Fact Check: ಬೇಯಿಸಿದ ಬೆಳ್ಳುಳ್ಳಿಯಿಂದ ಕರೋನಾ ವೈರಸ್‌ ಗುಣವಾಗುತ್ತೆ!

By Suvarna NewsFirst Published Feb 3, 2020, 9:10 AM IST
Highlights

ಚೀನಾದಲ್ಲಿ ಕರೋನಾ ವೈರಸ್‌ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ 259 ಜನರು ಸಾವನ್ನಪ್ಪಿದ್ದು, 11,300 ಜನರಿಗೆ ಸೋಂಕು ತಗುಲಿದೆ. ಬರೀ ಚೀನಾ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಿಗ ಕರೋನಾ ವೈರಸ್‌ ದಾಟಿರುವ ಲಕ್ಷಣಗಳು ಕಂಡುಬರುತ್ತಿವೆ.  ಬೇಯಿಸಿದ ಬೆಳ್ಳುಳ್ಳಿ ಸೇವಿಸಿದರೆ ಕರೋನಾ ವೈರಸ್‌ ಗುಣವಾಗುತ್ತದೆ ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

ಚೀನಾದಲ್ಲಿ ಕರೋನಾ ವೈರಸ್‌ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ 259 ಜನರು ಸಾವನ್ನಪ್ಪಿದ್ದು, 11,300 ಜನರಿಗೆ ಸೋಂಕು ತಗುಲಿದೆ. ಬರೀ ಚೀನಾ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಿಗ ಕರೋನಾ ವೈರಸ್‌ ದಾಟಿರುವ ಲಕ್ಷಣಗಳು ಕಂಡುಬರುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಕರೋನಾ ವೈರಸ್‌ನಿಂದ ಪಾರಾಗಲು ಇರುವ ವಿಧಾನಗಳ ಬಗ್ಗೆ ಸುದ್ದಿ ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಚರ್ಚೆಯಾಗುತ್ತಿವೆ.

Fact Check: ‘ಹಿಂದು’ ಪದ ಬಳಸದಂತೆ ಆದೇಶ ಹೊರಡಿಸಿದ ಗೃಹ ಇಲಾಖೆ!

ಈ ನಡುವೆ ಬೇಯಿಸಿದ ಬೆಳ್ಳುಳ್ಳಿ ಸೇವಿಸಿದರೆ ಕರೋನಾ ವೈರಸ್‌ ಗುಣವಾಗುತ್ತದೆ ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವೈರಲ್‌ ಆಗಿರುವ ಸಂದೇಶ ಹೀಗಿದೆ; ಎಲ್ಲರಿಗೂ ಒಂದು ಸಿಹಿಸುದ್ದಿ. ಬೇಯಿಸಿದ ಬೆಳ್ಳುಳ್ಳು ಚೀನಾದಲ್ಲಿ ಹರಡುತ್ತಿರುವ ಮಾರಣಾಂತಿಕ ಕರೋನಾ ವೈರಸ್‌ಅನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಚೀನಾದ ಹಿರಿಯ ವೈದ್ಯರೊಬ್ಬರು ಇದನ್ನು ಸಾಬೀತುಪಡಿಸಿದ್ದಾರೆ. ಹಲವಾರು ರೋಗಿಗಳಲ್ಲಿ ಇದು ಗುಣಾತ್ಮಕ ಪರಿಣಾಮ ಬೀರಿದೆ. ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ, ಬೆಳ್ಳುಳ್ಳಿ ಮತ್ತು ನೀರನ್ನು ಸೇವಿಸಿದಲ್ಲಿ ಒಂದು ರಾತ್ರಿ ಕಳೆಯುವುದರೊಳಗೆ ನೀವು ಅದರ ಪರಿಣಾಮವನ್ನು ಕಾಣುತ್ತೀರಿ’ ಎಂದಿದೆ.

Fact Check: ಅಷ್ಟಕ್ಕೂ ಆದಿತ್ಯ ರಾವ್ ಕಲ್ಲಡ್ಕ, ತೇಜಸ್ವಿ ಜತೆ ಇದ್ನಾ!?

ಬೂಮ್‌ ಲೈವ್‌ ಇದರ ಸತ್ಯಾಸತ್ಯವನ್ನು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಬೂಮ್‌ ಸೈಂಟಿಫಿಕ್‌ ಫೋರ್ಟಲ್‌ಗಳಲ್ಲಿ ಈ ಬಗ್ಗೆ ಹುಡುಕಿದಾಗ ಈ ಕುರಿತ ಯಾವುದೇ ವರದಿಗಳು ಲಭ್ಯವಾಗಿಲ್ಲ. ಆದರೆ ಕೆಲವು ವೆಬ್‌ಸೈಟ್‌ಗಳಲ್ಲಿ ಬೆಳ್ಳುಳ್ಳಿ ಶೀತವನ್ನು ಕಡಿಮೆ ಮಾಡುತ್ತದೆ ಎಂದಿದೆ ಅಷ್ಟೆ. ಅದರ ಹೊರತಾಗಿ ಕರೋನಾ ವೈರಸ್‌ ಗುಣಪಡಿಸುವ ಯಾವುದೇ ನಿರ್ದಿಷ್ಟಔಷಧಿ ಇನ್ನೂ ಕಂಡುಹಿಡಿದಿಲ್ಲ.

click me!