ ಮಾಡಿದ್ದರು. ಭಾನುವಾರ ಸೇನಾ ಗುಪ್ತಚರ ಇಲಾಖೆಯ ಇಬ್ಬರು ಸದಸ್ಯರು ಇವುಗಳ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಇವು ವಿದೇಶೀ ನಿರ್ಮಿತ ಎಂದು ಕಂಡುಬಂದಿದೆ.

ಬುಲೆಟ್‌ಗಳ ಮೇಲೆ ಪಿಒಎಫ್‌ ಎಂದು ಬರೆಯಲಾಗಿದೆ. ಹೀಗಾಗಿ ಇವುಗಳನ್ನು ಪಾಕಿಸ್ತಾನ ಆರ್ಡಿನನ್ಸ್‌ ಫ್ಯಾಕ್ಟರಿ (ಪಿಒಎಫ್‌)ನಲ್ಲಿ ತಯಾರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ತನಿಖೆಯಲ್ಲಿ ಇತರ ರಾಜ್ಯಗಳ ಸಹಕಾರ ಬಯಸಲಾಗಿದೆ ಎಂದು ಕೇರಳ ಡಿಜಿಪಿ ಲೋಕನಾಥ್‌ ಬೆಹೆರಾ ಹೇಳಿದ್ದಾರೆ. ಆದರೆ ಯಾವ ರಾಜ್ಯಗಳೆಂದು ತಿಳಿಸಲಿಲ್ಲ. ಬಹುಶಃ ಕೇರಳಕ್ಕೆ ಹೊಂದಿಕೊಂಡಿರುವ ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರ ಸಹಕಾರ ಬಯಸಲಾಗಿದೆ ಎಂದು ಊಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌